ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯೋಧ| ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರು ಗ್ರಾಮದ ಮೃತ ಪರಸಪ್ಪ ಚಿಲಕನಹಳ್ಳಿ| ಮದ್ರಾಸ್ ರೆಜಿಮೆಂಟ್ 27 ನೇ ಬಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ| ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು‌ ಬಂದಿಲ್ಲ| 

ವಿಜಯಪುರ(ಮಾ.07): ಕರ್ತವ್ಯ ನಿರತ ಯೋಧನೋರ್ವ ನೇಣಿಗೆ ಶರಣಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು(ಭಾನುವಾರ) ನಡೆದಿದೆ. ಪರಸಪ್ಪ ಚಿಲಕನಹಳ್ಳಿ (25) ನೇಣಿಗೆ ಶರಣಾದ ಯೋಧರಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರಸಪ್ಪ ಚಿಲಕನಹಳ್ಳಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರು ಗ್ರಾಮದವರಾಗಿದ್ದಾರೆ. ದೆಹಲಿಯ ನಿವಾಸದಲ್ಲಿ ಪರಸಪ್ಪ ಚಿಲಕನಹಳ್ಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ರೈಲಿಗೆ ತಲೆಕೊಟ್ಟು ಬಿ-ಟೆಕ್‌ ಪದವೀಧರ ಆತ್ಮಹತ್ಯೆ

ಪರಸಪ್ಪ ಚಿಲಕನಹಳ್ಳಿ ಮದ್ರಾಸ್ ರೆಜಿಮೆಂಟ್ 27 ನೇ ಬಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪರಸಪ್ಪ ಚಿಲಕನಹಳ್ಳಿ ಅವರು ತಮ್ಮ ಪತ್ನಿಯೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದರು ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು‌ ಬಂದಿಲ್ಲ.