ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ!
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಪ್ರಕರಣ ಪೋಷಕರನ್ನು ಬೆಚ್ಚಿಬೀಳಿಸಿದೆ!
ಬೆಂಗಳೂರು ಜು.28: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಪೋಷಕರನ್ನು ಬೆಚ್ಚಿಬೀಳಿಸಿದೆ.. ಹರ್ಷಿತಾ ಹಾಗೂ ಮರಿಟಾ ವೈಶಾಲಿ ಎಂಬ ಇಬ್ಬರು ನಾಪತ್ತೆಯಾದ ವಿದ್ಯಾರ್ಥಿನಿಯರು. ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಬಗ್ಗೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ 25 ನೇ ತಾರೀಖು ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರು. ಪರಸ್ಪರ ಒಳ್ಳೆಯ ಸ್ನೇಹಿತರಾಗಿದ್ದರು. ಇವರಿಬ್ಬರೂ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ.
ಕಾಲೇಜಿಗೆ ಹೋದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ!
ನಾವಿನ್ನೂ ಮನೆಗೆ ಬರಲ್ಲ ಹುಡುಕಬೇಡಿ: ವಿದ್ಯಾರ್ಥಿನಿಯರು ನಾಪತ್ತೆಯಾಗುವ ಮೊದಲು "ನಾವಿನ್ನು ಮನೆಗೆ ಬರುವುದಿಲ್ಲ ಹುಡುಕುವ ಪ್ರಯತ್ನ ಬೇಡ" ಎಂದು ತಿಳಿಸಿ ನಾಪತ್ತೆಯಾಗಿದ್ದಾರೆ..ಯಾಕೆ ನಾಪತ್ತೆಯಾಗಿದ್ದಾರೆ, ಎಲ್ಲಿ ಹೋಗಿದ್ದಾರೆ, ಈ ನಾಪತ್ತೆಯ ಹಿಂದೆ ಯಾರದಾದರೂ ಕೈವಾಡ ಇದೆಯಾ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ. ಸದ್ಯ ಹೈಗ್ರೌಂಡ್ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು ನಾಪತ್ತೆಯಾದ ವಿದ್ಯಾರ್ಥಿನಿಯರ ಹುಡುಕಾಟ ನಡೆಸಿದ್ದಾರೆ.