ಕಿರಿ ಮಗನ ಪ್ರೀತಿಯ ಹುಚ್ಚಿಗೆ ಮನೆಯಲ್ಲಿದ್ದ ಮೂವರು ನೇಣಿಗೆ ಶರಣಾಗಿದ್ದಾರೆ. ಒಂದೇ ಮನೆಯಲ್ಲಿ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ.

ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ (ಡಿ.22): ಬಡತನ ಇದ್ದರೂ ನೆಮ್ಮದಿಯಿಂದ ಇದ್ದ ಕುಟುಂಬ ಅದು. ಆದರೆ ಕಿರಿ ಮಗನ ಪ್ರೀತಿಯ ಹುಚ್ಚಿಗೆ ಮನೆಯಲ್ಲಿದ್ದ ಮೂವರು ನೇಣಿಗೆ ಶರಣಾಗಿದ್ದಾರೆ. ಒಂದೇ ಮನೆಯಲ್ಲಿ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಭಾರತಿ ಕಮಡೊಳ್ಳಿ (40), ಸೌಜನ್ಯ ಕಮಡೊಳ್ಳಿ (20) ಹಾಗೂ ಕಿರಣ ಕಮಡೊಳ್ಳಿ (22) ಎಂದು ಗುರುತಿಸಲಾಗಿದೆ. ಮೂರು ತಿಂಗಳ ಹಿಂದಷ್ಟೇ ಸೌಜನ್ಯ ಮತ್ತು ಕಿರಣ್ ಮದುವೆಯಾಗಿತ್ತು. ಹೊಸ ಜೀವನ ಶುರು ಮಾಡಿತ್ತು ಈ ಜೋಡಿ. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಮೃತ ಭಾರತಿ ಅವರ ಕಿರಿಯ ಪುತ್ರ ಅರುಣ (21) ಕಳೆದ ಕೆಲವು ದಿನಗಳಿಂದ ಗ್ರಾಮದ ಪುಟ್ಟಣ್ಣ ಶೆಟ್ಟಿ ಎಂಬವರ ಕುಟುಂಬದ ಯುವತಿಯನ್ನು ಪ್ರೀತಿಸುತ್ತಿದ್ದ ಕಳೆದ ಐದಾರು ದಿನಗಳಿಂದ ಅರುಣನ ಜೊತೆ ಯುವತಿಯೂ ನಾಪತ್ತೆಯಾಗಿದ್ದಳು ಎನ್ನಲಾಗಿದೆ. ಇದರಿಂದ ಯುವತಿ ಮನೆಯವರು ತಮ್ಮ ಮಗಳನ್ನು ಕರೆತರುವಂತೆ ಅರುಣನ ತಾಯಿ ಭಾರತಿ, ಹಿರಿಯ ಮಗ ಕಿರಣ ಮತ್ತು ಕಿರಣ್ ಪತ್ನಿ ಸೌಜನ್ಯಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಯುವತಿ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಮೂವರೂ ನೇಣಿಗೆ ಶರಣಾಗಿದ್ದಾರೆ. ಮೂವರ ಆತ್ಮಹತ್ಯೆಗೆ ಪುಟ್ಟಣ್ಣಶೆಟ್ಟಿ ಕುಟುಂಬದವರೇ ಕಾರಣ ಎಂದು ಮೃತ ಕಿರಣನ ತಂದೆ ವಿರುಪಾಕ್ಷಪ್ಪ ಆರೋಪಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮಾಂತರ ವಿಭಾಗದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಡೆತ್‌ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ, ಅಡಕೆ ಜಮೀನಿನ ಮಾಲೀಕ ವಶಕ್ಕೆ
ಹೊಳೆಹೊನ್ನೂರು: ತನ್ನ ಪತ್ನಿ ಮತ್ತು ಮಕ್ಕಳನ್ನು ದೂರ ಮಾಡಲು ಅಡಕೆ ಜಮೀನಿನ ಮಾಲೀಕ ಕಾರಣ ಎಂದು ಡೆತ್‌ನೋಟ್‌ ಬರೆದು ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡ ಘಟನೆ ವರದಿಯಾಗಿದೆ.

ಭದ್ರಾವತಿ ತಾಲೂಕಿನ ಅರೆಬಿಳಚಿ ಕ್ಯಾಂಪ್‌ ನಿವಾಸಿ ನಾಗರಾಜ್‌ (33) ಮೃತ​ಪಟ್ಟವ್ಯಕ್ತಿ. 9 ವರ್ಷಗಳ ಹಿಂದೆ ಕನಸಿನಕಟ್ಟೆಯ ಯುವತಿಯೊಂದಿಗೆ ನಾಗ​ರಾಜ್‌ ಮದುವೆಯಾಗಿದ್ದರು. ಈ ದಂಪ​ತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ- ಪತ್ನಿಯರಿಬ್ಬರೂ ಅಡಕೆ ಮಾಲೀಕ ಮಧುಸೂದನ ಎಂಬಾತನ ಬಳಿ ಅಡಕೆ ಸುಲಿಯುವ ಕೆಲಸಕ್ಕೆ ಹೋಗುತ್ತಿದ್ದರು.

Gadag Crime: ಅತಿಥಿ ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ಶಿಕ್ಷಕಿಯೂ ಚಿಕಿತ್ಸೆ ಫಲಿಸದೆ ಸಾವು

ಆದರೆ, ಮಧುಸೂದನ್‌ ಮತ್ತು ತನ್ನ ಪತ್ನಿ ನಡುವೆ ಅನೈತಿಕ ಸಂಬಂಧವಿತ್ತು ಎಂದು ಭಾವಿಸಿ ಮಧುಸೂದನ್‌ ಜತೆ ನಾಗರಾಜ್‌ ಆಗಾಗ್ಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಒಂದು ತಿಂಗಳ ಹಿಂದೆ ಪತ್ನಿಯು ನಾಗರಾಜ್‌ನನ್ನು ಬಿಟ್ಟು ಮಧುಸೂದನ ಎಂಬ​ವರ ಜೊತೆ ಹೋಗಿದ್ದರು. ಅನಂತರ ಭದ್ರಾವತಿ ಸಾಂತ್ವಾನ ಕೇಂದ್ರಕ್ಕೆ ಹೋಗಿ ಮಕ್ಕಳೊಂದಿಗೆ ನೆಲೆಸಿದ್ದಳು.

ಇದಾದ ಬಳಿಕ ಮಧುಸೂದನ್‌ ಬೇರೆ ಮನೆ ಮಾಡಿಕೊಟ್ಟು ಆಕೆಯನ್ನು ಇಟ್ಟಿರುವ ಬಗ್ಗೆ ನಾಗರಾಜ್‌ ತನ್ನ ತಂದೆ -ತಾಯಿ ಬಳಿ ಹೇಳಿಕೊಂಡಿದ್ದ. ಈ ವಿಚಾ​ರ​ದಿಂದ ಮನನೊಂದಿದ್ದ ನಾಗರಾಜ್‌ ಕಳೆದ ಸೋಮವಾರ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

UDUPI: 2 ಲಕ್ಷ ಮೌಲ್ಯದ ಬೆಲೆ ಬಾಳುವ ಚಿನ್ನ-ಬೆಳ್ಳಿ ಕದ್ದಿದ್ದ ಕಾರ್ಕಳ ಮನೆಗಳ್ಳರ ಬಂಧನ

ಮಗನ್ನು ಊಟಕ್ಕೆ ಕರೆಯಲು ತಾಯಿ ಹೋದಾಗ ನಾಗರಾಜ್‌ ನೇಣು ಬಿಗಿದುಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ನಾಗರಾಜ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಾಗಲೇ ನಾಗರಾಜ್‌ ಕೊನೆಯುಸಿರೆಳೆದಿದ್ದರು.

ಈ ವೇಳೆ ಸಾವಿಗೂ ಮುನ್ನ ಬರೆ​ದಿದ್ದ ಡೆತ್‌ನೋಟ್‌ ಸಿಕ್ಕಿದ್ದು, ಪತ್ನಿ ಮತ್ತು ಮಕ್ಕಳನ್ನು ದೂರ ಮಾಡುವಲ್ಲಿ ಮಧುಸೂದನ್‌ ಕಾರಣ. ನಮ್ಮ ಬ್ಯಾಂಕ್‌ ಪಾಸ್‌ ಬುಕ್‌ ಮತ್ತು ಆಧಾರ್‌ ಕಾರ್ಡ್‌ ಇಟ್ಟುಕೊಂಡಿದ್ದು, ನನ್ನ ಸಾವಿಗೆ ಆತನೇ ಕಾರಣ ಎಂದು ಬರೆದಿದ್ದರು. ಈ ಹಿನ್ನೆಲೆ ಹೊಳೆಹೊನ್ನೂರು ಪೊಲೀಸರು ಮಧುಸೂದನ ಅವ​ರನ್ನು ವಶಕ್ಕೆ ಪಡೆದಿದ್ದಾರೆ.