Asianet Suvarna News Asianet Suvarna News

DSP, PSI ಸೇರಿ ಬರೋಬ್ಬರಿ 50 ಜನರ ಮದುವೆಯಾದ ಲೇಡಿ..! ಫಸ್ಟ್‌ ನೈಟ್ ಮುಗಿಸಿ ಮಹಾಮೋಸ..!

ಮದುವೆಯಾಗಿ ಆ ಬಳಿಕ ಹಣ ಗಳಿಸಲು 50ಕ್ಕೂ ಅಧಿಕ ಮಂದಿಯನ್ನು ವಂಚಿಸಿದ ಕಿಲಾಡಿ ಲೇಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈಕೆಯನ್ನು ವಿಚಾರಣೆಗೊಳಪಡಿಸಿದ ಪೊಲೀಸರೇ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. 

Tamil nadu Lady Cheated more then 50 people including DSP and PSI in the name of Marriage kvn
Author
First Published Jul 9, 2024, 1:15 PM IST | Last Updated Jul 10, 2024, 8:58 AM IST

ಚೆನ್ನೈ: ಭಾರತದಲ್ಲಿ ಮದುವೆಗೆ ತನ್ನದೇ ಆದ ಮಹತ್ವದ ಸ್ಥಾನವಿದೆ. ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ನಡೆಯುವ ಮಧುರ ಕ್ಷಣಗಳಲ್ಲಿ ಒಂದು. ಹೀಗಿರುವಾಗ, ಇಲ್ಲಿನ ಮಹಿಳೆಯೊಬ್ಬಳು ಮದುವೆಯನ್ನೇ ಬಂಡವಾಳ ಮಾಡಿಕೊಂಡು, ಅವಿವಾಹಿತರನ್ನೇ ಟಾರ್ಗೆಟ್ ಮಾಡಿದ ಮಹಿಳೆಯೊಬ್ಬಳು 50 ಜನರನ್ನು ವಂಚಿಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ತಮಿಳುನಾಡಿನ ಮಹಿಳೆಯೊಬ್ಬರು ದುಡ್ಡಿಗೋಸ್ಕರ ಬಟ್ಟೆ ಬದಲಿಸಿದಂತೆ ಗಂಡಂದಿರನ್ನು ಬದಲಿಸಿದ್ದಾರೆ. ಹೌದು, ಸಂಧ್ಯಾ ಎನ್ನುವ 30 ವರ್ಷದ ಮಹಿಳೆಯೊಬ್ಬಳು, ಅವಿವಾಹಿತರನ್ನು ಮದುವೆಯಾಗೋದು, ಆ ಬಳಿಕ ಹಣ ದುಡ್ಡು ದೋಚಿ ವಂಚಿಸುತ್ತಿದ್ದ ಕಿಲಾಡಿ ಲೇಡಿ ಇದೀಗ ತಮಿಳುನಾಡು ಪೊಲೀಸರ ಅತಿಥಿಯಾಗಿದ್ದಾಳೆ. 

ಪತ್ನಿ ಮೇಲೆ ಅತ್ಯಾಚಾರ, ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ಗಂಡನಿಗೆ 7 ವರ್ಷ ಜೈಲು ಶಿಕ್ಷೆ

ಅಷ್ಟಕ್ಕೂ ಏನಿದು ಘಟನೆ?

ತಮಿಳುನಾಡು ಪೊಲೀಸರ ವರದಿಯ ಪ್ರಕಾರ 35 ವರ್ಷದ ತಿರುವುರ್ ಎನ್ನುವ ವ್ಯಕ್ತಿಯೊಬ್ಬರು, ಮದುವೆಗಾಗಿ ವದುವಿನ ಹುಡುಕಾಟದಲ್ಲಿದ್ದರು. ಇದಾದ ಬಳಿಕ 'ದಿ ತಮಿಳ್ ವೇ' ಎನ್ನುವ ವೆಬ್‌ಸೈಟ್‌ನಲ್ಲಿ ಸಂಧ್ಯಾ ಎನ್ನುವ ಮಹಿಳೆಯ ಪ್ರೊಫೈಲ್ ಕಣ್ಣಿಗೆ ಬಿದ್ದಿದೆ. ಇಬ್ಬರು ಮೆಚ್ಚಿಕೊಂಡ ಬಳಿಕ ತಿರುವುರ್, ತಮ್ಮ ಮನೆಯವರನ್ನು ಒಪ್ಪಿಸಿ ಮದುವೆಯಾದರು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದ್ದಾಗ, ಮೊದಲ ರಾತ್ರಿಯೂ ಮುಗಿದ ಬಳಿಕ ತಿರುವುರ್ ತಮ್ಮ ಪತ್ನಿ ಸಂಧ್ಯಾ ಅವರ ವರ್ತನೆಯಲ್ಲಾದ ಬದಲಾವಣೆಯನ್ನು ಗಮನಿಸಿದರು. ಇದರ ಬೆನ್ನಲ್ಲೇ ತಿರುವುರ್ ಕುಟುಂಬಸ್ಥರು ಆಕೆಯ ಆಧಾರ್ ಕಾರ್ಡ್ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಆಕೆಯ ಗಂಡನ ಹೆಸರು ಬೇರೆಯದ್ದೇ ಆಗಿತ್ತು. ಇದಾದ ಬಳಿಕ ಪೊಲೀಸರಿಗೆ ದೂರು ಕೊಡಲಾಯಿತು. ಆಗ ಕೂಲಂಕುಶವಾಗಿ ಆ ಕಿಲಾಡಿ ಲೇಡಿಯನ್ನು ವಿಚಾರಣೆ ನಡೆಸಿದಾಗ ಸುಮಾರು 50ಕ್ಕೂ ಹೆಚ್ಚು ಜನರನ್ನು ಮದುವೆಯಾಗಿ ವಂಚಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮಾಡದೇ ಇರುವ ಕೊಲೆಗೆ ಜೈಲಿನಲ್ಲಿ ಇದ್ದಾರೆ, ನೋವು ಆಗಲ್ವಾ ಅಂದ್ರು ನಿರ್ಮಾಪಕ ಕೆ ಮಂಜು!

ಇನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈ ಕಿಲಾಡಿ ಲೇಡಿ DSP, ಓರ್ವ ಇನ್‌ಸ್ಪೆಕ್ಟರ್ ಹಾಗೂ ಮಧುರೈನ ಓರ್ವ ಪೊಲೀಸ್ ಅಧಿಕಾರಿಯೂ ಸೇರಿದಂತೆ 50 ಮಂದಿಯನ್ನು ಈಕೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಮದುವೆಯಾಗುವುದು, ಪರ್ಸ್ಟ್ ನೈಟ್ ಮುಗಿಸುವುದು, ಮರುದಿನ ಪತಿಯ ಜತೆ ಜಗಳ ಮಾಡಿಕೊಂಡು ಹಣ ಹಾಗೂ ಆಭರಣ ಪಡೆದುಕೊಂಡು ಪರಾರಿಯಾಗುವುದೇ ಈಕೆಯ ಖಯಾಲಿಯಾಗಿದೆ. ಬೇರೆ ಬೇರೆ ಹೆಸರಿಟ್ಟುಕೊಂಡು ಮದುವೆಯಾಗುವುದು, ಮದುವೆಯಾದ ಬಳಿಕ ಪತಿ ಪ್ರಶ್ನಿಸಿದರೆ, ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂದು ಹೆದರಿಸಿದ್ದರಿಂದಲೇ ಬಹುತೇಕ ಮಂದಿ ಯಾವುದೇ ದೂರು ದಾಖಲಿಸಿಲ್ಲ ಎಂದು ಪೂಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. 
 

Latest Videos
Follow Us:
Download App:
  • android
  • ios