Asianet Suvarna News Asianet Suvarna News

Crime News: ದೇವಸ್ಥಾನದಲ್ಲಿ ಕದ್ದು ಪರಾರಿಯಾಗಲು ಯತ್ನ; ಅನ್ಯಕೋಮಿನ ಕಳ್ಳರಿಗೆ ಜನರಿಂದ ಬಿತ್ತು ಗೂಸಾ

ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಕ್ಕೆಗೋಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಗಿಲ ಬೀಗ ಮುರಿದು ದೇವಸ್ಥಾನದಲ್ಲಿದ್ದ ನಗದು ಸಮೇತ ಮೌಲ್ಯಯುತ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರು ಸ್ಥಳೀಯರ ಕೈಯಲ್ಲಿ ತಗಲಾಕೊಂಡಿರೋ ಘಟನೆ ನಡೆದಿದೆ. 

Temple theft The thieves are arrested in bhatkal att uttarakannada rav
Author
First Published Feb 7, 2023, 2:31 PM IST

ಭರತರಾಜ್ ಕಲ್ಲಡ್ಕ,ಏಷಿಯಾನೆಟ್ ಸುವರ್ಣ ನ್ಯೂಸ್

ಉತ್ತರಕನ್ನಡ (ಫೆ.7): ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಕ್ಕೆಗೋಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಗಿಲ ಬೀಗ ಮುರಿದು ದೇವಸ್ಥಾನದಲ್ಲಿದ್ದ ನಗದು ಸಮೇತ ಮೌಲ್ಯಯುತ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರು ಸ್ಥಳೀಯರ ಕೈಯಲ್ಲಿ ತಗಲಾಕೊಂಡಿರೋ ಘಟನೆ ನಡೆದಿದೆ. 

ಆರೋಪಿಗಳಾದ ಇರ್ಫಾನ್ ಹಾಗೂ ಆರೀಫ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ಇವರು ಮೂಲತಃ ಶಿವಮೊಗ್ಗ ಟಿಪ್ಪು ನಗರ ನಿವಾಸಿಯಾಗಿದ್ದು, ಪ್ರಸ್ತುತ ಬೆಳಲಖಂಡದಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.

ನಿಧಿ ಆಸೆಗೆ ಪುರಾತನ ಕಾಲದ ಆಂಜನೇಯ ದೇವಾಲಯದ ಗರ್ಭಗುಡಿ ಅಗೆದ ದುಷ್ಕರ್ಮಿಗಳು!

ನಶೆಯಲ್ಲಿದ್ದ ಈ ಇಬ್ಬರು ಖತರ್ನಾಕ್ ಕಳ್ಳರು ರಾತ್ರಿ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ಇರುವ ಮುಟ್ಟಳಿ ಮತ್ತು ತಲಾನ ಗ್ರಾಮದ  ಜನರು ಪೂಜಿಸುವ ಶಕ್ತಿ ದೇವತೆ ಎಕ್ಕೆಗೋಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬೀಗವನ್ನು ಒಡೆದಿದ್ದರು. ಬಳಿಕ ದೇವಸ್ಥಾನದ ಹುಂಡಿಗಳನ್ನು ಒಡೆದು ಅಂದಾಜು ಸುಮಾರು 5,000 ರಿಂದ 5500 ರೂ. ಹಣ ಮತ್ತು ದೇವಸ್ಥಾನದ ಗಂಟೆಗಳು, ಕಾಲುದೀಪ ಮತ್ತು ದೇವರ ಹರಿವಾಣ ಇನ್ನಿತರ ವಸ್ತುಗಳನ್ನು ಕಳುವು ಮಾಡಿ ಚೀಲಗಳಲ್ಲ ತುಂಬಿಕೊಂಡು ದೇವಸ್ಥಾನ ಪಕ್ಕದಲ್ಲಿದ್ದ ಮರದ ಕೆಳಗಡೆ ಅವಿತು ಕುಳಿತಿದ್ದರು. 

ಸ್ಥಳೀಯ ನಿವಾಸಿ ತಿಮ್ಮಪ್ಪ ನಾಯ್ಕ ಎಂಬವರು ತೋಟಕ್ಕೆ ನೀರು ಬಿಟ್ಟು ಅದೇ ದಾರಿಯಲ್ಲಿ ಮನೆಗೆ ಬೈಕ್ ಮೇಲೆ ಸಾಗುತ್ತಿದ್ದ ವೇಳೆ ಅನುಮಾನಗೊಂಡು ಗಾಡಿ ಹೆಡ್ ಲೈಟನ್ನು ಕಳ್ಳರ ಮುಖದ ಮೇಲೆ ಬಿಟ್ಟು ನೋಡಿದ್ದರು. ಕಳ್ಳರ ಪಕ್ಕದಲ್ಲಿ ಗೋಣಿ ಚೀಲ ನೋಡಿ ಅನುಮಾನ ಗೊಂಡು ವಿಚಾರಿಸಿದಾಗ ಕಳ್ಳರು ತಿಮ್ಮಪ್ಪ ನಾಯ್ಕರ ಮೇಲೆ ಹಲ್ಲೆಗೆ ಯತ್ನಿಸಿದ್ದರು. 

ಕಳ್ಳರ ದಾಳಿಯಿಂದ ತಪ್ಪಿಸಿಕೊಂಡ ತಿಮ್ಮಪ್ಪ ನಾಯ್ಕರು ಸ್ಥಳೀಯರಿಗೆ ಸುದ್ದಿ ತಿಳಿಸಿದ್ದಾರೆ. ಅಕ್ಕ ಪಕ್ಕದಲ್ಲಿ‌ದ್ದ ಮನೆಯವರು ಅಗಮಿಸಿ ಕಳ್ಳರನ್ನು ಹಿಡಿಯಲು ಪ್ರಯತ್ನ ಮಾಡಿದಾಗ ಕಳ್ಳರು ತಾವು ತಂದಿದ್ದ ಬೈಕ್ ಸ್ಟಾರ್ಟ್ ಮಾಡಿ ಅವಸರದಲ್ಲಿ ಓಡಿ ಹೋಗಲೆತ್ನಿಸಿದ್ದರು. ಆದರೆ, ಬೈಕ್ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಸರಿಯಾಗಿ ಗೂಸಾ ತಿಂದಿದ್ದಾರೆ. 

Crime News: ನಿಧಿ ಆಸೆಗಾಗಿ ಐತಿಹಾಸಿಕ ಸಿದ್ದೇಶ್ವರ ದೇಗುಲ ಅಗೆದ ಕಳ್ಳರು!

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ 112 ಪೋಲಿಸ್ ವಾಹನ ಮತ್ತು ಗ್ರಾಮೀಣ ಠಾಣೆ ಪೋಲಿಸ್ ಆಗಮಿಸಿ ಕಳ್ಳರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಬಗ್ಗೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಸಂತೋಷ ಗೊಯ್ದಪ್ಪ ನಾಯ್ಕ  ದೂರು ನೀಡಿದ್ದು ಸಿ.ಪಿ.ಐ ಚಂದನ ಗೋಪಾಲ ಹಾಗೂ ಪಿ.ಎಸ್.ಐ ಶ್ರೀಧರ್ ನಾಯ್ಕ ತನಿಖೆ ಕೈಗೊಂಡಿದ್ದಾರೆ. 

Follow Us:
Download App:
  • android
  • ios