Asianet Suvarna News Asianet Suvarna News

ಇನ್ನೇನು 2 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ವರನ ಮನೆಯಲ್ಲೇ ಶವವಾಗಿ ಪತ್ತೆ!

ಇನ್ನೆರಡು ದಿನದಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಡಬೇಕಿದ್ದ ಯುವತಿ ನೇಣಿಗೆ ಶರಣಾದ ಘಟನೆ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂನಲ್ಲಿ ನಡೆದಿದೆ. ಐಶ್ವರ್ಯ ನೇಣಿಗೆ ಶರಣಾದ ಯುವತಿ. ಮದುವೆ ಸಂಭ್ರಮದಲ್ಲಿರಬೇಕಾದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನ ‌ಹುಟ್ಟಿಸಿದೆ. ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಯುವತಿ. 

Suspiciously  the young woman committed suicide at vijayanagar TB dam rav
Author
First Published Nov 20, 2023, 9:05 AM IST

ವಿಜಯನಗರ (ನ.20): ಇನ್ನೆರಡು ದಿನದಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಡಬೇಕಿದ್ದ ಯುವತಿ ನೇಣಿಗೆ ಶರಣಾದ ಘಟನೆ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂನಲ್ಲಿ ನಡೆದಿದೆ.

ಐಶ್ವರ್ಯ ನೇಣಿಗೆ ಶರಣಾದ ಯುವತಿ. ಮದುವೆ ಸಂಭ್ರಮದಲ್ಲಿರಬೇಕಾದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನ ‌ಹುಟ್ಟಿಸಿದೆ. ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಯುವತಿ. 

ಸಿಂಧನೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನ ನೇಣು ಬಿಗಿದು ಕೊಲೆ ಮಾಡಿದ ಪಾಪಿ ಗಂಡ..!

6 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡಿದ್ದ ಆಶೋಕ ಮತ್ತು ಐಶ್ವರ್ಯ. ಯುವಕ ಯುವತಿ ಇಬ್ಬರೂ ಖಾಸಗಿ ಕಂಪನಿಯ ಉದ್ಯೋಗಿಗಳು. ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಮೇರೆಗೆ ಅಂತರ್ಜಾತಿ ವಿವಾಹವಾಗಲು ರೆಡಿಯಾಗಿದ್ರು. ಐಶ್ವರ್ಯಾ ಎಸ್ಸಿ, ಹುಡುಗ ಗೌಂಡರ್. ಅಂತರ್ಜಾತಿ ಹಿನ್ನೆಲೆ ಕೆಲವು ಷರತ್ತುಗಳ ಮೇಲೆ ಮದುವೆಯಾಗಲು ಒಪ್ಪಿದ್ದರಂತೆ ಯುವಕನ ಕಡೆಯವರು. 

ಬಳಿಕ ಸಂಪ್ರದಾಯದಂತೆ  ಮದುವೆ ಮಾಡಿಕೊಳ್ತೇವೆಂದು ಶಾಸ್ತ್ರ ಇದೆ ಎಂದು ಯುವತಿಯನ್ನು ಕರೆದುಕೊಂಡು ಹೋಗಿದ್ದರು. ಹುಡುಗಿ ಕಡೆಯವರು ಯಾರೂ ಬರಬಾರದೆಂದು ಷರತ್ತು ಹಾಕಿ ಕರೆದುಕೊಂಡು ಹೋಗಿದ್ದ ಅಶೋಕನ ಕುಟುಂಬಸ್ಥರು. ಅವರ ಹಿಂದೆ ಒಬ್ಬಳೇ ಹೋಗಿದ್ದ ಐಶ್ವರ್ಯಾ ಇದೀಗ ದಿಢೀರನೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕತೆ ಕಟ್ಟಿದ್ದಾರೆ ಆರೋಪಿಸಿರುವ ಯುವತಿ ಮನೆಯವರು. 

ಪ್ರೀತಿಸಿ ನಿಖಾ ಆದವರಿಗೆ ಕುಟುಂಬಸ್ಥರಿಂದ ಕೊಲೆ ಬೆದರಿಕೆ: ರಕ್ಷಣೆಗಾಗಿ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿದ ಲವ್‌ ಬರ್ಡ್ಸ್!

ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಆದ್ರೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ್ದಾರೆ. ಇದೊಂದು ಕೊಲೆ ಎಂದ ಯುವತಿಯ ಪೋಷಕರು. ಟಿಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ ಪೋಷಕರು. 

Follow Us:
Download App:
  • android
  • ios