ಚೆನ್ನೈ(ಸೆ. 01)  ನಟೋರಿಯಸ್ ಗ್ಯಾಂಗ್ ಸ್ಟರ್  ಬಿಜೆಪಿಯನ್ನು ಸೇರಲು ಯತ್ನ ಮಾಡಿದ್ದಾನೆ.  ತಮಿಳುನಾಡು ಚೆನ್ನೈ ವಂದಲೂರ್ ಏರಿಯಾದಲ್ಲಿ ಈ ಘಟನೆ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪೊಲೀಸರನ್ನು ಕಂಡು ಗ್ಯಾಂಗ್ ಸ್ಟರ್ ಪ್ರಯತ್ನ ವಿಫಲವಾಗಿದೆ.  ಬಿಜೆಪಿ ರಾಜ್ಯ ಅಧ್ಯಕ್ಷ ಎಲ್ ಮುರುಗನ್ ಸಮ್ಮುಖದಲ್ಲಿ  50 ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣ ಹೊತ್ತಿರುವ ಸೂರ್ಯ ಬಿಜೆಪಿ ಸೇರುವ ಯತ್ನ ಮಾಡಿದ್ದ.

ನನ್ನ ಮಗನ ಕೊಂದುಬಿಡಿ; ನಟೋರಿಯಸ್ ದುಬೆ ತಾಯಿ

ಚನ್ನಗಲ್ ಪಟ್ಟು ಪೊಲೀಸರಿಗೆ ಈತ ಬಿಜೆಪಿ ಸೇರಲು ಮುಂದಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು.  ಪೊಲೀಸರನ್ನು ಕಂಡ ಸೂರ್ಯ ಪರಾರಿಯಾಗಿದ್ದು ಆರು ಜನ ಸಹಚರರನ್ನು ಮಾರಕ ಆಯುಧಗಳ ಸಮೇತ ಬಂಧನ ಮಾಡಲಾಗಿದೆ.

 ಆರು ಜನರನ್ನು ಬಂಧಿಸಿದಕ್ಕೆ ಪೊಲೀಶ್ ಸ್ಟೇಶನ್ ಎದುರು ಬಿಜೆಪಿ ಪ್ರತಿಭಟನೆ ನಡೆಸಿದೆ. ಬಂಧಿತರಲ್ಲಿ ಇಬ್ಬರು ನಮ್ಮ ಪಕ್ಷದ ಕಾರ್ಯಕರ್ತರು ಎಂದು ಹೇಳಿದೆ.

ನೂರಾರು ಜನರು ಪಕ್ಷ ಸೇರುವ ಕಾರ್ಯಕ್ರಮವಿತ್ತು. ಇದರಲ್ಲಿ ಯಾರು ರೌಡಿ ಎಂದು ಪತ್ತೆಹಚ್ಚಲು ಸಾಧ್ಯವಿರಲಿಲ್ಲ. ದೊಡ್ಡ ದೊಡ್ಡ ಕಾರ್ಯಕ್ರಮದಲ್ಲಿ ಒಮ್ಮೊಮ್ಮೆ ಹೀಗಾಗುತ್ತದೆ ಎಂದು ಬಿಜೆಪಿ ನಾಯಕ ರಾಘವನ್ ಹೇಳಿದ್ದಾರೆ.

ಈ ಪ್ರಕರಣವನ್ನು ಎಂಪಿ ಕಾರ್ತೀ ಚಿದಂಬರಂ ಪ್ರಶ್ನೆ ಮಾಡಿದ್ದಾರೆ. ಇನ್ನೊಂದು ಕಡೆ 36  ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಕಲವೆಟ್ಟು ರವಿ ಬಿಜೆಪಿ ಸೇರ್ಪಡೆಯಾಗಿದ್ದಾನೆ.