ರೆಸಿಡೆನ್ಸಿ ರಸ್ತೆಯ ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಟಿ.ಪ್ರಕಾಶ್ ನೀಡಿದ ದೂರಿನ ಮೇರೆಗೆ ಕೈಕೊಂಡ್ರಹಳ್ಳಿ ನಿವಾಸಿ ಸಿದ್ಧಲಿಂಗಪ್ಪ, ಕಮಲಾನಗರದ ರಾಜೇಶ್ ಹಾಗೂ ಚಿನ್ನ ಪರಿವೀಕ್ಷಕ ಲಕ್ಷ್ಮಿನಾರಾಯಣ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬೆಂಗಳೂರು(ಜು.30): ನಕಲಿ ಚಿನ್ನವನ್ನು ಅಸಲಿ ಎಂದು ನಂಬಿಸಿ ಅಡಮಾನವಿಟ್ಟು ಕೆನರಾ ಬ್ಯಾಂಕ್‌ನಿಂದ .14 ಲಕ್ಷ ಸಾಲ ಪಡೆದು ವಂಚಿಸಿದ ಆರೋಪದಡಿ ಮೂವರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೆಸಿಡೆನ್ಸಿ ರಸ್ತೆಯ ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಟಿ.ಪ್ರಕಾಶ್ ನೀಡಿದ ದೂರಿನ ಮೇರೆಗೆ ಕೈಕೊಂಡ್ರಹಳ್ಳಿ ನಿವಾಸಿ ಸಿದ್ಧಲಿಂಗಪ್ಪ, ಕಮಲಾನಗರದ ರಾಜೇಶ್ ಹಾಗೂ ಚಿನ್ನ ಪರಿವೀಕ್ಷಕ ಲಕ್ಷ್ಮಿನಾರಾಯಣ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru: ತಾಯಿ ಜೊತೆ ಅಫೇರ್, ಬಾಣಸಿಗನ ಹತ್ಯೆ ಮಾಡಿದ ಪುತ್ರ!
ಆರೋಪಿ ಸಿದ್ಧಗಂಗಪ್ಪ 272.90 ಗ್ರಾಂ ತೂಕದ 10 ಬಳೆಗಳು, 6 ಕಡಗ ಅಡಮಾನವಿರಿಸಿ .11.10 ಲಕ್ಷ ಮತ್ತು ಆರೋಪಿ ರಾಜಯ್ಯ 86.30 ಗ್ರಾಂ ತೂಕದ 5 ಬಳೆಗಳನ್ನು ಅಡಮಾನವಿರಿಸಿ .3.02 ಲಕ್ಷ ಸೇರಿ ಇಬ್ಬರು ಒಟ್ಟು 359.02 ಗ್ರಾಂ ತೂಕದ ನಕಲಿ ಚಿನ್ನವನ್ನು ಅಡಮಾನವಿರಿಸಿ ಒಟ್ಟು .14 ಲಕ್ಷ ಸಾಲ ಪಡೆದಿದ್ದಾರೆ. ಸೆಂಟ್ರಲ್ ಅಪ್ರೈಸರ್ ಏಜೆನ್ಸಿಯ ಲಕ್ಷ್ಮೇನಾರಾಯಣ ಅವರು ಆರೋಪಿಗಳೊಂದಿಗೆ ಕೈ ಜೋಡಿಸಿ, ನಕಲಿ ಚಿನ್ನಾಭರಣಗಳನ್ನು ಅಸಲಿ ಚಿನ್ನವೆಂದು ಪ್ರಮಾಣೀಕರಿಸಿದ್ದಾರೆ.
ಇತ್ತೀಚೆಗೆ ಚಿನ್ನದ ಆಡಿಟ್ ಮಾಡುವಾಗ ಈ ನಕಲಿ ಚಿನ್ನದ ಬಂಡವಾಳ ಬಯಲಾಗಿದೆ. ಈ ಸಂಬಂಧ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಪ್ರಕಾಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
