ದೇಗುಲ ಕಳವು ಪ್ರಕರಣ: ಖದೀಮರ ಬೆನ್ನುಬಿದ್ದ ಪೊಲೀಸರಿಗೆ ಒಂದಲ್ಲ, ಹನ್ನೆರಡು ದೇಗುಲ ಕಳ್ಳತನ ಪತ್ತೆ!

ದೇಗುಲದ ಹುಂಡಿ ಕಳವು ಪ್ರಕರಣದ ಬೆನ್ನತ್ತಿದ್ದ ಹೊಳೆಹೊನ್ನೂರು ಪೊಲೀಸರಿಗೆ ಒಂದಲ್ಲ, ಹನ್ನೆರಡು ದೇಗುಲ ಕಳುವು ಮಾಡಿದ ಪ್ರಕರಣ ಬಯಲಿಗೆ ಬಂದಿವೆ.

Temple theft case accused arrested in holehonnur police station at shivamogga rav

ಶಿವಮೊಗ್ಗ (ಜು 8) ದೇಗುಲದ ಹುಂಡಿ ಕಳವು ಪ್ರಕರಣದ ಬೆನ್ನತ್ತಿದ್ದ ಹೊಳೆಹೊನ್ನೂರು ಪೊಲೀಸರಿಗೆ ಒಂದಲ್ಲ, ಹನ್ನೆರಡು ದೇಗುಲ ಕಳುವು ಮಾಡಿದ ಪ್ರಕರಣ ಬಯಲಿಗೆ ಬಂದಿವೆ.

ಜಂಬರಗಟ್ಟೆ ಆಂಜನೇಯ ದೇವಸ್ಥಾನದ ಬಾಗಿಲು ಮುರಿದು ಚಿನ್ನಾಭರಣ ಮತ್ತು  ಹುಂಡಿಯ ಹಣ ದೋಚಲಾಗಿತ್ತು. ದೇಗುಲ ಕಳ್ಳತನ ಬಗ್ಗೆ ಜೂನ್ 16 ರಂದು  ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.  ಹೊಳೆ ಹೊನ್ನೂರು ಪಿಐ ಲಕ್ಷ್ಮಿಪತಿ, ನೇತೃತ್ವದಲ್ಲಿ ತಂಡ ರಚಿಸಿ ಖದೀಮರ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಹೊನ್ನಾಳಿ ತಾಲೂಕಿನ ರಾಂಪುರ ಗ್ರಾಮದ ರಘು ಅಲಿಯಾಸ್ ಚಿನ್ನು  ಡಿ.ಜೆ,  (26) ,  ಶಿವಮೊಗ್ಗ ತಾಲೂಕಿನ ತರಗನಹಳ್ಳಿ ಗ್ರಾಮದ ಮಣೀಕಂಠ ಅಲಿಯಾಸ್ ಮಣಿ ( 26) ಬಂಧಿತರು. 

 

ಚಿಕ್ಕಮಗಳೂರಲ್ಲಿ ಹೆಚ್ಚುತ್ತಿರುವ ಬೈಕ್ ಹೆಲ್ಮೆಟ್ ಕಳ್ಳತನ: ಬೈಕ್‌ ಸವಾರರ ಪೀಕಲಾಟ..!

ಬಂಧಿತರಿಂದ  32,000 ರೂಗಳ ಬೆಳ್ಳಿ ಮತ್ತು ಬಂಗಾರದ ಆಭರಣಗಳು ಹಾಗೂ  40,000  ರೂ ಮೌಲ್ಯದ  02 ದ್ವಿ ಚಕ್ರ ವಾಹನ ಸೇರಿದಂತೆ ಒಟ್ಟು 72,000ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸರು. ವಿಚಾರಣೆ ವೇಳೆ ಮತ್ತಷ್ಟು ಕಳ್ಳತನದ ಬಗ್ಗೆ ಬಾಯಿಬಿಟ್ಟಿರೋ ಆರೋಪಿಗಳು.

 ಹೊಳೆಹೊನ್ನೂರು ಠಾಣೆಯ 03, ಶಿವಮೊಗ್ಗ ಗ್ರಾಮಾಂತರ ಠಾಣೆಯ 01, ಹಾವೇರಿ ರಟ್ಟೆಹಳ್ಳಿ ಠಾಣೆಯ 03, ದಾವಣಗೆರೆ ಹೊನ್ನಾಳಿ ಠಾಣೆಯ 01, ಚನ್ನಗಿರಿ ಠಾಣೆಯ 01, ಸಂತೆಬೆನ್ನೂರು ಠಾಣೆಯ 01 ಪ್ರಕರಣ ಸೇರಿದಂತೆ *ಒಟ್ಟು 12 ದೇವಸ್ಥಾನ ಕಳ್ಳತನ ಪ್ರಕರಣಗಳು ಮತ್ತು ಚಿಕ್ಕಮಗಳೂರು ತರೀಕೆರೆ ಠಾಣೆಯ 01 ಬೈಕ್ ಕಳ್ಳತನ ಪ್ರಕರಣ ಸೇರಿ ಒಟ್ಟು 13 ಪ್ರಕರಣಗಳು ಪತ್ತೆಯಾಗಿವೆ.

 

2.5 ಕಿಮೀ ದೂರಕ್ಕೆ ₹400 ಕೇಳಿದ ಆಟೋ ಡ್ರೈವರ್; ಅಷ್ಟು ದುಡ್ಡು ಆಗಲ್ಲ ಅಂದಿದ್ದಕ್ಕೆ ಯುವಕನ ಮೊಬೈಲ್ ಕಸಿದು ಪರಾರಿ!

Latest Videos
Follow Us:
Download App:
  • android
  • ios