Sukesh Fraud Case: ಪಿಎಂ ಕಚೇರಿ ಹೆಸರಲ್ಲಿ ಮಹಿಳೆಗೆ ಸುಕೇಶ್‌ 200 ಕೋಟಿ ಟೋಪಿ..!

*  ಜೈಲಲ್ಲೇ ಕುಳಿತು 200 ಕೋಟಿ ರು. ಸುಲಿಗೆ ಮಾಡಿದ್ದ ಸುಕೇಶ್‌
*  ಪ್ರಧಾನಿ ಕಚೇರಿ ಅಧಿಕಾರಿ ಎಂದು ನಂಬಿಸಿ ಫೋನಲ್ಲೇ ಮೋಸ
*  Ranbaxy ಮಾಜಿ ಮಾಲೀಕನ ಪತ್ನಿಯಿಂದ ಭರ್ಜರಿ ಸುಲಿಗೆ
 

Sukesh Chandrasekhar 200 Crore Fraud to Woman in the Name of PM Office grg

ನವದೆಹಲಿ(ಡಿ.20):  ಪ್ರಭಾವಿ ರಾಜಕಾರಣಿಗಳ ಆಪ್ತ ಎಂಬ ಸೋಗಿನಲ್ಲಿ ಹಲವು ಮಂದಿಗೆ ವಂಚನೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಬೆಂಗಳೂರು(Bengaluru) ಮೂಲದ ಸುಕೇಶ್‌ ಚಂದ್ರಶೇಖರ್‌ನ(Sukesh Chandrashekhar) ಒಂದೊಂದೇ ಕರ್ಮಕಾಂಡಗಳು ಈಗ ಬಯಲಾಗುತ್ತಿವೆ. ತಾನು ಪ್ರಧಾನಿ ಕಚೇರಿಯ ಅಧಿಕಾರಿ ಎಂದು ನಂಬಿಸಿ ಜೈಲಲ್ಲೇ ಕುಳಿತು Ranbaxy ಕಂಪನಿಯ(Ranbaxy Company) ಮಾಜಿ ಮಾಲೀಕ ಶಿವಿಂದರ್‌ ಸಿಂಗ್‌ ಅವರ ಪತ್ನಿ ಅದಿತಿ ಸಿಂಗ್‌ ಬಳಿ ಬರೋಬ್ಬರಿ 200 ಕೋಟಿ ರು.ಗಳನ್ನು ಸುಕೇಶ್‌ ಸುಲಿಗೆ ಮಾಡಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಅ.22ರಂದು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಸುಕೇಶ್‌ ಹಾಗೂ ಅದಿತಿ ಸಿಂಗ್‌ ಅವರ ಸೋದರಿ ಅರುಂಧತಿ ಖನ್ನಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಅದರ ವಿವರ ತನಗೆ ಲಭ್ಯವಾಗಿದೆ. 2020ರ ಜೂನ್‌ನಿಂದ 2021ರ ಮೇ ಅವಧಿಯಲ್ಲಿ ಈ ವಂಚನೆ ನಡೆದಿದೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.

Link with Conman Sukesh: ಜಾಕ್ವೆಲಿನ್‌, ನೋರಾ ಫತೇಹಿಗೂ ಸುಖೇಶ್ ಚಂದ್ರಶೇಖರ್‌ಯಿಂದ ಗಿಫ್ಟ್

ಶಿವಿಂದರ್‌ ಸಿಂಗ್‌ ಅವರು ಪ್ರಕರಣವೊಂದರ ಸಂಬಂಧ ಜೈಲಿನಲ್ಲಿದ್ದಾರೆ. ಅವರನ್ನು ಜಾಮೀನಿನ(Bail) ಮೇಲೆ ಬಿಡುಗಡೆ ಮಾಡಿಸಲು ಅದಿತಿ ಸಿಂಗ್‌ ಪ್ರಯತ್ನಿಸುತ್ತಿದ್ದಾರೆ. ಈ ವಿಷಯ ತಿಳಿದಿದ್ದ ಸುಕೇಶ್‌, ‘ಅಭಿನವ್‌’ ಎಂಬ ಹೆಸರಿನಲ್ಲಿ ಅದಿತಿ ಅವರನ್ನು ಪರಿಚಯಿಸಿಕೊಂಡಿದ್ದ. ತಾನು ಪ್ರಧಾನಮಂತ್ರಿಗಳ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದೇನೆ. ಆದಾಯ ತೆರಿಗೆ(Income Tax), ಗುಪ್ತಚರ ದಳ ಹಾಗೂ ಕಾನೂನು ಇಲಾಖೆಗಳು ತನ್ನ ಅಧೀನಕ್ಕೆ ಬರುತ್ತವೆ. ಆಯ್ದ ಕುಟುಂಬಗಳ ಜತೆ ಮಾತನಾಡಲು ತನ್ನನ್ನು ನಿಯೋಜಿಸಲಾಗಿದೆ ಎಂದು ಹೇಳಿಕೊಂಡಿದ್ದ.

ಮೊಬೈಲ್‌ ಆ್ಯಪ್‌(Mobile App) ಹಾಗೂ ಧ್ವನಿ ಬದಲಿಸುವ ಸಾಫ್ಟ್‌ವೇರ್‌ಗಳನ್ನು(Software) ಬಳಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ತಾನೇ ಅದಿತಿ ಅವರ ಜತೆ ಮಾತನಾಡಿದ್ದ. ಈ ವೇಳೆ ನಾನೂ ಆತನ ಜತೆ ಮಾತನಾಡಿದ್ದೇನೆ. ಜೈಲಿನಲ್ಲೇ ಕುಳಿತು 200 ಕೋಟಿ ರು.ಗಳನ್ನು ಅದಿತಿ ಅವರಿಂದ ಆತ ವರ್ಗಾಯಿಸಿಕೊಂಡಿದ್ದ ಎಂದು ಅರುಂಧತಿ ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.

ನಟಿಯರ ಭೇಟಿಗೆ ಅಧಿಕಾರಿಗಳಿಗೆ ಕೋಟಿ ಕೋಟಿ ಕೊಟ್ಟಿದ್ದ ಸುಕೇಶ್‌

ಕೇಂದ್ರ ಮಂತ್ರಿಗಳು, ಮುಖ್ಯಮಂತ್ರಿಗಳು ಸೇರಿದಂತೆ ರಾಜಕೀಯ ಗಣ್ಯರ ಹೆಸರು ಹೇಳಿಕೊಂಡು ವಂಚಿಸುವುದು ಸುಕೇಶ್‌ ಕಲೆ. ಇಂಥ ಕೃತ್ಯ ಹಾಗೂ 200 ಕೋಟಿ ರು. ಅಕ್ರಮ ಹಣ ವ್ಯವಹಾರ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಸುಕೇಶ್‌, ಹಲವು ಐಷಾರಾಮಿ ಸವಲತ್ತು ಪಡೆಯಲು ಹಾಗೂ ಬೇಕಾದ ‘ಮಹಿಳಾ ಅತಿಥಿ’ಗಳನ್ನು ಭೇಟಿಯಾಗಲು ತಿಹಾರ ಜೈಲಿನ ಸಿಬ್ಬಂದಿಗೆ ಪ್ರತೀ ತಿಂಗಳು 1 ಕೋಟಿ ರು. ಲಂಚವಾಗಿ ನೀಡುತ್ತಿದ್ದ ಎಂದು ಜಾರಿ ನಿರ್ದೇಶನಾಲಯ(ED) ಮೂಲಗಳು ಹೇಳಿವೆ.

ಜೈಲಿಂದಲೇ 200 ಕೋಟಿ ಸುಲಿಗೆ ಮಾಡಿದ ಬೆಂಗಳೂರಿನ ಸುಕೇಶ್‌!

‘ಜೈಲಿನಲ್ಲಿದ್ದಾಗ ತಾನು ಯಾರನ್ನು ಬೇಕಾದರೂ ಎಷ್ಟೊತ್ತು ಬೇಕಾದರೂ ಭೇಟಿಯಾಗಲು ಅವಕಾಶ ಪಡೆಯಲು ಜೈಲಿನ ಸಿಬ್ಬಂದಿಗೆ ಸುಕೇಶ್‌ ಲಂಚ ನೀಡಿದ್ದ. ಈ ಪ್ರಕಾರ ಸಿಬ್ಬಂದಿಗಳು ಜೈಲಿನಲ್ಲಿ ಸುಕೇಶ್‌ಗೆ ‘ಕಚೇರಿ’ ತೆಗೆಯಲು ಅವಕಾಶ ಕೊಟ್ಟಿದ್ದರು. ಈ ಕಚೇರಿಗೆ ಸುಕೇಶ್‌ ಪತ್ನಿ ಲೀನಾ ಮಾರಿಯಾ ಪಾಲ್‌ ಬೇಕೆಂದಾಗಲೆಲ್ಲಾ ಬಂದು ಹೋಗುತ್ತಿದ್ದರು. ಜತೆಗೆ ಸುಕೇಶ್‌ ಹಲವು ಚಿಕನ್‌ ಪಾರ್ಟಿಗಳನ್ನು ಏರ್ಪಡಿಸಿದ್ದು, ಈ ಪಾರ್ಟಿಗಳಿಗೆ ಜಾಕ್ವೆಲಿನ್‌ ಫರ್ನಾಂಡಿಸ್‌, ನೋರಾ ಅಷ್ಟೇ ಅಲ್ಲದೆ ಸುಮಾರು 10 ಬಾಲಿವುಡ್‌ ನಟಿಯರು(Bollywood Actress) ಮತ್ತು ಮಾಡೆಲ್‌ಗಳು ಬಂದು ಹೋಗಿದ್ದಾರೆ’ ಎಂದು ಅವು ಹೇಳಿವೆ.

ಸುಕೇಶ್‌ನ ಕಚೇರಿಯಲ್ಲಿ ಟೀವಿ, ರೆಫ್ರಿಜರೇಟರ್‌, ಸೋಫಾ, ಮಿನರಲ್‌ ನೀರಿನ ಬಾಟಲ್‌ಗಳು ಸೇರಿದಂತೆ ಇನ್ನಿತರ ಐಷಾರಾಮಿ ಸೌಲಭ್ಯಗಳಿದ್ದವು ಎಂದು ಸುಕೇಶ್‌ ಪತ್ನಿ ಹೇಳಿದ್ದಾಳೆ ಎಂದು ಮೂಲಗಳು ತಿಳಿಸಿವೆ.
 

Latest Videos
Follow Us:
Download App:
  • android
  • ios