Asianet Suvarna News Asianet Suvarna News

ಅದೃಷ್ಟದ ‘ಪಚ್ಚೆಕಲ್ಲು’ ಆಸೆ ತೋರಿಸಿ ಉದ್ಯಮಿಗೆ ಗೆಳೆಯರಿಂದಲೇ ಉಂಡೇನಾಮ!

ಅದೃಷ್ಟದ ಪಚ್ಚೆ ಕಲ್ಲನ್ನು ಕಡಿಮೆ ಬೆಲೆಗೆ ಖರೀದಿಸಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಬಹುದು ಎಂದು ಆಮಿಷವೊಡ್ಡಿ ಉದ್ಯಮಿಯೊಬ್ಬರಿಂದ ₹52 ಲಕ್ಷ ಪಡೆದು ಅವರ ಸ್ನೇಹಿತರೇ ವಂಚಿಸಿದ್ದಾರೆ.

The businessman was defrauded by his friends at Bengaluru rav
Author
First Published Jan 6, 2024, 10:32 AM IST

ಬೆಂಗಳೂರು (ಜ.6) : ಅದೃಷ್ಟದ ಪಚ್ಚೆ ಕಲ್ಲನ್ನು ಕಡಿಮೆ ಬೆಲೆಗೆ ಖರೀದಿಸಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಬಹುದು ಎಂದು ಆಮಿಷವೊಡ್ಡಿ ಉದ್ಯಮಿಯೊಬ್ಬರಿಂದ ₹52 ಲಕ್ಷ ಪಡೆದು ಅವರ ಸ್ನೇಹಿತರೇ ವಂಚಿಸಿದ್ದಾರೆ.

ರಿಚ್ಮಂಡ್ ಟೌನ್ ನಿವಾಸಿ ಶೌಕತ್‌ ಆಲಿ ವಂಚನೆಗೆ ಒಳಗಾಗಿದ್ದು, ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆಲಿ ಸ್ನೇಹಿತರಾದ ಅಶ್ಪಾಕ್ ಬೇಗ್, ಶಾನವಾಜ್‌ ಮಿರ್ಜಾ ಹಾಗೂ ಸಾಜಿದ್ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖರಿಚಲಾಗಿದೆ. ಅದೃಷ್ಟದ ತರುವ ಪಚ್ಚೆ ಕಲ್ಲು ಎಂದು ಹೇಳಿ ಆಲಿಗೆ ಆತನ ಸ್ನೇಹಿತರೇ ಟೋಪಿ ಹಾಕಿದ್ದರು ಎನ್ನಲಾಗಿದೆ. 

ಕಿಲ್ಲರ್ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿ; ವೊಲ್ವೋ ಬಸ್. ಡಿಕ್ಕಿಯಾಗಿ ಬೈಕ್ ಸವಾರ ದುರ್ಮರಣ!

ಒಂದೂವರೆ ದಶಕಗಳಿಂದ ಆಲಿ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಪರಸ್ಪರ ಹಣಕಾಸು ವ್ಯವಹಾರ ಸಹ ನಡೆದಿತ್ತು. ಹೀಗಿರುವಾಗ ಕಳೆದ ಏಪ್ರಿಲ್‌ನಲ್ಲಿ ಆಲಿಗೆ ಕರೆ ಮಾಡಿದ ಸ್ನೇಹಿತರು, ನಮಗೆ ಪರಿಚಯವಿರುವ ವ್ಯಕ್ತಿ ಬಳಿ ಬೆಲೆ ಬಾಳುವ ಪಚ್ಚೆ ಕಲ್ಲು ಇದೆ. ಅದನ್ನು ಆತ ₹52 ಲಕ್ಷಕ್ಕೆ ಮಾರುತ್ತಿದ್ದಾನೆ. ನಾವೇ ಖರೀದಿಸಿದರೆ ಅದನ್ನು ₹1 ಕೋಟಿಗೆ ಮಾರಾಟ ಮಾಡಬಹುದು ಎಂದು ಹೇಳಿದ್ದರು. ಲಾಭದಾಸೆಗೆ ಆಲಿ ಸಹ ಡೀಲ್‌ಗೆ ಸಮ್ಮತಿ ಸೂಚಿಸಿದ್ದರು.

ಆನಂತರ ಹಂತ ಹಂತವಾಗಿ ಆಲಿಯಿಂದ ₹52 ಲಕ್ಷವನ್ನು ವಸೂಲಿ ಮಾಡಿದ ಆರೋಪಿಗಳು, ಬಳಿಕ ಪಚ್ಚೆ ಕಲ್ಲು ಕೊಡಲು ಏನೇನೂ ಸಬೂಬು ಹೇಳುತ್ತಿದ್ದರು. ಕೊನೆಗೆ ಪಚ್ಚೆ ಕಲ್ಲು ತೆಗೆದುಕೊಂಡು ಆಲಿ ಮನೆಗೆ ಹೋಗಿದ್ದ ಆರೋಪಿಗಳು, ಈ ಕಲ್ಲನ್ನು ಖರೀದಿಸಲು ವೈಟ್‌ಫೀಲ್ಡ್‌ಗೆ ಸ್ವಾಮೀಜಿಯೊಬ್ಬರು ಬಂದಿದ್ದಾರೆ ಎಂದು ಹೇಳಿ ಆಲಿಯನ್ನು ಹೊರಗೆ ಕರೆ ತಂದಿದ್ದರು. ನಂತರ ‘ಚೀನಾದ ಉದ್ಯಮಿ ಖರೀದಿಸುತ್ತಾರೆ. ಸದ್ಯ ರಾಜಸ್ಥಾನಕ್ಕೆ ವಿದೇಶಿ ಉದ್ಯಮಿ ಬಂದಿದ್ದು, ಅಲ್ಲಿ ಹೋಗಿ ಭೇಟಿ ಮಾಡಿ’ ಎಂದು ಸ್ವಾಮೀಜಿ ಹೇಳಿ ಕಳುಹಿಸಿದ್ದರು. ಇದನ್ನು ನಂಬಿದ ಉದ್ಯಮಿ, ಆರೋಪಿಗಳ ಜೊತೆಯಲ್ಲಿ ರಾಜಸ್ಥಾನಕ್ಕೆ ಪಚ್ಚೆ ಕಲ್ಲು ತೆಗೆದುಕೊಂಡು ಹೋಗಿದ್ದರು. 

ನಕಲಿ ಸಿಮ್ ಜಾಲಕ್ಕೆ ನೀವೂ ಸಿಲುಕಿರಬಹುದು; ಪತ್ತೆ ಹಚ್ಚಲು ಇಲ್ಲಿದೆ ಸಂಪೂರ್ಣ ಮಾಹಿತಿ

ಅಲ್ಲಿ ಒಂದು ತಿಂಗಳು ಹೋಟೆಲ್‌ನಲ್ಲಿ ಉಳಿದುಕೊಂಡು ಕೊನೆಗೊಂದು ದಿನ ಪಚ್ಚೆ ಕಲ್ಲು ಮಾರಾಟ ಮಾಡಿ ಹಣವನ್ನು ತೆಗೆದುಕೊಂಡು ಬರುವುದಾಗಿ ಉದ್ಯಮಿಗೆ ಹೇಳಿ ಬೆಂಗಳೂರಿಗೆ ಕಳುಹಿಸಿದ್ದರು. ಬಳಿಕ ಆರೋಪಿಗಳು ಮೊಬೈಲ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಅಂತಿಮವಾಗಿ ತಾನು ಮೋಸ ಹೋಗಿರುವುದು ಅರಿವಾಗಿ ಪೊಲೀಸರಿಗೆ ಆಲಿ ದೂರು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios