Asianet Suvarna News Asianet Suvarna News

ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್‌: ಕಾರಣ ಹೀಗಿದೆ..

ಬಾಲಕಿಯ ಪೋಷಕರ ನಡುವೆ ವೈವಾಹಿಕ ವಿವಾದ ಇದೆ. ಈ ಹಿನ್ನೆಲೆ, ಸುಳ್ಳು ಆರೋಪವೂ ಆಗಿರಬಹುದು ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. 

delhi high court grants bail to man accused of sexually assaulting daughter ash
Author
First Published Aug 17, 2023, 4:11 PM IST | Last Updated Aug 17, 2023, 4:11 PM IST

ದೆಹಲಿ (ಆಗಸ್ಟ್‌ 17, 2023): ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಗುವುದೇ ಕಷ್ಟ. ಅದ್ರಲ್ಲೂ, ಪೋಕ್ಸೋ ಪ್ರಕರಣಗಳ ಆರೋಪಿಗೆ ಜಾಮೀನು ಸಿಗುವುದು ಕಷ್ಟಸಾಧ್ಯ. ಆದರೂ, ದೆಹಲಿ ಹೈಕೋರ್ಟ್ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜಾಮೀನು ನೀಡಿದೆ. ಹಾಗೂ, ಈ ಬಗ್ಗೆ ಅಭಿಪ್ರಾಯವನ್ನೂ ಸೂಚಿಸಿದೆ. ಕೋರ್ಟ್‌ ಈ ತೀರ್ಪು ನೀಡಲು ಕಾರಣವೇನು ಗೊತ್ತಾ..? ಮುಂದೆ ಓದಿ..

ಬಾಲಕಿಯ ಪೋಷಕರ ನಡುವೆ ವೈವಾಹಿಕ ವಿವಾದ ಇದೆ. ಈ ಹಿನ್ನೆಲೆ, ಈ ಬಗ್ಗೆ ಕಣ್ಣು ಮುಚ್ಚಲು ಸಾಧ್ಯವಿಲ್ಲ ಮತ್ತು ಮಗಳಿಗೆ ಸುಳ್ಳು ಹೇಳಿಕೊಟ್ಟು ಈ ರೀತಿ ಆರೋಪ ಮಾಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದೂ ದೆಹಲಿ ಹೈಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಬಾಲಕಿ 4 ವರ್ಷಗಳಿಂದ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಎಫ್‌ಐಆರ್ ದಾಖಲಿಸುವಲ್ಲಿ ಹೆಚ್ಚಿನ ವಿಳಂಬವಾಗಿದೆ ಎಂದೂ ಹೈಕೋರ್ಟ್‌ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರು ಗಮನಿಸಿದ್ದಾರೆ. 

ಇದನ್ನು ಓದಿ: ಲುಲು ಮಾಲ್‌ ಮಹಿಳೆಯರ ಟಾಯ್ಲೆಟ್‌ 'ಕಳ್ಳ ಕಿಂಡಿ'ಯಲ್ಲಿ ಮೊಬೈಲ್‌ ಇಟ್ಟಿದ್ದ ಬುರ್ಖಾ ಧರಿಸಿದ್ದ ಟೆಕ್ಕಿ!

ತಾಯಿ ಮತ್ತು ತಂದೆಯ ಕಡೆಯಿಂದ ಅನೇಕ ಕ್ರಾಸ್ ಎಫ್‌ಐಆರ್‌ಗಳಿವೆ ಮತ್ತು ತಾಯಿಯ ಹಿಂದಿನ ದೂರುಗಳಲ್ಲಿ ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ "ಉಲ್ಲೇಖದ ಯಾವುದೇ ಅಂಶವಿಲ್ಲ" ಎಂದೂ ಹೈಕೋರ್ಟ್‌ ನ್ಯಾಯಮೂರ್ತಿಗಳು ಗಮನಿಸಿದ್ದಾರೆ. "ನಿಸ್ಸಂದೇಹವಾಗಿ, ಆರೋಪಗಳು ಗಂಭೀರವಾಗಿದೆ. ಆದರೆ ಸಂತ್ರಸ್ತೆಯ ಪೋಷಕರ ನಡುವೆ ವೈವಾಹಿಕ ವಿವಾದ ಬಾಕಿ ಉಳಿದಿದೆ ಎಂಬ ಅಂಶವನ್ನು ಈ ನ್ಯಾಯಾಲಯವು ಕಣ್ಣು ಮುಚ್ಚಲು ಸಾಧ್ಯವಿಲ್ಲ. ಈ ವಾಸ್ತವಿಕ ಹಿನ್ನೆಲೆಯಲ್ಲಿ, ಅಪ್ರಾಪ್ತ ಬಾಲಕಿಗೆ ತಾಯಿ ಸುಳ್ಳು ಹೇಳಿಕೊಟ್ಟು ದೂರು ನೀಡಿಸಿರಬಹುದು ಎಂದೂ ಕೋರ್ಟ್‌ ಅಭಿಪ್ರಾಯಪಟ್ಟಿದೆ. 
 
ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದ ತಂದೆ, ತನ್ನ ಮತ್ತು ತನ್ನ ಹೆಂಡತಿಯ ನಡುವೆ ವೈವಾಹಿಕ ಸಂಬಂಧದಲ್ಲಿ ಬಿರುಕು ಇತ್ತು ಮತ್ತು ಸುಮಾರು 15 ವರ್ಷ ವಯಸ್ಸಿನ ಹುಡುಗಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದರೆ, 10 ವರ್ಷ ವಯಸ್ಸಿನ ಅಪ್ರಾಪ್ತ ಮಗ ತನ್ನ ಆರೈಕೆಯಲ್ಲಿ ಮತ್ತು ವಶದಲ್ಲಿದ್ದಾನೆ. ಹಾಗೂ,  ಕ್ಷುಲ್ಲಕ ಮತ್ತು ಬೋಗಸ್ ದೂರುಗಳನ್ನು ದಾಖಲಿಸಲು ಸಹಾಯ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಂದಿಗೆ ತನ್ನ ಪತ್ನಿ ವಾಸಿಸುತ್ತಿದ್ದಾರೆ ಎಂದು ಅರ್ಜಿದಾರ ತಂದೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಚಾಕೊಲೇಟ್‌ ಕೊಡ್ಸೋದಾಗಿ ಹೇಳಿ 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ!

ಫೆಬ್ರವರಿ 21 ರಂದು ಅರ್ಜಿದಾರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. 2019-2022ರಲ್ಲಿ ಘಟನೆಗಳು ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ 2023ರಲ್ಲಿ ಮೊದಲ ಬಾರಿಗೆ ದೂರು ನೀಡಲಾಗಿದ್ದು, ಎಫ್‌ಐಆರ್‌ ದಾಖಲಾತಿಯಲ್ಲಿ ಸಾಕಷ್ಟು ವಿಳಂಬವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಮಲತಾಯಿ ಅಂದ್ರೆ ಹಿಂಗೇನಾ? ಬಾಲಕನಿಗೆ ಶಾಲೆಗೆ ಹೋಗದಂತೆ ತಡೆದು ತಂದೆಯಿಂದ ದೇಹದ ಹಲವೆಡೆ ಬರೆ ಹಾಕಿಸಿದ ಪಾಪಿ!

Latest Videos
Follow Us:
Download App:
  • android
  • ios