ಹೊಸ ವರ್ಷದ ಮೊದಲ ದಿನ ಭಾನುವಾರ ತಾಯಿ ವೀಣಾ ಅವರ ಶವ  ಕ್ರಿಶ್ಚಿಯನ್ ಕಾಲೋನಿಯ ಎರಡನೇ ಕ್ರಾಸ್ ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ನಿನ್ನೆ ತಾಯಿ ಆತ್ಮಹತ್ಯೆ, ಇಂದು ಮಗ ರೈಲಿಗೆ ತಲೆಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. 

ಮಂಡ್ಯ (ಜ.2) : ವ್ಯಕ್ತಿಯೊಬ್ಬರೈಲ್ವೆ ಹಳಿಗೆ ತಲೆಕೊಟ್ಟುಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ವಿ. ಸಿ ಫಾರಂ ಗೇಟ್ ಬಳಿ ನಡೆದಿದೆ. ಆತ್ಮಹತ್ಯೆ ಮೃತ ವ್ಯಕ್ತಿಯನ್ನು ಮಂಡ್ಯದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿಗಳಾದ ಅಭಿನವ ಭಾರತಿ ಶಾಲೆಯ ನಿವೃತ್ತ ಶಿಕ್ಷಕಿ ವೀಣಾ ಇವರ ಮಗ ನಿತಿನ್ಎಂದು ಗುರುತಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸ ವರ್ಷದ ಮೊದಲ ದಿನ ಭಾನುವಾರ ತಾಯಿ ವೀಣಾ ಅವರ ಶವ ಕ್ರಿಶ್ಚಿಯನ್ ಕಾಲೋನಿಯ ಎರಡನೇ ಕ್ರಾಸ್ ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಿನ್ನೆ ತಾಯಿ ಆತ್ಮಹತ್ಯೆ, ಇಂದು ಮಗ ರೈಲಿಗೆ ತಲೆಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. 

ತಾಯಿಯನ್ನು ಕೊಲೆಗೈದಿರುವ ಶಂಕೆ: 

ಮಂಡ್ಯದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿಗಳಾದ ಅಭಿನವ ಭಾರತಿ ಶಾಲೆಯ ನಿವೃತ್ತ ಶಿಕ್ಷಕಿಯಾಗಿದ್ದ ವೀಣಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಾಗ ಇದು ಆತ್ಮಹತ್ಯೆಯಲ್ಲ, ಮಗ ಕೊಲೆ ಮಾಡಿದ್ದಾನೆಂಬ ಅನುಮಾನ ಬಂದಿತ್ತು. 

ತಾಯಿಯನ್ನು ಕೊಂದ ಪ್ರಾಯಶ್ಚಿತಕ್ಕೆ ಮಗ ಆತ್ಮಹತ್ಯೆ?

ತಾಯಿಯನ್ನು ಕೊಂದ ಪ್ರಾಯಶ್ಚಿತಕ್ಕೆ ಇಂದು ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನಾ? ಅಥವಾ ತಾಯಿ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ್ನಾ? ತಾಯಿ ಮಗನ ಸಾವು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. 

Suicide News: ತಾಯಿ, ಮಗ, ಗರ್ಭಿಣಿ ಸೊಸೆ ಆತ್ಮಹತ್ಯೆಗೆ ಶರಣು