ಗದಗ(ಮೇ.24):  ಕೊರೋನಾದಿಂದ ಗುಣಮುಖರಾಗಿದ್ದ ಶಿಕ್ಷಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಿನ್ನೆ(ಭಾನುವಾರ) ನಡೆದಿದೆ. ಮಹಾಂತೇಶ್ ಕುದರಿ (33) ಎಂಬುವರೇ ನೇಣೆಗೆ ಶರಣಾದ ದುರ್ದೈವಿ. 

ಮಹಾಂತೇಶ್ ಕುದರಿ ಅವರು ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ವಾಪಸ್‌ ಮನೆಗೆ ಬಂದಿದ್ದರು. ಆದರೆ, ಕೊರೋನಾ ಬಂದಿತ್ತು. ಮುಂದೆ ಏನಾಗುತ್ತೋ ಎಂದು ಮಹಾಂತೇಶ್ ಬಹಳ ಆತಂಕ ಗೊಂಡಿದ್ದರಂತೆ. ಕೊರೋನಾದಿಂದ ಗುಣಮುಖರಾಗಿದ್ದರೂ, ಖಿನ್ನತೆಯಿಂದ ಶಿಕ್ಷಕ ಮಹಾಂತೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗದಗ: ಡೆಡ್ಲಿ ಕೊರೋನಾಗೆ ಹೆದರಿ ಮಹಿಳೆ ಆತ್ಮಹತ್ಯೆ

ಕೊರೋನಾ ಬಂದ ನಂತರ ಏನಾದರೂ ಆಗಬಹುದು ಎಂದು ಸಂಬಂಧಿಕರ‌ ಜೊತೆಯೂ ಮಹಾಂತೇಶ್‌ ಮಾತನಾಡಿದ್ದರು ಎಂದು ತಿಳಿದು ಬಂದಿದೆ. ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ವಾಸವಿದ್ದ ಶಿಕ್ಷಕ ಮಹಾಂತೇಶ್‌ ನಿನ್ನೆ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾತ್ರಿ ಊಟ ಮಾಡಿ ಮಹಡಿಗೆ ತೆರಳಿ, ತಮ್ಮ ಸಾವಿಗೆ ತಾವೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ನರೇಗಲ್ಲ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona