Asianet Suvarna News Asianet Suvarna News

Bengaluru: ತಾಯಿ, ಮಕ್ಕಳ ಆತ್ಮಹತ್ಯೆಗೆ ನಿದ್ರೆ ಮಾತ್ರೆ ಸೇವನೆ ಕಾರಣ

ಎರಡು ದಿನಗಳ ಹಿಂದೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಸಾವಿನ ರಹಸ್ಯ ಬಯಲಾಗಿದ್ದು, 30ಕ್ಕೂ ಹೆಚ್ಚು ನಿದ್ರೆ ಮಾತ್ರೆಗಳನ್ನು ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.

Taking sleeping pills is the cause of suicide of mother and childrens at bengaluru gvd
Author
First Published Dec 23, 2022, 9:50 AM IST

ಬೆಂಗಳೂರು (ಡಿ.23): ಎರಡು ದಿನಗಳ ಹಿಂದೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಸಾವಿನ ರಹಸ್ಯ ಬಯಲಾಗಿದ್ದು, 30ಕ್ಕೂ ಹೆಚ್ಚು ನಿದ್ರೆ ಮಾತ್ರೆಗಳನ್ನು ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.

ಮಹಾಲಕ್ಷ್ಮಿ ಲೇಔಟ್‌ನ ಆಂಜನೇಯಸ್ವಾಮಿ ದೇವಾಲಯ ಸಮೀಪದ ಏಕಾಂಶ್‌ ಅಪಾರ್ಟ್‌ಮೆಂಟ್‌ ನಿವಾಸಿಗಳಾದ ಯಶೋಧಾ (70), ಅವರ ಪುತ್ರಿ ಸುಮನ್‌ (41) ಹಾಗೂ ನರೇಶ್‌ (36) ಅವರ ಮೃತದೇಹಗಳು ಮಲಗುವ ಕೋಣೆಯಲ್ಲಿ ಅಂಗಾತ ಮಲಗಿದ್ದ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿದ್ದವು. ಈ ಮೃತದೇಹಗಳ ಮರಣೋತ್ತರ ಪರೀಕ್ಷೆಯಲ್ಲಿ ಅತಿಯಾದ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಕಿರಿಯ ಮಗ ಪ್ರೀತಿಸಿದ ತಪ್ಪಿಗೆ ಮನೆಯ ಮೂವರು ನೇಣಿಗೆ ಶರಣು!

ಮೃತರ ಫ್ಲ್ಯಾಟ್‌ನಲ್ಲಿ ಖಾಲಿಯಾಗಿದ್ದ 30 ನಿದ್ರೆಗಳ ಮೂರು ಸ್ಟ್ರಿಫ್ಸ್‌ಗಳು ಪತ್ತೆಯಾಗಿವೆ. ಹೀಗಾಗಿ ಬಹುಶಃ ತಲಾ ಒಬ್ಬರು 30ಕ್ಕೂ ಹೆಚ್ಚಿನ ನಿದ್ರೆ ಮಾತ್ರೆಗಳನ್ನು ಸೇವಿಸಿರಬಹುದು. ಹೀಗಾಗಿ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಅತಿಯಾದ ನಿದ್ರೆ ಮಾತ್ರೆಗಳ ಸೇವನೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಎಷ್ಟುಪ್ರಮಾಣದ ನಿದ್ರೆ ಮಾತ್ರೆ ಸೇವನೆ ಮಾಡಿದ್ದರು ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯಲ್ಲಿ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ನೇಹಿತರ ವಿಚಾರಣೆ: ಈ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಸಂಬಂಧ ಮೃತ ನರೇಶ್‌ನ ನಾಲ್ವರು ಸ್ನೇಹಿತರನ್ನು ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರು ಬುಧವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಮ್ಮ ಕುಟುಂಬದ ಮೂವರ ಸಾವಿಗೆ ತಮ್ಮನ ಕೆಲ ಸ್ನೇಹಿತರು ಕಾರಣವಾಗಿದ್ದಾರೆ ಎಂದು ಆರೋಪಿಸಿ ಮಹಾಲಕ್ಷ್ಮಿ ಲೇಔಟ್‌ ಠಾಣೆಗೆ ಮೃತ ನರೇಶ್‌ ಹಿರಿಯ ಸೋದರಿ ಅಪರ್ಣಾ ದೂರು ನೀಡಿದ್ದರು. 

ಅತಿಥಿ ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ಶಿಕ್ಷಕಿಯೂ ಚಿಕಿತ್ಸೆ ಫಲಿಸದೆ ಸಾವು

ಅದರನ್ವಯ ಆತ್ಮಹತ್ಯೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈಗ ಆರೋಪಕ್ಕೆ ತುತ್ತಾಗಿರುವ ನರೇಶ್‌ನ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಆತ್ಮಹತ್ಯೆಗೆ ನರೇಶ್‌ ಹಾಗೂ ಆತನ ಸ್ನೇಹಿತರ ಮಧ್ಯೆಯೇ ಹಣಕಾಸು ವಿವಾದ ಕಾರಣವಾಗಿರಬಹುದೇ ಎಂಬ ಬಗ್ಗೆ ತನಿಖೆ ನಡೆದಿದೆ. ಮರಣ ಪತ್ರದಲ್ಲಿ ಕೂಡಾ ನಾವು ನಂಬಿದವರೇ ನಮಗೆ ದ್ರೋಹ ಮಾಡಿದರು ಎಂಬ ಉಲ್ಲೇಖವಾಗಿದೆ. ಹೀಗಾಗಿ ಹಣಕಾಸು ವ್ಯವಹಾರ ಸೇರಿದಂತೆ ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios