Asianet Suvarna News Asianet Suvarna News

Bengaluru Road Accident :  ಊಟಕ್ಕೆ ತೆರಳಿದ್ದ ಕೌಶಿಕ್-ಸುಷ್ಮಾಗೆ ಮೃತ್ಯುವಾದ ಟ್ಯಾಂಕರ್

* ಟ್ಯಾಂಕರ್  ಡಿಕ್ಕಿ  ಬೈಕ್ ಸವಾರರಿಬ್ಬರ  ಸಾವು

* ಬನ್ನೇರುಘಟ್ಟ ಕೆಂಪನಾಯಕನಹಳ್ಳಿ ಅಕ್ವೇರಲ್ ಗಾರ್ಮೆಂಟ್ಸ್  ಬಳಿ ಘಟನೆ
 
* ಎ. ಎಂಸಿ ಕಾಲೇಜಿನ ಬಿ ಎಂ ಎಚ್ ವಿದ್ಯಾರ್ಥಿ ಕೌಶಿಕ್ ಹಾಗು ಸುಷ್ಮಾ ಮೃತ ದುರ್ದೈವಿಗಳು

* ಮೃತ ಕೌಶಿಕ್ ಹಾಗು ಸುಷ್ಮಾ ಬೆಂಗಳೂರಿನ ಸಾರಕ್ಕಿ‌ ನಿವಾಸಿಗಳು

tanker hits bike two students killed Bengaluru mah
Author
Bengaluru, First Published Dec 23, 2021, 4:37 PM IST

ಬೆಂಗಳುರು(ಡಿ. 23)  ಟ್ಯಾಂಕರ್  ಡಿಕ್ಕಿಯಾದ (Road Accident) ಪರಿಣಾಮ ಇಬ್ಬರು ದಾರುಣ ಸಾವು ಕಂಡಿದ್ದಾರೆ. ಬನ್ನೇರುಘಟ್ಟ (Bengaluru) ಕೆಂಪನಾಯಕನಹಳ್ಳಿ ಅಕ್ವೇರಲ್ ಗಾರ್ಮೆಂಟ್ಸ್ ಬಳಿ  ಅಪಘಾತ ಸಂಭವಿಸಿದೆ.   ಎ.ಎಂಸಿ ಕಾಲೇಜಿನ ಬಿ ಎಂ ಎಚ್ ವಿದ್ಯಾರ್ಥಿ ಕೌಶಿಕ್ ಹಾಗು ಸುಷ್ಮಾ ಮೃತ ದುರ್ದೈವಿಗಳು.

ಮೃತ ಕೌಶಿಕ್ ಹಾಗು ಸುಷ್ಮಾ ಬೆಂಗಳೂರಿನ ಸಾರಕ್ಕಿ‌ ನಿವಾಸಿಗಳು.  ಊಟ ಮುಗಿಸಿ  ವಾಪಸ್ ಬರುವ ವೇಳೆ ಟ್ಯಾಂಕರ್ ಡಿಕ್ಕಿಯಾಗಿದೆ. ಗಾಯಾಳುಗಳನ್ನು ಸಾರ್ವಜನಿಕರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಬ್ಬರು ಸಾವು ಕಂಡಿದ್ದಾರೆ ಅಪಘಾತ ನಂತರ  ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ಹೆದ್ದಾರಿಯಲ್ಲಿ ಅಪಘಾತ:  ಬೆಳಗಾವಿಯ ಹಿರೇಬಾಗೇವಾಡಿ  ಬಳಿ ಭೀಕರ ಅಪಘಾತವಾಗಿ ಮೂವರು ದಾರುಣ ಸಾವು ಕಂಡಿದ್ದರು. ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿತ್ತು.  ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ದುರ್ಘಟನೆ ನಡೆದಿತ್ತು.

ಯಲ್ಲಾಪುರದಿಂದ (Yellapur) ಬೆಳಗಾವಿಗೆ ಹೊರಟ್ಟಿದ್ದ ಕಾರಿನಲ್ಲಿದ್ದ ಯಲ್ಲಾಪುರದ ನಿವಾಸಿ ವಾಸಿಂ ಖಾನ್ (40), ಸಯ್ಯದ್ ಇಸ್ಮಾಯಿಲ್ (65) ಸುಶೀಲಾ ಫರ್ನಾಂಡಿಸ್ (60) ಸಾವನ್ನಪ್ಪಿದ್ದರು.

ಹೆಲಿಕಾಪ್ಟರ್ ಅಪಘಾತದ ಹಿಂದಿನ ಕತೆ

ಟ್ರಾಕ್ಟರ್ ಪಲ್ಟಿ ಕಾರ್ಮಿಕರಿಬ್ಬರ ಸಾವು:  ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಕಾರ್ಮಿಕರಿಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಕೂಲಿ‌ ಕೆಲಸ ಮುಗಿಸಿಕೊಂಡು ಟ್ರಾಕ್ಟರ್ ನಲ್ಲಿ ನಾಯ್ಕಲ್ ಗ್ರಾಮಕ್ಕೆ ಬರುತ್ತಿದ್ದರು.  ಈ ವೇಳೆ ಟ್ರಾಕ್ಟರ್ ಪಲ್ಟಿಯಾಗಿದ್ದು  ಪರವಿನ್ ಬೇಗಂ, ಮಾನಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ 13 ಜನ ಕಾರ್ಮಿಕರು ಘಟನೆಯಲ್ಲಿ ಗಾಯಗೊಂಡಿದ್ದರು.

ಮದುವೆಗೆ ಹೊರಟಿದ್ದವರು ಮಸಣಕ್ಕೆ:  ಸರ್ಕಾರಿ ಬಸ್ (KSRTC Bus) ಮತ್ತು ಕಾರಿನ (Car) ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದರು. ದಾವಣಗೆರೆ ಸವಳಂಗ ಬಳಿ   ಕೆ.ಎಸ್.ಆರ್.ಟಿ.ಸಿ ಮತ್ತು ಕಾರಿನ ನಡುವೆ ಡಿಕ್ಕಿಯಾಗಿತ್ತು.

ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಮಹಿಳೆಯರು ಹಾಗು ಕಾರು ಚಾಲಕಸಾವೀಗೀಡಾದವರಾಗಿದ್ದರು.. ಭದ್ರಾವತಿ ತಾಲೂಕಿನ ಯಡೆಹಳ್ಳಿ ಗ್ರಾಮದ ಶಾರದಮ್ಮ(65), ಸುಮಾ(44), ದಾಕ್ಷಾಯಣಮ್ಮ(45) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಆಶಾ ಎಂಬುವರು ಸಾವಿನಿಂದ ಪಾರಾದ್ರೆ, ಕಾರು ಚಾಲಕ ಸುನೀಲ್ ಮಾರ್ಗಮಧ್ಯೆ ಸಾವನ್ನಪ್ಪಿದ್ದರು.

ಪ್ಲೈ ಓವರ್ ಅಪಘಾತ:   ಡಿವೈಡರ್ ದಾಟಿ ಹಾರಿ ಬಂದ ಬಸ್ ಬೈಕ್ ಗೆ (Private Bus)ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದ. ಯಲಹಂಕ ನಿವಾಸಿ ನಿಖಿಲ್ (22) ಮೃತ ಬೈಕ್ ಸವಾರ. ಏರ್ಪೋರ್ಟ್ ರಸ್ತೆಯ ಫ್ಲೈಓವರ್ ನಲ್ಲಿ‌ ಅಪಘಾತ ಸಂಭವಿಸಿತ್ತು

ಜಿಟಿ ಜಿಟಿ ಮಳೆ (Rain) ನಡುವೆ ವೇಗವಾಗಿ ದೇವನಹಳ್ಳಿ ಕಡೆಯಿಂದ ಬರುತಿದ್ದ ಖಾಸಗಿ ಬಸ್  ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಬಳಿಕ ಡಿವೈಡರ್ ಹಾರಿ ಮುಂದೆ ಸಾಗುತಿದ್ದ ಬೈಕ್ ಗೆ ಡಿಕ್ಕಿಯಾಗಿತ್ತು. 

ತಂದೆ ಕಣ್ಣೇದುರೆ ಪ್ರಾಣ ಬಿಟ್ಟ ಮಗಳು: ಹಾವೇರಿಯಿಂದ ಗುತ್ತಲ ಕಡೆಗೆ ಹೊರಟಿದ್ದ ಬೈಕ್‌ ಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಯುವತಿ ಮೃತಪಟ್ಟಿದ್ದಳು.

ಶಿವನಗರ (ಗುತ್ತಲ ತಾಂಡಾ) ಹೊರವಲಯದ ಬಳಿ ದೇವಗಿರಿ ಗ್ರಾಮದ ಕೋಟೆಪ್ಪ ತಡಸದ ಹಾಗೂ ಇಬ್ಬರು ಮಕ್ಕಳು ಬೈಕನಲ್ಲಿ ಗುತ್ತಲ ಕಡೆಗೆ ಹೊರಟಾಗ ಹಿಂಬದಿಯಿಂದ ಬಂದ ಕಬ್ಬು ಸಾಗಾಟದ ಖಾಲಿ ಲಾರಿಯೊಂದು ಡಿಕ್ಕಿ ಹೊಡೆದು ಮಾಲಾ ಕೋಟೆಪ್ಪ ಕಳಸದ  (20)  ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಕಣ್ಣೆದುರುಗಡೆಯೇ ಮಗಳ ಸಾವನ್ನು ಕಂಡ ತಂದೆ ಹಾಗೂ ಅಣ್ಣನ ಗಾಯದ ನೋವಿನಲ್ಲೂ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. 

Follow Us:
Download App:
  • android
  • ios