ಮೈಸೂರು: ನೆರೆಮನೆಯವನ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿ ಆತ್ಮಹತ್ಯೆ
ಎಂದಿನಂತೆ ಲವಲವಿಕೆಯಿಂದ ಇದ್ದ ರೂಪಾ ಸಂಜೆ 4ರ ಸಮಯದಲ್ಲಿ ಅಡುಗೆ ಮನೆ ಹಿಂಭಾಗ ಮರದ ತೊಲೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ಬೆಟ್ಟದಪುರ ಠಾಣೆಯಲ್ಲಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ ಮೃತಳ ತಂದೆ ಹಾಲಯ್ಯ
ರಾವಂದೂರು(ಡಿ.26): ಅತಿಥಿ ಶಿಕ್ಷಕಿಯೊಬ್ಬರು ನೆರೆಮನೆಯವನ ಕಿರುಕುಳಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ನಂದೀಪುರ ಗ್ರಾಮದಲ್ಲಿ ನೆಡೆದಿದೆ.
ನಂದಿಪುರ ಗ್ರಾಮದ ನಿವಾಸಿ ಹಾಲಯ್ಯ ಎಂಬವರ ದ್ವಿತೀಯ ಪುತ್ರಿ ರೂಪಾ (26) ಆತ್ಮಹತ್ಯೆಗೆ ಶರಣಾಗಿರುವವರು, ಈಕೆ ಎಂ.ಎ, ಬಿ.ಎಡ್ ವಿದ್ಯಾಭ್ಯಾಸ ಮಾಡಿದ್ದು, ರಾವಂದೂರು ಗ್ರಾಮದ ಕೆ,ಪಿ,ಎಸ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಇದೆ ನಂದಿಪುರ ಗ್ರಾಮದ ಎಂ.ಕೆ. ಕಾರ್ತಿಕ್ ಎಂಬಾತ ರೂಪಾಳನ್ನು ನಾನು ಹಣ ನೀಡಿದ್ದು ನನ್ನೇ ನೀನು ಪ್ರೀತಿಸಬೇಕು ಎಂದು ಆಗಾಗ್ಗ ಪೀಡಿಸುತಿದ್ದು, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ಡಿ. 24 ಮಧ್ಯಾಹ್ನ 1.30ರ ಸಮಯದಲ್ಲಿ ನಾನು ಮತ್ತು ನನ್ನ ಮೊದಲನೇ ಮಗಳು ರೇಖಾಳ ಕೂಡಿ ಆಡು ಮೇಯಿಸಲೆಂದು ಜಮೀನಿಗೆ ತೆರಳಿದ್ದೇವು, ಎಂದಿನಂತೆ ಲವಲವಿಕೆಯಿಂದ ಇದ್ದ ರೂಪಾ ಸಂಜೆ 4ರ ಸಮಯದಲ್ಲಿ ಅಡುಗೆ ಮನೆ ಹಿಂಭಾಗ ಮರದ ತೊಲೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ಮೃತಳ ತಂದೆ ಹಾಲಯ್ಯ ಬೆಟ್ಟದಪುರ ಠಾಣೆಯಲ್ಲಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಅಪಾರ್ಟ್ಮೆಂಟ್ ಟೆರೆಸ್ಸಿಂದ ಜಿಗಿದು ಜಿಮ್ ತರಬೇತುದಾರ ಆತ್ಮಹತ್ಯೆ
ನಿಶ್ಚಿತಾರ್ಥವಾಗಿತ್ತು- ಹಾಲಯ್ಯ ಅವರಿಗೆ ನಾಲ್ವರು ಮಕ್ಕಳಿದ್ದು, ಎರಡನೇ ಮಗಳು ರೂಪಾಳಿಗೆ ಕೆಲ ತಿಂಗಳ ಹಿಂದೆ ಕೊಣಸೂರು ಗ್ರಾಮದ ಯುವಕನೊಂದಿಗೆ ನಿಶ್ಚಿತಾರ್ಥ ನಡೆದಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡಿರು ಪೊಲೀಸರು ಶವಪರೀಕ್ಷೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.