Asianet Suvarna News Asianet Suvarna News

ಆರ್ಯನ್‌ಗೆ ಜೈಲು ಅವಧಿ ವಿಸ್ತರಣೆ : ಅಸಮಾಧಾನ ಹೊರಹಾಕಿದ ಸ್ವರಾಗೆ ತರಾಟೆ

  • ರೇವ್ ಪಾರ್ಟಿ  ಮಾಡಿ ಸಿಕ್ಕಿಬಿದ್ದ ಶಾರುಖ್ ಖಾನ್   ಪುತ್ರ ಆರ್ಯನ್ ಖಾನ್ 
  • ಜಾಮೀನು ಅರ್ಜಿ ವಿಚಾರಣೆ ಮುಂಬೈ ವಿಶೇಷ ನ್ಯಾಯಾಲಯದಿಂದ ಅಕ್ಟೋಬರ್ 20ರ ನಂತರಕ್ಕೆ ಮುಂದೂಡಿಕೆ 
  • ಟಿ ಸ್ವರಾ ಭಾಸ್ಕರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
Swara Bhasker expresses disappointment as court reserves order on Aryan Khan  bail plea snr
Author
Bengaluru, First Published Oct 15, 2021, 2:20 PM IST

ಮುಂಬೈ (ಅ.15):    ರೇವ್ ಪಾರ್ಟಿ (Rave party) ಮಾಡಿ ಸಿಕ್ಕಿಬಿದ್ದ ಶಾರುಖ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ (Aryan Khan) ಜಾಮೀನು ಅರ್ಜಿ (Bail Plea) ವಿಚಾರಣೆಯನ್ನು ಮುಂಬೈ ವಿಶೇಷ ನ್ಯಾಯಾಲಯ (Mumbai Special Court) ಅಕ್ಟೋಬರ್ 20ರ ನಂತರಕ್ಕೆ ಮುಂದೂಡಿಕೆ ಮಾಡಿದ್ದು  ಈ ಸಂಬಂಧ, ನಟಿ ಸ್ವರಾ ಭಾಸ್ಕರ್ (Swara Bhaskar) ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ.  

ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಬಾಲಿವುಡ್‌ನ ಅನೇಕ ಸ್ಟಾರ್‌ಗಳು ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಸಂಬಂಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  ಅದರಲ್ಲಿ ಇನ್ನೂ 6 ದಿನ ಆರ್ಯನ್ ಖಾನ್ ಜೈಲಲ್ಲಿ ಇರಬೇಕಾದ ಸ್ಥಿತಿ ಇದ್ದು  ನಟಿ ಸ್ವರಾ ಭಾಸ್ಕರ್ ಇದೊಂದು ಸ್ಪಷ್ಟ ಹೆರಾಸ್‌ಮೆಂಟ್ (Harassment) ಎಂದು ಬರೆದುಕೊಂಡಿದ್ದಾರೆ. 

 

ಟ್ವಿಟ್ಟರ್ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿರುವ ಸ್ವರಾ ಬೇಲ್ (Bail) ವಿಚಾರದಲ್ಲಿ #Aryan Khan ಶೋಷಣೆಯಾಗುತ್ತಿದೆ ಎಂದಿದ್ದಾರೆ. 

 

Aryan Drug Case: ಶಾರೂಖ್ ಮನೆಗೆ ಭೇಟಿ ಕೊಟ್ಟ ಪ್ರೀತಿ

ಅದರೆ ಸ್ವರಾ ಹೇಳಿಕೆಗೆ ಅನೇಕ ನೆಟಿಜನ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದು,   ಅದರಲ್ಲಿ ಒಬ್ಬರು ನಿನಗೆ ಇದು ಕಿರುಕುಳ ಎಂದು ಅನಿಸಿದರೆ ಆತನ ಜೊತೆಗೆ ನೀನು ಜೈಲಿಗೆ ಹೋಗಿ ಇರು ಎಂದು ಹೇಳಿದ್ದಾರೆ.  ಇನ್ನೊಬ್ಬರು ಸ್ವರಾ ಭಾಸ್ಕರ್ ಪ್ರಚಾರ ಪ್ರಿಯೆ, ಆಕೆ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾಳೆ ಎಂದಿದ್ದಾರೆ. 

ಇನೊಬ್ಬರು ಸ್ವರಾಗೆ ಪ್ರತಿಕ್ರಿಯಿಸಿದ್ದು, "ಡ್ರಗ್ ಒಂದು ಪವಿತ್ರ ವಸ್ತು, ಸ್ವರಾ ಜೊತೆಗೆ ಅನೇಕ ಬಾಲಿವುಡ್ (Bollywood) ಸೆಲೆಬ್ರಿಟಿಗಳು ಶಾರುಖ್ ಬೆನ್ನಿಗೆ ನಿಂತು ಆರ್ಯನ್ಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದಿದ್ದಾರೆ. 

ಇನ್ನು ಶಾರುಖ್ ಖಾನ್ ಜೊತೆ ರಯೀಸ್ (Raees) ಚಿತ್ರದಲ್ಲಿ ಕೆಲಸ ಮಾಡಿರುವ ಫಿಲ್ಮ್ ಮೇಕರ್ ರಾಹುಲ್ ದೋಲಕಿಯಾ (Rahul Dholakia) ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡು  ಬೆಂಬಲ ಸೂಚಿಸಿದ್ದಾರೆ. 

'ಆರ್ಯನ್ ಖಾನ್ ಸೂಪರ್ ಸ್ಟಾರ್ ಮಾಡಿದ NCBಗೆ ಧನ್ಯವಾದ ಹೇಳ್ಬೇಕು'

"ನಾನು  ಕೆಲಸ ಮಾಡುವ ಎಲ್ಲರನ್ನು ಗೌರವಿಸುತ್ತೇನೆ.  ಬೆಂಬಲವನ್ನು ನಿಡುತ್ತೇನೆ. ಆರ್ಯನ್ ಬೇಲ್ ಅರ್ಜಿ ವಿಚಾರಣೆ ಮುಂದಕ್ಕೆ ಹೋಗಿರುವುದು ದುರಾದೃಷ್ಟವಶಾತ್ ಅಸಮಾಧಾನಕರ ಎಂದಿದ್ದಾರೆ. 

ಫಿಲ್ಮ್ ಮೇಕರ್ ಹನ್ಸಲ್  ಮೆಹ್ತಾ (Hansal Mehta) ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು ಇದು ಕಿರುಕುಳ ಎಂದಿದ್ದಾರೆ. 
 
ಗಾಂಜಾ, ಕ್ಯಾನಬಿಸ್ (Marijuana/cannabis) ಸೇವನೆ ಅನೇಕ ದೇಶಗಳಲ್ಲಿ ಕಾನೂನು ಪ್ರಕಾರ ಒಪ್ಪಿತ. ಕ್ರಿಮಿನಲ್ ವ್ಯಾಪ್ತಿಯಿಂದಲೂ ಇದನ್ನು ಹೊರಗಿಡಲಾಗಿದೆ. ಅದರೆ ನಮ್ಮ ದೇಶದಲ್ಲಿ ಮಾದಕ ದ್ರವ್ಯ ನಿಯಂತ್ರಣ ಮಾಡುವುದಕ್ಕಿಂತಲೂ ಕಿರುಕುಳ ನೀಡಲು ಹೆಚ್ಚು ಬಳಕೆ ಮಾಡಲಾಗುತ್ತದೆ. 

ಸೆಕ್ಷನ್ 377 (Section 377) ಅನ್ನು ರದ್ದುಗೊಳಿಸುವಂತಹ ಚಳುವಳಿ ನಡೆದು ಇದನ್ನೆಲ್ಲಾ ಕೊನೆಗೊಳಿಸುವುದು ಅಗತ್ಯವಾಗಿದೆ ಎಂದಿದ್ದಾರೆ. 

ಇಷ್ಟೆ ಅಲ್ಲದೇ ಆರ್ಯನ್ ಜೈಲು ಸೇರಿರುವುದಕ್ಕೆ ತಮಗೆ ಅತ್ಯಂತ ನೋವಾಗಿದೆ ಎಂದಿರುವ ಹನ್ಸಲ್  ಮಕ್ಕಳು ಸಮಸ್ಯೆಯಲ್ಲಿದ್ದಾಗ ಪೋಷಕರು ಅದನ್ನು ತಡೆದುಕೊಳ್ಳುವುದು ಅತ್ಯಂತ ಕಷ್ಟ. ಕಾನೂನು ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಜನರೇ ತಮ್ಮ ತೀರ್ಪು, ತೀರ್ಮಾನವನ್ನು ನೀಡಲು ಆರಂಭಿಸುತ್ತಾರೆ. ಇದು ಪೋಷಕರ ಹಾಗೂ ಮಕ್ಕಳ ಸಂಬಂಧಕ್ಕೆ ನೀಡುವ ಅಗೌರವ ತಪ್ಪು ನಡೆ' ನಾವು ಎಂದಿಗೂ ನಿಮ್ಮ ಜೊತೆಯಲ್ಲಿರುತ್ತೇವೆ @iamsrk ಎಂದು ಬರೆದುಕೊಂಡಿದ್ದಾರೆ. 

ಸದ್ಯ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ ಹೋಗಿರುವ ಹಿನ್ನೆಲೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗು ಮುನ್ಮುನ್ ಧಮೇಚಾ, ಅರ್ಬಾಜ್ ಅಕ್ಟೋಬರ್ 20ರವರೆಗೆ ಜೈಲಿನಲ್ಲಿಯೇ ಇರಬೇಕಿದೆ. 

Follow Us:
Download App:
  • android
  • ios