Asianet Suvarna News Asianet Suvarna News

ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಬಸ್ ಕ್ಲೀನರ್ ಆಗಿ ತಲೆಮರೆಸಿಕೊಂಡಿದ್ದ ರೌಡಿ ಅರೆಸ್ಟ್

ಹಳೇ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕುಣಿಗಲ್‌-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕ್ಲೀನರ್‌ ಆಗಿ ತಲೆಮರೆಸಿಕೊಂಡಿದ್ದ ರೌಡಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಂಪಿಗೆಹಳ್ಳಿಯ ಮಂಜುನಾಥ ಅಲಿಯಾಸ್ ಓ.ಸಿ.ಮಂಜ ಬಂಧಿತ ಆರೋಪಿ.

The accused who absconded without attending courtl was arrested by the CCB police at bengaluru rav
Author
First Published Dec 16, 2023, 11:26 AM IST

ಬೆಂಗಳೂರು (ಡಿ.16): ಹಳೇ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕುಣಿಗಲ್‌-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕ್ಲೀನರ್‌ ಆಗಿ ತಲೆಮರೆಸಿಕೊಂಡಿದ್ದ ರೌಡಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಂಪಿಗೆಹಳ್ಳಿಯ ಮಂಜುನಾಥ ಅಲಿಯಾಸ್ ಓ.ಸಿ.ಮಂಜ ಬಂಧಿತನಾಗಿದ್ದು, ಈತನ ಮೇಲೆ ನ್ಯಾಯಾಲಯವು ಬಂಧನ ವಾರೆಂಟ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ರೌಡಿಯ ಪತ್ತೆಗಿಳಿದ ಇನ್‌ಸ್ಪೆಕ್ಟರ್‌ ಬಾಲಾಜಿ ನೇತೃತ್ವದ ತಂಡವು, ಕೊನೆಗೆ ಕುಣಿಗಲ್‌-ಮಾಗಡಿ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್‌ನಲ್ಲಿ ಕ್ಲೀನರ್ ಆಗಿದ್ದ ಓಸಿ ಮಂಜನನ್ನು ಪತ್ತೆ ಹಚ್ಚಿದೆ.

ನಗರದೊಳಗೆ ಎಂಟ್ರಿ ಕೊಟ್ಟ ಜಿಂಕೆ ಅಪಘಾತಕ್ಕೆ ಬಲಿ; ಸಂಸದ ತೇಜಸ್ವಿ ಸೂರ್ಯ ಭೇಟಿ ಮಾಡಿದ ಗ್ರೀನ್ ಆರ್ಮಿ ಫೋರ್ಸ್ ತಂಡ

ಹಲವು ವರ್ಷಗಳಿಂದ ಕಾನೂನು-ಬಾಹಿರ ಚಟುವಟಿಕೆಗಳಲ್ಲಿ ಮಂಜ ನಿರತನಾಗಿದ್ದು, ಆತನ ಮೇಲೆ ಕೊಲೆ, ಕೊಲೆ ಯತ್ನ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಪುಂಡಾಟಿಕೆ ಮಾಡಿದ ಆರೋಪದಡಿ ಆರು ಪ್ರಕರಣಗಳು ದಾಖಲಾಗಿವೆ. ಈ ಕ್ರಿಮಿನಲ್ ಚರಿತ್ರೆ ಹಿನ್ನೆಲೆಯಲ್ಲಿ ಆತನ ಮೇಲೆ ಸಂಪಿಗೆಹಳ್ಳಿ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಆರು ತಿಂಗಳ ಹಿಂದೆ ಕೊಲೆ ಪ್ರಕರಣದಲ್ಲಿ ಜಾಮೀನು ಹೊರಬಂದ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಮಂಜ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ಮೇಲೆ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂಡೀಪುರ ಕಾಡಂಚಿನಲ್ಲಿ ಕುರಿಗಾಹಿಯನ್ನು ಎಳೆದೊಯ್ದು ತಿಂದು ಹಾಕಿದ ಹುಲಿ!

Follow Us:
Download App:
  • android
  • ios