ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಅಸಹ್ಯವಾಗಿ ಮುಟ್ತಿದ್ದ ಕಾಮುಕ ಶಿಕ್ಷಕ: ಪೋಷಕರಿಂದ ಧರ್ಮದೇಟು!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮನೆ ಪಾಠ ಹೇಳುತ್ತಿದ್ದ ಶಿಕ್ಷಕರೊಬ್ಬರನ್ನು ಬಂಧಿಸಲಾಗಿದೆ. ಆರೋಪಿ ಶಿಕ್ಷಕನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಹಲವು ಪೋರ್ನ್ ವಿಡಿಯೋಗಳು ಪತ್ತೆಯಾಗಿವೆ ಎಂದು ಸಂತ್ರಸ್ತೆಯ ಕುಟುಂಬದವರು ಹೇಳಿದ್ದಾರೆ.

teacher arrested for allegedly showing obscene videos to minor girl student in kanpur ash

ಕಾನ್ಪುರ (ಆಗಸ್ಟ್‌ 18, 2023): ಅಪ್ರಾಪ್ತ ಬಾಲಕಿಯರಿಗೆ ಟ್ಯೂಷನ್ ಕಲಿಸುವ ನೆಪದಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ಳನ್ನು ತೋರಿಸುತ್ತಿದ್ದ ಆರೋಪದ ಮೇಲೆ ಮನೆ ಪಾಠ ಹೇಳುತ್ತಿದ್ದ ಶಿಕ್ಷಕರೊಬ್ಬರನ್ನು ಬಂಧಿಸಲಾಗಿದೆ. ಅಲ್ಲದೆ ಹುಡುಗಿಯರನ್ನು ಈತ ಕೆಟ್ಟದಾಗಿ ಮುಟ್ಟುತ್ತಿದ್ದ ಎಂದೂ ಹೇಳಲಾಗಿದೆ. 

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮನೆ ಪಾಠ ಹೇಳುತ್ತಿದ್ದ ಶಿಕ್ಷಕರೊಬ್ಬರನ್ನು ಬಂಧಿಸಲಾಗಿದೆ. ಆರೋಪಿ ಶಿಕ್ಷಕನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಹಲವು ಪೋರ್ನ್ ವಿಡಿಯೋಗಳು ಪತ್ತೆಯಾಗಿವೆ ಎಂದು ಸಂತ್ರಸ್ತೆಯ ಕುಟುಂಬದವರು ಹೇಳಿದ್ದಾರೆ. ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಆರೋಪಿ ಶಿಕ್ಷಕ ಆಮೀರ್‌ನನ್ನು ಬಂಧಿಸಿದ್ದು,  ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸಂಗತಿಗಳು ಬಯಲಿಗೆ ಬಂದರೂ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ಇದನ್ನು ಓದಿ: ಈ ಕನ್ನಡಿ ಮುಂದೆ ನಿಂತವ್ರೆಲ್ಲ ಬೆತ್ತಲಾಗಿ ಕಾಣ್ತಾರಂತೆ: ನಾಸಾ ವಿಜ್ಞಾನಿಗಳಿಂದ್ಲೂ ಬಳಕೆ!

ಕಾನ್ಪುರದ ಚಮಂಗಂಜ್‌ನಲ್ಲಿ ವಾಸಿಸುವ ಕುಟುಂಬವೊಂದು  5 ಮತ್ತು 9 ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಹೆಣ್ಣುಮಕ್ಕಳಿಗೆ ಮನೆಯಲ್ಲಿ ಟ್ಯೂಷನ್ ಕಲಿಸಲು ಆಮೀರ್‌ ಎಂಬ ಶಿಕ್ಷಕನನ್ನು ನೇಮಿಸಿಕೊಂಡಿದೆ. ಬಹಳ ದಿನಗಳಿಂದ ಆತ ಮನೆಗೆ ಬರ್ತಿದ್ದ ಹಾಗೂ ಹುಡುಗಿಯರಿಬ್ಬರಿಗೂ ಪಾಠ ಹೇಳಿಕೊಡುತ್ತಿದ್ದ. ಇದೇ ವೇಳೆ ತನ್ನ ಮೊಬೈಲ್‌ನಲ್ಲಿ ಹುಡುಗಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸತೊಡಗಿದ. ಅಲ್ಲದೆ, ಅವರನ್ನು ಅಸಹ್ಯವಾಗಿ ಮುಟ್ತಿದ್ದ ಎಂದು ತಿಳಿದುಬಂದಿದೆ. 

ಮನೆಯವರಿಗೆ ದೂರು ನೀಡಿದ ಬಾಲಕಿಯರು
ಆಮೀರ್‌ನ ಈ ಕೃತ್ಯದ ಬಗ್ಗೆ ಇಬ್ಬರೂ ಹುಡುಗಿಯರು ತಮ್ಮ ಮನೆಯವರಿಗೆ ತಿಳಿಸಿದ್ದಾರೆ. ನಂತರ, ಅವರು ಆಮೀರ್‌ ಅವರ ಮೊಬೈಲ್ ಅನ್ನು ಪರಿಶೀಲಿಸಿದಾಗ, ಅದರಲ್ಲಿ ಅನೇಕ ಅಶ್ಲೀಲ ವಿಡಿಯೋಗಳು ಇದ್ದವು. ಮೊದಲು ಕುಟುಂಬಸ್ಥರು ಅಮೀರ್‌ಗೆ ಥಳಿಸಿ ನಂತರ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲಾ ಮಾಹಿತಿ ಪಡೆದು ಅಮೀರ್ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್‌: ಕಾರಣ ಹೀಗಿದೆ..

ಸಂತ್ರಸ್ತೆಯ ಕುಟುಂಬದ ಒತ್ತಾಯದ ಮೇರೆಗೆ ಪೊಲೀಸರು ಕಾಮುಕ ಶಿಕ್ಷಕ ಆಮೀರ್‌ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಡಿಸಿಪಿ ಅಶೋಕ್ ಕುಮಾರ್ ಸಿಂಗ್ ಹೇಳಿದ್ದಾರೆ. ಯಾವುದೇ ಸಂಗತಿಗಳು ಬಯಲಿಗೆ ಬಂದರೂ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಲುಲು ಮಾಲ್‌ ಮಹಿಳೆಯರ ಟಾಯ್ಲೆಟ್‌ 'ಕಳ್ಳ ಕಿಂಡಿ'ಯಲ್ಲಿ ಮೊಬೈಲ್‌ ಇಟ್ಟಿದ್ದ ಬುರ್ಖಾ ಧರಿಸಿದ್ದ ಟೆಕ್ಕಿ!

Latest Videos
Follow Us:
Download App:
  • android
  • ios