ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ, ಆಕಸ್ಮಿಕವಾಗಿ ಅಜ್ಜಿ ಕೊಂದು ನೇಣಿಗೆ ಶರಣಾದ ಮಹಿಳೆ

* ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ
* ಆಕಸ್ಮಿಕವಾಗಿ ಅಜ್ಜಿ ಕೊಂದು ನೇಣಿಗೆ ಶರಣಾದ ಮಹಿಳೆ
* ಪ್ರತ್ಯೇಕವಾಗಿ ನಡೆದ ಘಟನೆಗಳು

Suicide Cases In Bengaluru And Tumakuru District rbj

ತುಮಕೂರು, (ಫೆ.27): ಕೌಟುಂಬಿಕ ಕಲಹಕ್ಕೆ ಮನನೊಂದು ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಪಾವಗಡ ತಾಲೂಕಿನ ಉಪ್ಪಾರಹಳ್ಳಿಯ ತಾಂಡದಲ್ಲಿ ನಡೆದಿದೆ.

ಬುಜ್ಜಿ ಬಾಯಿ (35), ಖುಷಿ (9), ಹರ್ಷಿತ (6) ಮೃತ ದುರ್ದೈವಿಗಳು. ಪತಿ ವೆಂಕಟೇಶ್ ಹಾಗೂ ಬುಜ್ಜಿಬಾಯಿ ನಡುವೆ ಪ್ರತಿದಿನ ಗಲಾಟೆಯಾಗುತ್ತಿತ್ತು. ನಿನ್ನೆ(ಶನಿವಾರ) ರಾತ್ರಿ ವೆಂಕಟೇಶ್ ಕುಡಿದು ಬಂದು ಪತ್ನಿ ಬುಜ್ಜಿಬಾಯಿ ಜೊತೆ ಗಲಾಟೆ ಮಾಡಿದ್ದಾನೆ. ಇದರಿಂದ ಮನನೊಂದ ಬುಜ್ಜಿಬಾಯಿ ತನ್ನಿಬ್ಬರು ಮಕ್ಕಳ ಜೊತೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Illicit Relationship: ಕುಡುಗೋಲಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ ಮಾಡಿದ ಗಂಡ

 ಈ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ತಿರುಮಣಿ ಪೊಲೀಸರು​ ಪ್ರಕರಣವನ್ನು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಆಕಸ್ಮಿಕವಾಗಿ ಅಜ್ಜಿ ಕೊಂದು ನೇಣಿಗೆ ಶರಣಾದ ಮಹಿಳೆ
ಬೆಂಗಳೂರು: ಮನೆಯಲ್ಲಿ ಆಕಸ್ಮಿಕವಾಗಿ ಅಜ್ಜಿಯನ್ನು ಗೋಡೆಗೆ ತಳ್ಳಿ ಸಾವಿಗೆ ಕಾರಣಳಾದ ನಂತರ 25 ವರ್ಷದ ಮಹಿಳೆಯೊಬ್ಬಳು ತಾನೂ ಕೂಡಾ ನೇಣಿಗೆ ಶರಣಾಗಿರುವ ಘಟನೆ ಜ್ಞಾನಭಾರತಿಯಲ್ಲಿ  ನಡೆದಿದೆ. ಮೃತರನ್ನು 70 ವರ್ಷದ ಜಯಮ್ಮ ಮತ್ತು 25 ವರ್ಷದ ಬಿ. ಕಾಂ ಪದವೀಧರೆ ಮಮತಾ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಾರುತಿ ಲೇಔಟ್ ನಿವಾಸಿಗಳು ಎಂದು ತಿಳಿದುಬಂದಿದೆ.

ಗುರುವಾರ ಸಂಜೆ 4-30 ರ ಸುಮಾರಿನಲ್ಲಿ ಜಯಮ್ಮ ಅವರೊಂದಿಗೆ ಜಗಳವಾಡಿರುವ ಮಮತಾ, ಗೋಡೆಯ ಕಡೆಗೆ ಜಯಮ್ಮ ಅವರನ್ನು ತಳ್ಳಿದ್ದಾರೆ. ಕೂಡಲೇ ಕೆಳಗೆ ಬಿದ್ದ ಜಯಮ್ಮ ರಕ್ರಸ್ತಾವಗೊಂಡು ಸಾವನ್ನಪ್ಪಿದ್ದಾರೆ. ಇದರಿಂದ ಆತಂಕಗೊಂಡ ಮಮತಾ ಬೆಡ್ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಮಮತಾಳ ಸಹೋದರ ಚೇತನ್ ಕೆಲಸ ಮುಗಿಸಿ ಮನೆಗೆ ಮರಳಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅವರು ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಅನಾರೋಗ್ಯದಿಂದ 3 ತಿಂಗಳ ಮಗು ಸಾವನ್ನಪ್ಪಿದ್ದ ನಂತರ ಮಮತಾ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕುಡುಗೋಲಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ ಮಾಡಿದ ಗಂಡ
ಅನೈತಿಕ ಸಂಬಂಧ(Illicit Relationship) ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಭೀಕರವಾಗಿ ಕೊಂದು(Murder) ಬಳಿಕ ಗೋವಿಂದಪುರ ಠಾಣೆಗೆ ಬಂದು ಪತಿ ಶರಣಾಗಿದ್ದಾನೆ.

ಭೈರಪ್ಪ ಲೇಔಟ್‌ನ ಆಯಿಷಾ ಬಾನು(31) ಹತ್ಯೆಗೀಡಾದ ದುರ್ದೈವಿ. ಮುಜಾಮಿಲ್ ಪಾಷ ಕೊಲೆ ಮಾಡಿದ ಆರೋಪಿ(Accused). ಕೌಟುಂಬಿಕ ಕಲಹಕ್ಕೆ ಶುಕ್ರವಾರ ರಾತ್ರಿ ದಂಪತಿ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ಆರೋಪಿ, ಕುಡುಗೋಲಿನಿಂದ ಹಲ್ಲೆ ನಡೆಸಿ ಪತ್ನಿಯನ್ನು ಕೊಂದಿದ್ದಾನೆ. ನಂತರ ತನ್ನ ಮೂವರು ಮಕ್ಕಳನ್ನು ಸೋದರಿ ಮನೆಗೆ ಬಿಟ್ಟು ಅಲ್ಲಿಂದ ಸೀದಾ ಠಾಣೆಗೆ(Police Station) ಬಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹನ್ನೆರಡು ವರ್ಷಗಳ ಹಿಂದೆ ಆಯಿಷಾ ಹಾಗೂ ಆಟೋ ಚಾಲಕ ಮುಜಾಮಿಲ್ ವಿವಾಹವಾಗಿದ್ದು, ಈ ದಂಪತಿಗೆ ರೆಯಾನ್(10), ಫರಾಹ(8) ಹಾಗೂ ಹರ್ ಮಾಯಿದ್(6) ಎಂಬ ಹೆಸರಿನ ಮಕ್ಕಳಿವೆ. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಪತ್ನಿ ತನ್ನನ್ನು ಹತ್ತಿರ ಸೇರಿಸುತ್ತಿರಲಿಲ್ಲ ಎಂದು ಕೋಪಗೊಂಡಿದ್ದ ಪಾಷ, ಪತ್ನಿ ಪರಪುರುಷನ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ. 

ಇದೇ ವಿಷಯವಾಗಿ ಪ್ರತಿದಿನ ಪತ್ನಿ ಮೇಲೆ ಗಲಾಟೆ ಮಾಡುತ್ತಿದ್ದ. ಬಳಿಕ ಹಿರಿಯರು ರಾಜಿ ಸಂಧಾನ ಮೂಲಕ ದಂಪತಿ ಭಿನ್ನಾಭಿಪ್ರಾಯ ಬಗೆಹರಿಸಲು ಯತ್ನಿಸಿ ವಿಫಲರಾಗಿದ್ದರು. ಅಂತೆಯೇ ಶುಕ್ರವಾರ ರಾತ್ರಿ ಸಹ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ಮನೆಯಲ್ಲಿದ್ದ ಕುಡುಗೋಲಿಂದ ಕೊಚ್ಚಿ ಪತ್ನಿಯ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

Latest Videos
Follow Us:
Download App:
  • android
  • ios