ಶಂಕಿತ ನಕ್ಸಲರ ವಿಚಾರಣೆ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ
ಇತ್ತೀಚಿಗೆ ಕೇರಳದಲ್ಲಿ ಬಂಧಿತರಾದ ಶಂಕಿತ ನಕ್ಸಲ್‌ವಾದಿಗಳನ್ನು ಕುಂದಾಪುರದ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರುಪಡಿಸಲಾಗಿದೆ. ಶೃಂಗೇರಿ ತಾಲೂಕು ಭುವನ ಹಡ್ಲು ಗ್ರಾಮದ ಬಿ.ಜಿ .ಕೃಷ್ಣಮೂರ್ತಿ(B.G.Krishnamurthy) ಹಾಗೂ ಸಾವಿತ್ರಿ ಯಾನೆ ರೆಜಿತಾ(Savitri) ಅವರನ್ನು ಹಾಜರುಪಡಿಸಲಾಯಿತು
ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಆ.18) : ಇತ್ತೀಚಿಗೆ ಕೇರಳದಲ್ಲಿ ಬಂಧಿತರಾದ ಶಂಕಿತ ನಕ್ಸಲ್‌ವಾದಿಗಳನ್ನು ಕುಂದಾಪುರದ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರುಪಡಿಸಲಾಗಿದೆ. ಶೃಂಗೇರಿ ತಾಲೂಕು ಭುವನ ಹಡ್ಲು ಗ್ರಾಮದ ಬಿ.ಜಿ .ಕೃಷ್ಣಮೂರ್ತಿ(B.G.Krishnamurthy) ಹಾಗೂ ಸಾವಿತ್ರಿ ಯಾನೆ ರೆಜಿತಾ(Savitri) ಅವರನ್ನು ಹಾಜರುಪಡಿಸಲಾಯಿತು. ಇವರ ಮೇಲಿನ ಏಳು ಆರೋಪಗಳ ಚಾರ್ಜ್ ಶೀಟ್(Chargesheet) ಸದ್ಯ ಸಲ್ಲಿಕೆ ಆಗಿರುವುದರಿಂದ, ಮುಂದಿನ ವಿಚಾರಣೆಯನ್ನು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ನಕ್ಸಲ್ ಬೆಂಬಲಿಗರ ಮೇಲೂ ಕಣ್ಣು ,ಹೆಚ್ಚು ಕಮ್ಮಿಯಾದರೆ ಕ್ರಮ: ಅರಗ ಜ್ಞಾನೇಂದ್ರ ಎಚ್ಚರಿಕೆ
ಬಂಧಿತ ನಕ್ಸಲ್ ವಾದಿಗಳಾದ ಬಿ.ಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಇವರ ಮೇಲೆ ಶಂಕರನಾರಾಯಣ ಠಾಣೆ(Shankarnarayana Police Station)ಯಲ್ಲಿ ಆರು ಪ್ರಕರಣ ಹಾಗೂ ಕೊಲ್ಲೂರು ಠಾಣೆ(Kollur Police Station)ಯಲ್ಲಿ ಒಂದು ಪ್ರಕರಣ ಇದ್ದು ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಆದರೆ ಇವುಗಳಲ್ಲಿನ ಅಪರಾಧ ಸೆಕ್ಷನ್ ಗಳು ಜಿಲ್ಲಾ ನ್ಯಾಯದಲ್ಲಿ ವಿಚಾರಣೆ ಆಗಬೇಕಾಗಿರುವುದರಿಂದ ಪ್ರಕರಣಗಳ ವಿಚಾರಣೆಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದ ಕಿರಿಯ ವಿಭಾಗ ನ್ಯಾಯಾಧೀಶರು ಈ ಆದೇಶ ಮಾಡಿದ್ದಾರೆ.
ಕರ್ನಾಟಕದ ಜೈಲಿನಲ್ಲೇ ತಮ್ಮನ್ನು ಇರಿಸುವಂತೆ ನ್ಯಾಯಾಲಯಕ್ಕೆ ಬಿ.ಜಿ ಕೃಷ್ಣಮೂರ್ತಿ ಲಿಖಿತ ಮನವಿ ಸಲ್ಲಿಸಿದ್ದಾರೆ. ನನ್ನನ್ನು ಕರ್ನಾಟಕದ ಜೈಲಿನಲ್ಲಿ ಇರಿಸಬೇಕೆಂದು ಈ ಮನವಿಯಲ್ಲಿ ಕೇಳಿಕೊಂಡಿದ್ದಾರೆ. ಕೇರಳದಲ್ಲಿರುವ ನಾಲ್ಕು ಪ್ರಕರಣಗಳ ಪೈಕಿ ಒಂದರಲ್ಲಿ ಜಾಮೀನು ಮಂಜೂರಾಗಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಕರಣಗಳಿರುವ ಕಾರಣ ಕರ್ನಾಟಕ ರಾಜ್ಯದ ಜೈಲಿನಲ್ಲಿ ಇರಿಸಬೇಕೆಂದು ಕೊರಲಾಗಿದೆ. ಆದರೆ ಸದ್ಯಕ್ಕೆ ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.
ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ವಿರುದ್ಧ ಅಮಾವಾಸ್ಯೆಬೈಲು ಠಾಣೆ(Amavasye bailu police station)ಯಲ್ಲಿ 2006ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಕಾರ್ಕಳ(Karkala), ಹೆಬ್ರಿ(Hebri) ಹಾಗೂ ಅಜೆಕಾರು(Ajekaru) ಠಾಣೆಯಲ್ಲಿ ನಡೆದಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇ 3 ರಂದು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಸ್ಥಳ ಮಹಜರು ಮಾಡಲಾಗಿತ್ತು.
Udupi: ಕಾರ್ಕಳಕ್ಕೆ ಇಬ್ಬರು ನಕ್ಸಲೀಯರನ್ನು ಕರೆತಂದ ಪೊಲೀಸರು: ಇಂದಿನಿಂದ ವಿಚಾರಣೆ
ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶವ ಯಡಿಯಾಳ ಹತ್ಯೆ(Keshav Yadival Murder) ಹಾಗೂ ಇತರ ಪ್ರಕರಣಗಳ ವಿಚಾರಣೆಗಾಗಿ ಕುಂದಾಪುರ ಉಪ ವಿಭಾಗದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಲುವಾಗಿ ಕಸ್ಟಡಿಗೆ ಪಡೆದುಕೊಂಡಿದ್ದರು.
ಇವರಿಬ್ಬರ ವಿರುದ್ಧ ಅಮಾವಾಸ್ಯೆ ಬೈಲು ಠಾಣೆಯಲ್ಲಿ ನಾಲ್ಕು , ಶಂಕರನಾರಾಯಣ ಠಾಣೆಯಲ್ಲಿ ಆರು ಹಾಗೂ ಕೊಲ್ಲೂರು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಪ್ರಸ್ತುತ ಶಂಕರನಾರಾಯಣ ಹಾಗೂ ಕೊಲ್ಲೂರು ಠಾಣೆ ಪೊಲೀಸರು ಇವರಿಬ್ಬರನ್ನು ಕೇರಳ ತ್ರಿಶೂರಿನಿಂದ ಕರೆತಂದಿದ್ದಾರೆ. ವಿಚಾರಣೆಯ ಬಳಿಕ ಹಿರಿಯಡ್ಕ ಜೈಲಿನಲ್ಲಿ ಇರಿಸಿ ಇಂದು ಮತ್ತೆ ಶ್ರೀಶೂರಿಗೆ ಕರೆದೊಯ್ಯಲಾಗಿದೆ.
ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ಒಟ್ಟು 53 ಹಾಗೂ ಸಾವಿತ್ರಿ ವಿರುದ್ಧ ಒಟ್ಟು 22 ಪ್ರಕರಣಗಳಿವೆ ಕೇರಳದ ಗಡಿಭಾಗ ವಯನಾಡು ಮತ್ತು ಸುಲ್ತಾನ್ ಬತ್ತೇರಿಯಲ್ಲಿ ನವೆಂಬರ್ 10 ರಂದು ಕೇರಳದ ಉಗ್ರ ನಿಗ್ರಹ ಪಡೆ ಇವರನ್ನು ಬಂಧಿಸಿದೆ.