ಬೆಂಗಳೂರು(ಮಾ.07): ಬಿ-ಟೆಕ್‌ ಪದವೀಧರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೈಯ್ಯಪ್ಪನಹಳ್ಳಿ ಸಮೀಪ ನಡೆದಿದೆ. ಆನೇಕಲ್‌ನ ಅರವಂತಿಕೆ ಪಾಳ್ಯ ನಿವಾಸಿ ಸುನಿಲ್‌ ಕುಮಾರ್‌ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಸುನೀಲ್‌ ಕುಮಾರ್‌ ಬಿ.ಟೆಕ್‌ ಪದವೀಧರನಾಗಿದ್ದು, ಎಂ.ಟೆಕ್‌ ಮಾಡಲು ಸಿದ್ಧತೆ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ. ಆದರೆ ಖಿನ್ನತೆಗೊಳಗಾಗಿದ್ದ ಸುನಿಲ್‌, ಯಾರೊಂದಿಗೂ ಅಷ್ಟಾಗಿ ಮಾತನಾಡುತ್ತಿರಲಿಲ್ಲ. 

ಬೆಂಗಳೂರು;  ಕಾಲೇಜು ಕಟ್ಟಡದಿಂದ ಜಿಗಿದು ರ‍್ಯಾಂಕ್ ಸ್ಟುಡೆಂಟ್ ಸುಸೈಡ್

ಶುಕ್ರವಾರ ಸಂಜೆ 6 ಗಂಟೆಗೆ ವಾಕಿಂಗ್‌ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದ. ನಂತರ ಮನೆಯ ಸಮೀಪದಲ್ಲಿದ್ದ ಅರವಂತಿಕೆಪಾಳ್ಯದ ಬಳಿ ಬಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.