Asianet Suvarna News Asianet Suvarna News

ಪುತ್ರನನ್ನೇ ಕೊಂದ ತಾಯಿ: ಹತ್ಯೆಗೂ ಮುನ್ನ ಮಗನಿಗೆ ಕಾಲ್‌ ಮಾಡಿದ್ದ ತಂದೆ..!

10 ವರ್ಷಗಳ ದಾಂಪತ್ಯದ ನಂತರ 2020ರಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕೋರ್ಟು, ಪ್ರತಿ ಭಾನುವಾರ ತಂದೆ-ಮಗನ ಭೇಟಿಗೆ ಅವಕಾಶ ನೀಡಬೇಕು ಎಂದು ಸೂಚಿಸಿತ್ತು. ತಂದೆ ವೆಂಕಟರಾಮನ್‌ ಇಂಡೋನೇಷ್ಯಾಗೆ ಹೋಗಿದ್ದ ಕಾರಣ ಮಗನನ್ನು ಖುದ್ದು ಭೇಟಿ ಮಾಡಲು ಆಗಿರಲಿಲ್ಲ. ಹೀಗಾಗಿ ವಿಡಿಯೋ ಕಾಲ್‌ನಲ್ಲಿ ಮಾತುಕತೆ ನಡೆದಿತ್ತು

Suchana Husband Raman Called his son before the Killing grg
Author
First Published Jan 11, 2024, 8:46 AM IST

ಪಣಜಿ(ಜ.11):  ಬೆಂಗಳೂರು ಮೂಲದ ಸಿಇಒ ಸೂಚನಾ ಸೇಠ್ ವಿಚ್ಛೇದಿತ ಪತಿ ವೆಂಕಟ್ ರಾಮನ್ ಅವರು ಜ.7ರಂದು ಇಂಡೋನೇಷ್ಯಾದಿಂದ ವಿಡಿಯೋ ಕರೆಯಲ್ಲಿ 4 ವರ್ಷದ ಮಗನೊಂದಿಗೆ ಮಾತನಾಡಿದ್ದರು. ಗೋವಾದಲ್ಲಿ ಸಂಭವಿಸಿದ ಮಗನ ಕೊಲೆಗೂ ಕೆಲವು ಗಂಟೆಗಳ ಮುನ್ನ ನಡೆದ ಮಾತುಕತೆ ಅದಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

10 ವರ್ಷಗಳ ದಾಂಪತ್ಯದ ನಂತರ 2020ರಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕೋರ್ಟು, ಪ್ರತಿ ಭಾನುವಾರ ತಂದೆ-ಮಗನ ಭೇಟಿಗೆ ಅವಕಾಶ ನೀಡಬೇಕು ಎಂದು ಸೂಚಿಸಿತ್ತು. ತಂದೆ ವೆಂಕಟರಾಮನ್‌ ಇಂಡೋನೇಷ್ಯಾಗೆ ಹೋಗಿದ್ದ ಕಾರಣ ಮಗನನ್ನು ಖುದ್ದು ಭೇಟಿ ಮಾಡಲು ಆಗಿರಲಿಲ್ಲ. ಹೀಗಾಗಿ ವಿಡಿಯೋ ಕಾಲ್‌ನಲ್ಲಿ ಮಾತುಕತೆ ನಡೆದಿತ್ತು ಎಂದು ತಿಳಿದುಬಂದಿದೆ.

ಗಂಡ 9 ಲಕ್ಷ ದುಡಿತಾನೆ: ನಿರ್ವಹಣೆಗೆ ತಿಂಗಳಿಗೆ 2.5 ಲಕ್ಷ ಕೊಡ್ಬೇಕು : ಮಗನನ್ನೇ ಕೊಂದ ಲೇಡಿ ಸಿಇಒ

ಈ ಕರೆಯ ಬಳಿಕ ಹತ್ಯೆ ನಡೆದಿರುವ ಕಾರಣ, ಕರೆಯಲ್ಲೇನಾದರೂ ಸೂಚನಾಗೂ ವೆಂಕಟರಾಮನ್‌ಗೂ ಬಿಸಿಬಿಸಿ ವಾಗ್ವಾದ ನಡೆದಿರಬಹುದು. ಇದು ಸೂಚನಾ, ಮಗನ ಹತ್ಯೆ ಮಾಡಲು ಕಾರಣ ಆಗಿರಬಹುದು ಎಂದು ಶಂಕಿಸಲಾಗಿದೆ. 6 ದಿನ ಗೋವಾ ಪೊಲೀಸ್‌ ಕಸ್ಟಡಿಯಲ್ಲಿರುವ ಸೂಚನಾಳ ವಿಚಾರಣೆ ಮುಂದುವರಿದಿದೆ. ಪೊಲೀಸ್ ಮೂಲಗಳ ಪ್ರಕಾರ, ವಿಚಾರಣೆ ವೇಳೆ ಸೂಚನಾ ಸೇಠ್ ಮಾನಸಿಕವಾಗಿ ಆರೋಗ್ಯವಾಗಿದ್ದಂತೆ ಕಂಡುಬಂದಿದೆ.

ಪತಿ ಮೇಲೆ ಗೃಹ ಹಿಂಸೆ ಆರೋಪ:

ಈ ನಡುವೆ ವಿಚ್ಛೇದನ ಅರ್ಜಿಯಲ್ಲಿ ಸೂಚನಾ, ಪತಿ ವೆಂಕಟರಾಮನ್‌ ಮೇಲೆ ಗೃಹ ಹಿಂಸೆ ಆರೋಪ ಹೊರಿಸಿದ್ದಳು ಎಂದು ತಿಳಿದುಬಂದಿದೆ.

Follow Us:
Download App:
  • android
  • ios