ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ವಿದ್ಯಾರ್ಥಿನಿಯರ ಆಶ್ಲೀಲ ವಿಡಿಯೋ ತೆಗೆದು ಕುಚೇಷ್ಟೆಮಾಡಿದ್ದ ಅದೇ ಕಾಲೇಜಿನ ಹಳೇ ವಿದ್ಯಾರ್ಥಿಯೊಬ್ಬನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಫೆ.21) : ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ವಿದ್ಯಾರ್ಥಿನಿಯರ ಆಶ್ಲೀಲ ವಿಡಿಯೋ ತೆಗೆದು ಕುಚೇಷ್ಟೆಮಾಡಿದ್ದ ಅದೇ ಕಾಲೇಜಿನ ಹಳೇ ವಿದ್ಯಾರ್ಥಿಯೊಬ್ಬನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ವೈಟ್‌ಫೀಲ್ಡ್(Whitefield) ನಿವಾಸಿಯಾದ ಯುವಕ ಬಂಧಿತನಾಗಿದ್ದು, ಜಯನಗರ 7ನೇ ಹಂತ ಸಮೀಪದ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ಕಾಲೇಜಿನ ಈ ಕೃತ್ಯ ನಡೆದಿದ್ದು, ಕಾಲೇಜಿನ ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
₹99 ಸಾವಿರ ಕೋಟಿಗೆ ಸೂಪರ್ ಟ್ಯಾಕ್ಸ್ ಹೆಸರಲ್ಲಿ ಉದ್ಯಮಿಗೆ ₹40 ಲಕ್ಷ ಟೋಪಿ!
ಫೆ.17ರಂದು ಕಾಲೇಜಿನ 1ನೇ ಮಹಡಿಯಲ್ಲಿರುವ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ತೆರಳಿದ ಆರೋಪಿ, ಪಕ್ಕದ ಶೌಚಗೃಹದಲ್ಲಿ ಮೊಬೈಲ್ ಇಟ್ಟು ವಿದ್ಯಾರ್ಥಿನಿಯರ ಆಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿದ್ದ. ಆಗ ಶೌಚ ಗೃಹದಲ್ಲಿ ಮೊಬೈಲ್ ನೋಡಿ ವಿದ್ಯಾರ್ಥಿನಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ಚೀರಾಟ ಕೇಳಿದ ಕೆಲ ವಿದ್ಯಾರ್ಥಿನಿಯರು ಶೌಚಾಲಯ ಬಳಿಗೆ ಧಾವಿಸಿದ್ದಾರೆ. ಆಗ ಅಲ್ಲಿಂದ ತಪ್ಪಿಸಿಕೊಲು ಯತ್ನಿಸಿದ್ದಾನೆ. ಕೂಡಲೇ ಬೆನ್ನುಹತ್ತಿ ಕಿಡಿಗೇಡಿಯನ್ನು ವಿದ್ಯಾರ್ಥಿನಿಯರು ಸೆರೆ ಹಿಡಿದಿದ್ದಾರೆ. ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ ಆಶ್ಲೀಲ ಚಿತ್ರ ಪತ್ತೆಯಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಘಟನೆ ಬಗ್ಗೆ ಪ್ರಾಂಶುಪಾಲರು ದೂರು ಸಲ್ಲಿಸಿದ್ದಾರೆ. ಅದರನ್ವಯ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇರೊಬ್ಬನ ಜೊತೆ ಪತ್ನಿಯ ಸರಸ, ಪ್ರಶ್ನಿಸಿದ ಗಂಡ ಅತ್ತೆಯ ಹೈತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ ಚಾಲಕಿ ಸುಂದರಿ!
ಅಂಕಪಟ್ಟಿನೀಡದ್ದಕ್ಕೆ ವಿಡಿಯೋ: ಆರೋಪಿ
ಆ ಕಾಲೇಜಿನಲ್ಲಿ ಪದವಿ ಓದಿಗೆ ಅರ್ಧಕ್ಕೆ ಇತಿಶ್ರೀ ಹಾಡಿದ್ದ ಆರೋಪಿ, ಕೆಲಸವಿಲ್ಲದೆ ಅಲೆಯುತ್ತಿದ್ದ. ತನಗೆ ಅಂಕಪಟ್ಟಿನೀಡದ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ. ಆದರೆ ಆರೋಪಿಗೆ ಅಂಕಪಟ್ಟಿಹೇಳಿಕೆ ಸುಳ್ಳು ಎಂದು ಕಾಲೇಜು ಪ್ರಾಂಶುಪಾಲರು ಸ್ಪಷ್ಟಪಡಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
