ಹೊದವಾಡ ಬೊಳಿಬಾಣೆಯಲ್ಲಿ ಶುಕ್ರವಾರ ಭೀಕರ ರಸ್ತೆ ಅಪಘಾತದಲ್ಲಿ ನಾಪೋಕ್ಲಿನ ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಘಟನೆ ನಡೆದಿದೆ. ನಾಪೋಕ್ಲಿನ ಇಂದಿರಾ ನಗರ ನಿವಾಸಿ ದಿ.ರಾಜು-ಕಮಲಾ ದಂಪತಿ ಪುತ್ರ ಅಪ್ಪಾಜಿ (19) ಮೃತರು. ಈ ದುರಂತದಲ್ಲಿ ಮಡಿಕೇರಿ ಐಟಿಐ ವಿದ್ಯಾರ್ಥಿ ಮಾರಣಾಂತಿಕ ಗಾಯಗೊಂಡಿದ್ದಾನೆ.

ನಾಪೋಕ್ಲು (ಜೂ.10): ಹೊದವಾಡ ಬೊಳಿಬಾಣೆಯಲ್ಲಿ ಶುಕ್ರವಾರ ಭೀಕರ ರಸ್ತೆ ಅಪಘಾತದಲ್ಲಿ ನಾಪೋಕ್ಲಿನ ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಘಟನೆ ನಡೆದಿದೆ. ನಾಪೋಕ್ಲಿನ ಇಂದಿರಾ ನಗರ ನಿವಾಸಿ ದಿ.ರಾಜು-ಕಮಲಾ ದಂಪತಿ ಪುತ್ರ ಅಪ್ಪಾಜಿ (19) ಮೃತರು. ಈ ದುರಂತದಲ್ಲಿ ಮಡಿಕೇರಿ ಐಟಿಐ ವಿದ್ಯಾರ್ಥಿ ಮಾರಣಾಂತಿಕ ಗಾಯಗೊಂಡಿದ್ದಾನೆ.

ಅಪ್ಪಾಜಿ ನಾಪೋಕ್ಲಿನ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಪೆಟ್ರೋಲ್‌ ಬಂಕ್‌ ಸಿಬ್ಬಂದಿಯಾಗಿದ್ದು, ಶುಕ್ರವಾರ ಬೆಳಗ್ಗೆ ಬಂಕ್‌ನಲ್ಲಿ ಕರ್ತವ್ಯಕ್ಕೆ ಬಂದಿದ್ದ. ಬಳಿಕ ಅಪ್ಪಾಜಿ ಸ್ಕೂಟಿಯಲ್ಲಿ ಮಡಿಕೇರಿಯ ಐಟಿಐ ವಿದ್ಯಾರ್ಥಿ, 19ರ ಪ್ರಾಯದ ಸಂದೀಪ್‌ ಎಂಬಾತನನ್ನು ಕೂರಿಸಿಕೊಂಡು ನಾಪೋಕ್ಲಿನಿಂದ ಮೂರ್ನಾಡು ಕಡೆ ತೆರಳುತ್ತಿದ್ದ . ಇದೇ ವೇಳೆ ಮೂರ್ನಾಡಿನಿಂದ ಮಂಗಳೂರು ಕಡೆ ಹೊರಟಿದ್ದ ಕೊಂಡಗೇರಿಯ ಮಹಮದ್‌ ಮಿದಿಲಾಸ್‌ ಎಂಬವರು ಚಲಾಯಿಸುತ್ತಿದ್ದ ಆಲ್ಟೋ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಗಾಯಾಳುವನ್ನು ನಾಪೋಕ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ಬಳಿಕ, ಸುಳ್ಯಕ್ಕೆ ಸ್ಥಳಾಂತರಿಸಲಾಗಿದೆ.

ಕಾರು ಚಾಲಕ, ಕೊಂಡಗೇರಿಯ ಮಹಮದ್‌ ಮಿದಿಲಾಸ್‌ ಇನ್ನಿತರರು ಅಪಾಯದಿಂದ ಪಾರಾಗಿದ್ದಾರೆ. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಟ್‌ ಆ್ಯಂಡ್‌ ರನ್‌: ಆರೋಪಿ ವಶಕ್ಕೆ

ಕಾರ್ಕಳ: ಮಂಜರಪಲ್ಕೆ ಕೆದಿಂಜೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಘಟನೆಗೆ ಸಂಬಂಧಿಸಿ ಪರಾರಿಯಾದ ಲಾರಿ ಚಾಲಕನನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಕುಂದಾಪುರದ ಬಿ.ಸಿ. ರೋಡ್‌ ನಿವಾಸಿ ಲಾರಿ ಚಾಲಕ ಸುರೇಶ್‌ ಶೆಟ್ಟಿಅಪಘಾತವೆಸಗಿದ್ದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಲಾರಿ ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಚಾಲಕ ಸುರೇಶ್‌ ಶೆಟ್ಟಿ, ಲಾರಿಯನ್ನು ಅಡ್ಡದಾರಿಯಲ್ಲಿ ನಿಲ್ಲಿಸಿ ಯಾರಿಗೂ ತನ್ನ ಮೇಲೆ ಸುಳಿವು ಅನುಮಾನ ಸಿಗದಂತೆ ನೋಡಿಕೊಂಡಿದ್ದ ಎನ್ನಲಾಗಿದ್ದು ಬಳಿಕ ಕುಂದಾಪುರದ ಗ್ಯಾರೇಜ್‌ ಒಂದರಲ್ಲಿ ಲಾರಿಯನ್ನು ಸವೀರ್‍ಸ್‌ಗೆ ಇಟ್ಟಿದ್ದ.

ಭೀಕರ ರಸ್ತೆ ಅಪಘಾತ: ಖ್ಯಾತ ಪೋಷಕ ನಟ, ಸಹಾಯಕ ನಿರ್ದೇಶಕ ಶರಣ್ ರಾಜ್ ನಿಧನ

ಘಟನೆ ವಿವರ:

ಮೇ 25ರಂದು ರಾತ್ರಿ ಒಡಿಶಾ ಮೂಲದ ಲಕ್ಷ್ಮಣ್‌ ಮುರ್ಮು, ಘನಶ್ಯಾಮ್‌ ಮುರ್ಮು ಮತ್ತು ಕರಣ್‌ ಮುರ್ಮು ಎಂಬವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರ್ಕಳ ಕಡೆಗೆ ವೇಗವಾಗಿ ಸಾಗುತ್ತಿದ್ದ ಲಾರಿ, ಘನಶ್ಯಾಮ್‌ ಮತ್ತು ಕರಣ್‌ಗೆ ಡಿಕ್ಕಿ ಹೊಡೆದಿದೆ. ಘನಶ್ಯಾಮ್‌ ಮತ್ತು ಕರಣ್‌ಗೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ಕೂಡಲೇ ಸಮಾಜ ಸೇವಕ ಸುಪ್ರಿತ್‌ ಶೆಟ್ಟಿಕೆದಿಂಜೆ ಗಾಯಾಳುಗಳನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಘನಶ್ಯಾಮ್‌ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಆತ ದಾರಿ ಮಧ್ಯೆ ಮೃತಪಟ್ಟಿದ್ದ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಅಪಘಾತವೆಸಗಿದ ವಾಹನದೊಂದಿಗೆ ಚಾಲಕ ಪರಾರಿಯಾಗಿದ್ದು, ಆತನ ಪತ್ತೆ ಹಚ್ಚುವಲ್ಲಿ ಕಾರ್ಕಳ ಪೊಲೀಸರು ಇದೀಗ ಯಶಸ್ವಿಯಾಗಿದ್ದಾರೆ.

ಯಾದಗಿರಿಯಲ್ಲಿ ಭೀಕರ ರಸ್ತೆ ಅಪಘಾತ: 13 ಜನರಿಗೆ ಗಾಯ, 5 ಮಂದಿ ಸಾವು