ತುಮಕೂರು: ದೇವಾಲಯ ಬಾಗಿಲು ಮುರಿದು 40 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, ನಗದು ಕದ್ದ ಖದೀಮರು..!
ಗ್ರಾಮದೊಳಗೇ ಇರುವ ದೇವಾಲಯದೊಳಗೆ ಕಳ್ಳರು ಕಳ್ಳತನ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಗ್ರಾಮಗಳಲ್ಲಿ ಕುರಿ, ಮೇಕೆ, ಕೊಬರಿ, ಅಡಿಕೆ ಕಳವು ಮಾಡುತ್ತಿರುವುದು ಬೆಳಕಿಗೆ ಬರುತ್ತಿತ್ತು. ಕೂಡಲೇ ಪೋಲಿಸರು ಎಚ್ಚೆತ್ತುಕೊಂಡು ಕಳ್ಳರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು
ತುರುವೇಕೆರೆ(ಜೂ.06): ದೇವಾಲಯದ ಬಾಗಿಲು ಮುರಿದು ದೇವಿಗೆ ಹಾಕಲಾಗುತ್ತಿದ್ದ ಸುಮಾರು 40 ಗ್ರಾಂ ನಷ್ಟು ಚಿನ್ನದ ಆಭರಣ, ಒಂದು ಕೆಜಿ ಬೆಳ್ಳಿ, ಹುಂಡಿಯಲ್ಲಿನ 50, 000 ರು. ಕಳ್ಳತನ ಮಾಡಿದ ಘಟನೆ ತಾಲೂಕಿನ ಮುದ್ದನಹಳ್ಳಿ ಹೊಸೂರಿನ ದೊಡ್ಡಮ್ಮದೇವಿ ದೇವಾಲಯದಲ್ಲಿ ನಡೆದಿದೆ.
ದೇವಾಲಯದೊಳಗಿದ್ದ ಬೀರು ಒಡೆದು ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಕಳ್ಳರು ಒಂದೇ ದಿನ ಇನ್ನೂ ಮೂರ್‍ನಾಲ್ಕು ದೇವಾಲಯ ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿದೆ. ದೇವಾಲಯದ ಅಧ್ಯಕ್ಷ ನಿರಂಜನ್ ತುರುವೇಕೆರೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಲೈಂಗಿಕ ಕಿರುಕುಳ ನೀಡಿದ ಆರೋಪ: ಪುರಸಭೆ ಅಧ್ಯಕ್ಷೆ ಪತಿಗೆ ಮಹಿಳೆಯರಿಂದ ಥಳಿತ..!
ಗ್ರಾಮದೊಳಗೇ ಇರುವ ದೇವಾಲಯದೊಳಗೆ ಕಳ್ಳರು ಕಳ್ಳತನ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಗ್ರಾಮಗಳಲ್ಲಿ ಕುರಿ, ಮೇಕೆ, ಕೊಬರಿ, ಅಡಿಕೆ ಕಳವು ಮಾಡುತ್ತಿರುವುದು ಬೆಳಕಿಗೆ ಬರುತ್ತಿತ್ತು. ಕೂಡಲೇ ಪೋಲಿಸರು ಎಚ್ಚೆತ್ತುಕೊಂಡು ಕಳ್ಳರನ್ನು ಪತ್ತೆ ಹಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.