ಚೆನ್ನೈ(ಜು. 31`)  ಇವರು ಬಹಳ ಪ್ರಾಮಾಣಿಕ ಕಳ್ಳರು, ಎಷ್ಟು ಬೇಕೋ ಅಷ್ಟನ್ನು ಮಾತ್ರ ಕದ್ದು ಕುಡಿದಿದ್ದಾರೆ. 

ತಮಿಳುನಾಡಿನ ಮಹಾಲ್ಲಾಪುರಂ ಮದ್ಯದ ಅಂಗಡಿಯಿಂದ ಕೇವಲ ನಾಲ್ಕೇ ನಾಲ್ಕು ಬಾಟಲಿ ಮದ್ಯ ಕಳ್ಳತನ ಮಾಡಲಾಗಿದೆ.  ನಗದು ಕದಿಯಲು ಅಂಗಡಿಗೆ ತಂಡ ನುಗ್ಗ್ಇತ್ತು, ಆದರೆ ಹಣ ಇರಲಿಲ್ಲ, ಪರಿಣಾಮ ಕೈಗೆ ಸಿಕ್ಕ ಮದ್ಯದ ಬಾಟಲಿ ತೆಗೆದುಕೊಂಡು ಕಳ್ಳರು ತೆರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನಿಮ್ಮ ಮನೆ ಮುಂದಿನ ತುಳಸಿ ಗಿಡ ಬೆಳಗ್ಗೆ ಇಲ್ಲವಾಗಬಹುದು

 ಗುರುವಾರ ಬೆಳಗ್ಗೆ ಅಂಗಡಿಯ ಶಟರ್ಸ್ ಮುರಿದಿರುವುದು ಕಂಡಿದೆ.  ಒಳಗೆ ಬಂದು ನೋಡಿದರೆ ಐದು ಸಾವಿರ ರೂ. ಬೆಲೆಬಾಳುವ ನಾಲ್ಕು ಮದ್ಯದ ಬಾಟಲಿಗಳು ಮಾತ್ರ ನಾಪತ್ತೆಯಾಗಿರುವುದು ಕಂಡು ಬಂದಿದೆ.

ಅಂಗಡಿಗೆ ನುಗ್ಗಿದ್ದ ಕಳ್ಳರು  ಏನು ಸಿಗದಿದ್ದಾಗ ಇಲ್ಲಿಯೇ ಕುಡಿದು ತೆರಳಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರತಿದಿನದ ವ್ಯಾಪಾರ ವಹಿವಾಟಿನ ಹಣ ಅಂಗಡಿಯಲ್ಲೇ ಬಿಟ್ಟು ಹೋಗಬೇಡಿ ಎಂದು ಪೊಲೀಸರು ಎಲ್ಲ ವ್ಯಾಪಾರಿಗಳಿಗೆ ಸಲಹೆ ನೀಡಿದ್ದಾರೆ.  ಇದು ಯಾವುದೋ ಚಾಲಾಕಿ ಗುಂಪಿನ ಕೆಲಸವೇ  ಇರಬಹುದು ಎಂಬುದು ಪೊಲೀಸರ ಅನುಮಾನ. ಒಟ್ಟಿನಲ್ಲಿ ಕಳ್ಳತನಕ್ಕೆಂದು ಬಂದವರಿಗೆ ಸಿಕ್ಕಿದ್ದು ಎಣ್ಣೆ ಬಾಟಲಿ, ಅದಕ್ಕೆ ಕುಡಿದ ಕಳ್ಳರು ಜಾಗ ಖಾಲಿ ಮಾಡಿದ್ದಾರೆ..