Asianet Suvarna News Asianet Suvarna News

Chitrdurga: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿರುವ ಶಂಕೆ

ಸಂಸಾರ ಅಂದ್ಮೇಲೆ‌ ಗಂಡ ಹೆಂಡತಿ ಮಧ್ಯೆ ಜಗಳ ಆಗೋದು ಕಾಮನ್. ಆದ್ರೆ ಇಲ್ಲೊಂದು ಮನೆಯಲ್ಲಿ ರಾತ್ರಿ ನಡೆದಿರೋ‌ ಗಲಾಟೆ, ಮೃತರ ಸಂಬಂಧಿರಕರು ಆರೋಪಿಸುವ ಹಾಗೆ ಕೊಲೆಯಾಗಿದೋ? ಅಥವಾ ಮೃತ ಮಹಿಳೆಯೇ ಬೇಸರದಿಂದ‌ ನೇಣಿಗೆ ಶರಣಾದಳೋ? ಎಂಬ ಪ್ರಶ್ನೆ ಪೊಲೀಸರಲ್ಲಿ ಮೂಡಿದ್ದು ತನಿಖೆ ಆರಂಭಿಸಿದ್ದಾರೆ.

suspected dowry case murder woman's body found hanging in Chitradurga gow
Author
First Published Dec 4, 2022, 5:16 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಡಿ.4): ಸಂಸಾರ ಅಂದ್ಮೇಲೆ‌ ಗಂಡ ಹೆಂಡತಿ ಮಧ್ಯೆ ಜಗಳ ಆಗೋದು ಕಾಮನ್. ಆದ್ರೆ ಇಲ್ಲೊಂದು ಮನೆಯಲ್ಲಿ ರಾತ್ರಿ ನಡೆದಿರೋ‌ ಗಲಾಟೆ, ಮೃತರ ಸಂಬಂಧಿರಕರು ಆರೋಪಿಸುವ ಹಾಗೆ ಕೊಲೆಯಾಗಿದೋ? ಅಥವಾ ಮೃತ ಮಹಿಳೆಯೇ ಬೇಸರದಿಂದ‌ ನೇಣಿಗೆ ಶರಣಾದಳೋ? ಎಂಬ ಪ್ರಶ್ನೆ ಪೊಲೀಸರಲ್ಲಿ ಮೂಡಿದ್ದು ತನಿಖೆ ಆರಂಭಿಸಿದ್ದಾರೆ. ಮೃತ ಮಹಿಳೆ ವಿನುತಾ ಹಾಗು ಕಿರಣ್ ಕಳೆದ‌ ಮೂರು ವರ್ಷಗಳ ಹಿಂದೆ ಒಬ್ಬರನ್ನ ಒಬ್ಬರು ಇಷ್ಟ ಪಟ್ಟು ಮದುವೆ ಆಗಿದ್ದರು. ಈ ದಂಪತಿಗೆ 2 ವರ್ಷದ ಪುಟ್ಟ ಮಗನೂ ಇದ್ದನು. ಆದ್ರೆ ಮೃತ ಮಹಿಳೆ ವಿನುತಾ ಮಾತ್ರ ನೇಣಿಗೆ ಶರಣಾಗಿದ್ದು ಯಾಕೆ ಎಂಬುದೇ ಹಲವರ ಪ್ರಶ್ನೆ ಆಗಿತ್ತು. ಆದ್ರೆ ಮೃತಳ ಸಂಬಂಧಿಕರು ಆಕೆಯ ಒತಿ ಕಿರಣ್ ವಿರುದ್ದ ಮಾಡಿದ ಆರೋಪಗಳ ಸುರಿಮಳೆ ಎಲ್ಲರಲ್ಲೂ ಆಶ್ಚರ್ಯ ಚಕಿತರನ್ನಾಗಿಸಿತು. ಮದುವೆ ಆದಾಗನಿಂದ ನಿತ್ಯ ಕಿರಣ್ ಮೃತ ಮಹಿಳೆಗೆ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದರೊಟ್ಟಿಗೆ ಯಾವುದೇ ಕೆಲಸ ಮಾಡದೇ ಸುಖಾ ಸುಮ್ಮನೇ ಮನೆಯಲ್ಲಿ ಇರ್ತಿದ್ದ, ಹಾಗಾಗಿ ಕೆಲ ಹುಡುಗಿಯರ ಜೊತೆಗೆ ಸಂಪರ್ಕ ಇದ್ದಿದ್ದು ನಮ್ಮ ಗಮನಕ್ಕೆ ಬಂದಿತ್ತು. ಡ್ರಗ್ಸ್ ಸೇವನೆ ಮಾಡ್ತಿದ್ದ ಎಂದು ಕೆಲವರು ಹೇಳ್ತಿದ್ತು. ನನ್ನ ಮಗಳು ನಿತ್ಯ ತನ್ನ ಗಂಡ ಕೊಡುವ ಟಾರ್ಚರ್ ಹೇಳುತ್ತಿದ್ದಳು.

ಈ ಹಿಂದೆಯೂ ಆತನ ಕಿರುಕುಳದ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು‌. ಆ ಕ್ಷಣಕ್ಕೆ ಮಾತ್ರ ಸರಿ ಹೋಗ್ತಿದ್ದ, ಈಗ ಕೊಲೆ ಮಾಡಿ ಅವಳೇ ಆತ್ಮಹತ್ಯೆ ಮಾಡಿಕೊಂಡಿರೋ ತರ ಕ್ರಿಯೇಟ್ ಮಾಡಿ ಪರಾರಿ ಆಗಿದ್ದಾನೆ ಕೂಡಲೇ ಅವನನ್ನು ಪತ್ತೆ ಹಚ್ಚಿ, ತಕ್ಕ ಶಿಕ್ಷೆ ವಿಧಿಸಬೇಕಿದೆ ಎಂದು ಮೃತಳ ತಾಯಿ ಆಗ್ರಹಿಸಿದರು.

ಬೆಂಗಳೂರು: ಮೋಜು ಮಾಡಲು ಬೈಕ್‌ ಕದಿಯುತ್ತಿದ್ದವರ ಬಂಧನ

ಇನ್ನೂ ಮೃತಳ ಮಹಿಳೆಗೆ ತನ್ನ ಪತಿಯ ಕಿರುಕುಳ ನಿನ್ನೆ ಮೊನ್ನೆಯದಲ್ಲ, ಅಕ್ಕ ಪಕ್ಕದ ನಿವಾಸಿಗಳು ಕೂಡು ಇವನ ಆಟಾಟೋಪಕ್ಕೆ ಬೇಸತ್ತು ಹೋಗಿದ್ರು. ನಿನ್ನೆ ಮೃತ ಮಹಿಳೆಯ ಹುಟ್ಟು ಹಬ್ಬ ಇದ್ದ ಕಾರಣ ದೇವಸ್ಥಾನ ಹೋಗಿ ಬರೋಣ ಬನ್ನಿ ಎಂದು ಕೇಳಿದ್ದಕ್ಕೆ ಆರೋಪಿ ಕಿರಣ್ ಜಗಳ ಶುರು ಮಾಡಿ ಆಕೆಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಗಲಾಟೆ ಬಳಿಕ ಸುತ್ತಮುತ್ತಲಿನ ಮನೆಯವರಿಗೆ ನನ್ನ ಹೆಂಡತಿಯೇ ಪದೇ ಪದೇ‌ ಗಲಾಟೆ ಮಾಡ್ತಿದ್ದಾಳೆ‌ ಎಂದು ಡ್ರಾಮಾ ಮಾಡಿದ್ದಾನೆ. ಕಳೆದ ಮೂರು ದಿನಗಳಿಂದ ಮೃತ ಮಹಿಳೆ ಊಟ ಕೂಡ ಮಾಡದೇ ಬೇಸರದಿಂದ ಇದ್ದಳು. ನಿತ್ಯ ಕುಡಿದು, ಗಾಂಜಾ ಸೇದಿ ಬಂದು ಜಗಳ ಮಾಡುತ್ತಿದ್ದನು. ತನ್ನ ಕಣ್ಮುಂದೆ ಮೂರು ವರ್ಷದ ಪುಟ್ಟ ಕಂದಮ್ಮನನ್ನು ಬಿಟ್ಟು ಆಕೆ ಯಾಕೆ ಸುಸೈಡ್ ಮಾಡ್ಕೊಳ್ತಾರೆ. ಕೊಲೆ ಮಾಡಿ ನೇಣು ಹಾಕಿ ಈಗ ಬೇರೆ ರೀತಿ ಕಥೆ ಕಟ್ತಿದ್ದಾನೆ ಅವನ್ನು ಪತ್ತೆ ಹಚ್ಚಿ, ಜೈಲಿಗೆ ಕಳಿಸಬೇಕು ಎಂದು ಸಂಬಂಧಿಕರು ಒತ್ತಾಯಿಸಿದರು.

BELAGAVI: ಪತ್ನಿಯೊಂದಿಗೆ ಅಕ್ರಮ ಸಂಬಂಧ ಸಂಶಯಕ್ಕೆ ಅಣ್ಣನನ್ನೇ ಕೊಂದ ತಮ್ಮ

ಇತ್ತ ಹುಟ್ಟು ಹಬ್ಬದ ಆಚರಣೆ ಮಾಡಿಕೊಳ್ಳುವ ಖುಷಿಯಲ್ಲಿ ಇರಬೇಕಿದ್ದ ಮಹಿಳೆ ನೇಣು ಬೀಗಿದ ಸ್ಥಿತಿಯಲ್ಲಿ ಶವವಾಗಿರೋದು ನಿಜಕ್ಕೂ ದುರಂತವೇ ಸರಿ. ಆದ್ರೆ ಇದು ಕೊಲೆಯೋ? ಆತ್ಮಹತ್ಯೆಯೋ? ಎಂಬುದು ತನಿಖೆ ಮೂಲಕ ಬಯಲಾಗಬೇಕಿದೆ. ಅದೇನೆ ಇರ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ, ತಾಯಿಯ ಸಾವಿನಿಂದ 3 ವರ್ಷದ ಗಂಡು ಮಗು ಅನಾಥವಾಗಿದ್ದು ತುಂಬಾ ‌ನೋವಿನ ಸಂಗತಿ.

Follow Us:
Download App:
  • android
  • ios