Asianet Suvarna News Asianet Suvarna News

ಕೋಟಿ ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಯಾರನ್ನೋ ಕೊಲೆ ಮಾಡಿ ತಾನೇ ಸತ್ತಂತೆ ಬಿಂಬಿಸಿದ ಸರ್ಕಾರಿ ಉದ್ಯೋಗಿ..!

ಸತ್ತಿದ್ದಾರೆ ಎಂದು ಬಿಂಬಿತರಾದ ವ್ಯಕ್ತಿಯೇ ಈಗ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಈ ಆರೋಪಿ ತೆಲಮಗಾಣ ಸೆಕ್ರೆಟರಿಯೆಟ್‌ ಕಚೇರಿಯ ಉದ್ಯೋಗಿ.

telangana secretariat staffer stages own death for rs 6 crore insurance ash
Author
First Published Jan 18, 2023, 12:52 PM IST

ಹಣ ಅಂದ್ರೆ ಹೆಣವೂ ಬಾಯಿಬಿಡುತ್ತೆ ಅನ್ನೋ ಮಾತಿದೆ. ಅದೇ ರೀತಿ, ಹಣಕ್ಕಾಗಿ ಯಾರ್ಯಾರೋ ಏನೇನೋ ಮಾಡುತ್ತಾರೆ. ಇಲ್ಲೊಬ್ಬರು ಸರ್ಕಾರಿ ಉದ್ಯೋಗಿ ಕೋಟ್ಯಂತರ ರೂ. ಇನ್ಶೂರೆನ್ಸ್‌ ಹಣಕ್ಕಾಗಿ ತಾನು ಸತ್ತಿದ್ದೇನೆ ಎಂದು ಜನರು ನಂಬಲಿ ಎಂದು ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದಾರೆ. ಆದರೂ, ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆ ಸತ್ತಿದ್ದಾರೆ ಎಂದು ಬಿಂಬಿತರಾದ ವ್ಯಕ್ತಿಯೇ ಈಗ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಈ ಆರೋಪಿ ತೆಲಮಗಾಣ ಸೆಕ್ರೆಟರಿಯೆಟ್‌ ಕಚೇರಿಯ ಉದ್ಯೋಗಿ. ಅನೇಕ ವಿಚಿತ್ರ ತಿರುವುಗಳನ್ನು ಪಡೆದಿರುವ ಈ ಸುದ್ದಿ ಏನು ಅನ್ನೋ ವಿವರ ನೀವು ತಿಳಿದುಕೊಳ್ಳಲೇಬೇಕು.. 

ತನ್ನ ಕಾರಿಗೆ (Car) ಬೆಂಕಿ (Fire) ಹಚ್ಚಿ, ತಾನು ಸತ್ತಂತೆ ಬಿಂಬಿಸಿದ (Fakes Death) ಸರ್ಕಾರಿ ಉದ್ಯೋಗಿ (Government Employee) ಈಗ ಕೊಲೆ ಆರೋಪ (Murder Accused) ಎದುರಿಸುತ್ತಿದ್ದಾರೆ. ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಇನ್ಸೂರೆನ್ಸ್‌ ಹಣ (Insurance Money) ಲಪಟಾಯಿಸಲು ಅವರು ಈ ರೀತಿ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. ತೆಲಂಗಾಣದ (Telangana) ಮೇದಕ್‌ನಲ್ಲಿ (Medak) ಅಸಿಸ್ಟೆಂಟ್‌ ಸೆಕ್ಷನ್‌ ಅಧಿಕಾರಿಯಾಗಿರುವ ಎಂ. ಧರ್ಮಾ ನಾಯಕ್‌ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಅನ್ನೋ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಈ ಕೇಸ್‌ ವಿಚಿತ್ರ ತಿರುವು ಪಡೆದುಕೊಳ್ತಿದೆ ಅನ್ನೋ ಸಂಶಯ ಕಾಡಿತು. 8 ದಿನಗಳ ಹಿಂದೆ ಸುಟ್ಟು ಕರಕಲಾಗಿದ್ದ ಕಾರಿನ ಜತೆಗೆ ಮೃತದೇಹವೂ ದೊರೆತಿತ್ತು. ಆದರೆ, ಈ ಮೃತದೇಹ ಸರ್ಕಾರಿ ಅಧಿಕಾರಿಯದ್ದಲ್ಲ, ಯಾರೋ ಬಾಡಿಗೆ ಕಾರು ಚಾಲಕನದ್ದು ಎಂದು ಖಾಕಿ ಸಿಬ್ಬಂದಿ ಅನುಮಾನ ಪಡ್ತಿದ್ದಾರೆ.

ಎಂ. ಧರ್ಮಾ ನಾಯಕ್‌ ಬದುಕಿದ್ದಾರೆ ಎನ್ನುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜತೆಗೆ ಮಂಗಳವಾರ ಅವರನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಈಗ ಈ ಪ್ರಕರಣದ ಸಂಪೂರ್ಣ ಕಥೆಯನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡವನ್ನೇ ರಚಿಸಿದೆ. ಜನವರಿ 9 ರಂದು ಮೇದಕ್‌ ಜಿಲ್ಲೆಯ ವೆಂಕಟಾಪುರ ಎಂಬಲ್ಲಿ ಹಾಲು ಮಾರುವವರು ಕಾರು ಸುಟ್ಟು ಕರಕಲಾಗಿರುವುದನ್ನು ಗ್ರಾಮಸ್ಥರಿಗೆ ಎಚ್ಚರಿಸಿದ್ದಾರೆ. ಬಳಿಕ, ರಸ್ತೆ ಬದಿ ಕಣಿವೆಗೆ ಬಿದ್ದು ಬೆಂಕಿ ಹೊತ್ತಿಕೊಂಡು ಕಾರು ಚಲಾಯಿಸುತ್ತಿದ್ದವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. 

ಆದರೆ, ಕಾರಿನಲ್ಲಿ ಪೆಟ್ರೋಲ್‌ ಬಾಟಲ್‌ ಹಾಗೂ ನಾಯಕ್‌ ಎಂಬುವರ ಬಟ್ಟೆ ಹಾಗೂ ಐಡಿ ಕಾರ್ಡ್‌ ದೊರೆತ ಬಳಿಕ ಮತ್ತು ಕಾರು ಸುಟ್ಟಿದ್ದರೂ ಈ ವಸ್ತುಗಳು ಸುಡದೆ ಇದ್ದದ್ದನ್ನು ನೋಡಿ ಇದು ಅಪಘಾತವಲ್ಲ ಎಂದು ಪೊಲೀಸರಿಗೆ ಅನುಮಾನ ಬಂತು. ಕಾಲಿನ ಸ್ವಲ್ಪ ಭಾಗ ಹೊರತುಪಡಿಸಿ ದೇಹ ಸಂಪೂರ್ಣವಾಗಿ ಸುಟ್ಟುಹೋಗಿದ್ದ ಕಾರಣ ಇದು ನಾಯಕ್‌ ಅವರದ್ದೇ ಮೃತದೇಹ ಎಂದು ಅವರ ಕುಟುಂಬ ಅವರ ಅಂತ್ಯಕ್ರಿಯೆಯನ್ನೂ ಮಾಡಿದೆ.. ಆದರೆ, ಸಿಸಿಟಿವಿ ದೃಶ್ಯಾವಳಿ ನೋಡಿದ ಬಳಿಕ ನಾಯಕ್‌ ಅವರನ್ನು ಹೋಲುವ ಮತ್ತೊಬ್ಬ ವ್ಯಕ್ತಿ ಕಂಡುಬಂದಿದ್ದಾರೆ. 

ಈ ಹಿನ್ನೆಲೆ ನಾಯಕ್‌ ಸತ್ತಿಲ್ಲ, ಡೆಡ್‌ ಬಾಡಿ ಮತ್ತೊಬ್ಬರದ್ದು ಎಂದು ಪೊಲೀಸರು ಬಳಿಕ ಅನುಮಾನ ವ್ಯಕ್ತಪಡಿಸಿದ್ದಾರೆ. ನಾಯಕ್ ಅವರ ಹೆರಲ್ಲಿ ಅನೇಕ ಇನ್ಶೂರೆನ್ಸ್ ಪಾಲಿಸಿಗಳಿದ್ದು, ಈ ಹಿನ್ನೆಲೆ ಅವರ ಕುಟುಂಬವೂ ಈ ಪ್ರಕರಣದ ಹಿಂದಿದ್ಯಾ ಎಂದೂ ಪೊಲೀಸರು ತನಿಖೆ ಮಾಡ್ತಿದ್ದಾರೆ. ಇನ್ಶೂರೆನ್ಸ್‌ ಹಣಕ್ಕಾಗಿ ಯಾರನ್ನೋ ಸಾಯಿಸಿ ಹಾಗೂ ಕುಟುಂಬವೂ ಇದು ನಾಯಕ್‌ ಅವರದ್ದೇ ಹೆಣ ಎಂದು ಬೇಕಂತಲೇ ಹೇಳಿಕೊಂಡು ಅಂತ್ಯಸಂಸ್ಕಾರ ನಡೆಸಿದ್ಯಾ ಎಂದೂ ಶಂಕೆ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios