ಈ ಕನ್ನಡಿ ಮುಂದೆ ನಿಂತವ್ರೆಲ್ಲ ಬೆತ್ತಲಾಗಿ ಕಾಣ್ತಾರಂತೆ: ನಾಸಾ ವಿಜ್ಞಾನಿಗಳಿಂದ್ಲೂ ಬಳಕೆ!

ಜನರನ್ನು ನಗ್ನರನ್ನಾಗಿಸುವ ಮ್ಯಾಜಿಕ್ ಮಿರರ್ ಮಾರಾಟ ಮಾಡುವುದಾಗಿ ಭರವಸೆ ನೀಡಿ ಉತ್ತರ ಪ್ರದೇಶದ ಕಾನ್ಪುರ ಮೂಲದ 72 ವರ್ಷದ ವ್ಯಕ್ತಿಗೆ ವಂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. 

up man pays 9 lakh to buy mirror which made people appear nude gets cheated ash

ಭುವನೇಶ್ವರ (ಆಗಸ್ಟ್‌ 17, 2023): ವಂಚನೆ ಮಾಡಲು ಜನರು ನಾನಾ ರೀತಿ ದಾರಿಗಳನ್ನು ಕಂಡುಕೊಳ್ತಾರೆ. ವಂಚನೆಗೊಳಗಾಗುವ ಜನರು ಇರುವವರೆಗೆ ವಂಚಿಸುವವರ ಸಂಖ್ಯೆಯೂ ಹೆಚ್ಚಿರುತ್ತದೆ ಅನ್ನೋದಕ್ಕೆ ಈ ಲೇಖನವೂ ಒಂದು ಉದಾಹರಣೆ. ಜನರನ್ನು ನಗ್ನರನ್ನಾಗಿಸುವ 'ಮ್ಯಾಜಿಕ್ ಮಿರರ್' ಮಾರಾಟ ಮಾಡುವುದಾಗಿ ಭರವಸೆ ನೀಡಿ 72 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ವಂಚಿಸಲಾಗಿದೆ ಎಂದು ವರದಿಯಾಗಿದೆ.

ಹೌದು, ಜನರನ್ನು ನಗ್ನರನ್ನಾಗಿಸುವ 'ಮ್ಯಾಜಿಕ್ ಮಿರರ್' ಮಾರಾಟ ಮಾಡುವುದಾಗಿ ಭರವಸೆ ನೀಡಿ ಉತ್ತರ ಪ್ರದೇಶದ ಕಾನ್ಪುರ ಮೂಲದ 72 ವರ್ಷದ ವ್ಯಕ್ತಿಗೆ ವಂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪಶ್ಚಿಮ ಬಂಗಾಳದ ಮೂವರನ್ನು ನಯಪಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಸಂತ್ರಗಚಿಯ ಪಾರ್ಥ ಸಿಂಗ್ರೇ (46), ಉತ್ತರ 24 ಪರಗಣದ ಮೊಲಯ ಸರ್ಕಾರ್ (32) ಮತ್ತು ಕೋಲ್ಕತ್ತಾದ ಸುದೀಪ್ತ ಸಿನ್ಹಾ ರಾಯ್ (38) ಎಂದು ಗುರುತಿಸಲಾಗಿದೆ.

ಇದನ್ನು ಓದಿ: ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್‌: ಕಾರಣ ಹೀಗಿದೆ..

ದೂರುದಾರ ಅವಿನಾಶ್ ಕುಮಾರ್ ಶುಕ್ಲಾ ಅವರು ಇತ್ತೀಚೆಗೆ ಕಾನ್ಪುರದ ತನ್ನ ಸ್ನೇಹಿತ ವೀರೇಂದ್ರ ದುಬೆ ಮೂಲಕ ಆರೋಪಿಗಳ ಸಂಪರ್ಕಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ. ಆರೋಪಿಗಳು ಸಿಂಗಾಪುರದ ಪುರಾತನ ಉತ್ಪನ್ನಗಳೊಂದಿಗೆ ವ್ಯವಹರಿಸುವ ಸಂಸ್ಥೆಯೊಂದರ ಉದ್ಯೋಗಿಗಳಂತೆ ಪೋಸ್‌ ಕೊಟ್ಟಿದ್ದರು. ಮತ್ತು ದೂರುದಾರರಿಗೆ 2 ಕೋಟಿ ರೂ.ಗೆ ‘ಮ್ಯಾಜಿಕ್ ಮಿರರ್' ಅನ್ನು ಮಾರಾಟ ಮಾಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಇನ್ನು,  ಅವಿನಾಶ್ ಕುಮಾರ್ ಶುಕ್ಲಾ ಅವರ ವಿಶ್ವಾಸವನ್ನು ಗೆಲ್ಲಲು, ಆರೋಪಿಗಳು ಕೆಲ ವ್ಯಕ್ತಿಗಳನ್ನು ಸಮಪರ್ಕ ಮಾಡಿಸಿದ್ದಾರೆ. ಈ ವ್ಯಕ್ತಿಗಳು ಸಿಂಗಾಪುರದ ಕಂಪನಿಯಿಂದ ಮ್ಯಾಜಿಕ್ ಮಿರರ್ ಸೇರಿದಂತೆ ಅನೇಕ ಪುರಾತನ ಉತ್ಪನ್ನಗಳ ಹಿಂದಿನ ಖರೀದಿದಾರರು ಎಂದು ಅವರನ್ನು ನಂಬಿಸಿದ್ದರು. ಹಾಗೂ, ಖರೀದಿದಾರರಿಂದ ಕನ್ನಡಿಯನ್ನು ಖರೀದಿಸಲು ಭುವನೇಶ್ವರಕ್ಕೆ ಬರಲು ಅವಿನಾಶ್ ಕುಮಾರ್ ಶುಕ್ಲಾ ಅವರನ್ನು ಕೇಳಲಾಯಿತು. 

ಇದನ್ನೂ ಓದಿ: ಲುಲು ಮಾಲ್‌ ಮಹಿಳೆಯರ ಟಾಯ್ಲೆಟ್‌ 'ಕಳ್ಳ ಕಿಂಡಿ'ಯಲ್ಲಿ ಮೊಬೈಲ್‌ ಇಟ್ಟಿದ್ದ ಬುರ್ಖಾ ಧರಿಸಿದ್ದ ಟೆಕ್ಕಿ!

ಕೆಲವು ದಿನಗಳ ಹಿಂದೆ ಜಯದೇವ್ ವಿಹಾರ್ ಬಳಿಯ ಹೋಟೆಲ್‌ನಲ್ಲಿ ಅವರು ಭೇಟಿಯಾಗಿದ್ದು, ಅದಕ್ಕೂ ಮುನ್ನವೇ ಶುಕ್ಲಾ 9 ಲಕಷ್ ರೂ. ಪಾವತಿರುವುದು ತಿಳಿದುಬಂದಿದೆ. ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ, ಆರೋಪಿಗಳು ವಂಚಕರು ಎಂದು ಶುಕ್ಲಾ ಅರಿತುಕೊಂಡರು ಮತ್ತು ಹಣ ವಾಪಸ್‌ ಕೊಡುವಂತೆ ಒತ್ತಾಯಿಸಿದ್ದಾರೆ ಎಂದು ನಯಾಪಲ್ಲಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬಿಸ್ವರಂಜನ್ ಸಾಹೂ ಹೇಳಿದ್ದಾರೆ.

ಯುಎಸ್‌ನ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ವಿಜ್ಞಾನಿಗಳು ಈ ರೀತಿ ಕನ್ನಡಿ ಬಳಸುತ್ತಿದ್ದಾರೆ. ಇದನ್ನು ನೋಡಿದರೆ ಭವಿಷ್ಯದ ಬಗ್ಗೆ ತಿಳಿಯಬಹುದು ಎಮದೂ ಆರೋಪಿಗಳು ಶುಕ್ಲಾ ಅವರನ್ನು ಬಂಧಿಸಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಚಾಕೊಲೇಟ್‌ ಕೊಡ್ಸೋದಾಗಿ ಹೇಳಿ 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ!

Latest Videos
Follow Us:
Download App:
  • android
  • ios