ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಗೆ ಮಾರಣಾಂತಿಕ ಹಲ್ಲೆ!

ಪ್ರೀತಿ ನಿರಾಕರಿಸಿದಳು ಎನ್ನುವ ಕಾರಣಕ್ಕೆ ಕಾಲೇಜು ವಿದ್ಯಾರ್ಥಿನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಈ ವೇಳೆ ಪಾಗಲ್‌ ಪ್ರೇಮಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

student who refused love was fatally attacked in mandya san

ಮಂಡ್ಯ(ಜುಲೈ 21): ಪ್ರೀತಿ ನಿರಾಕರಿಸಿದಳು ಎನ್ನುವ ಕಾರಣಕ್ಕೆ ಮಂಡ್ಯದಲ್ಲಿ 20 ವರ್ಷದ ನವ್ಯಾ ಎನ್ನುವ ವಿದ್ಯಾರ್ಥಿನಿಯ ಮೇಲೆ ಪಾಗಲ್‌ ಪ್ರೇಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕಾಲೇಜು ಬಿಡುವವರೆಗೂ ಹೊಂಚು ಹಾಕಿ, ಹೊರಬರುತ್ತಿದ್ದಂತೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಕ್ಕಪಕ್ಕದಲ್ಲಿಯೇ ಇದ್ದ ಸ್ಥಳೀಯರು ಪಾಗಲ್‌ ಪ್ರೇಮಿಗೆ ಧರ್ಮದೇಟು ಕೊಟ್ಟು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮಂಡ್ಯದ ಮೆಡಿಕಲ್ ಕಾಲೇಜು ಆವರಣದಲ್ಲಿ ಘಟನೆ ನಡೆದಿದೆ. ವೈ.ಯರಹಳ್ಳಿ ಗ್ರಾಮದ ನವ್ಯಾ ಹಲ್ಲೆಗೊಳಗಾದ ವಿದ್ಯಾರ್ಥಿನಿ. ಪ್ಯಾರಾ ಮೆಡಿಕಲ್ ಓದುತ್ತಿದ್ದ ನವ್ಯಾ ಮೇಲೆ ಸಂಪತ್‌ಕುಮಾರ್‌ ಎನ್ನುವ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಒಂದೇ ಗ್ರಾಮದ ನವ್ಯಾ, ಸಂಪತ್ ಕುಮಾರ್ 2 ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಯ ವಿಚಾರ ತಿಳಿದಾಗ ನವ್ಯಾ ಅವರ ತಂದೆ ಪರಮೇಶ್‌, ಸಂಪತ್‌ಕುಮಾರ್‌ನನ್ನು ಕರೆದು ಬುದ್ಧಿ ಮಾತು ಹೇಳಿದ್ದರು. ಪ್ರೀತಿ ಪ್ರೇಮ ಬಿಟ್ಟು ಓದಿನ ಕಡೆ ಗಮನ ನೀಡುವಂತೆ ಬೈದು ಬುದ್ಧಿ ಮಾತು ಹೇಳಿದ್ದರು. ಆ ಬಳಿಕ ನವ್ಯಾ, ಸಂಪತ್‌ಕುಮಾರ್ ಜೊತೆ ಅಂತರ ಕಾಯ್ದುಕೊಂಡಿದ್ದರು. ಈ ನಡುವೆ ಸಂಪತ್‌ ಕುಮಾರ್ ಪದೇ ಪದೇ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ. ಇತ್ತೀಚೆಗಷ್ಟೇ ನವ್ಯಾ, ಸ್ನೇಹಿತರ ಜೊತೆಗೂಡಿ ಜನ್ಮದಿನ ಆಚರಣೆ ಮಾಡಿಕೊಂಡಿದ್ದರು. ನನ್ನ ಜೊತೆ ಬರದೇ ಸ್ನೇಹಿತರೊಂದಿಗೆ ಜನ್ಮದಿನ ಆಚರಿಸಿಕೊಂಡಿದ್ದಕ್ಕದೆ, ನವ್ಯಾ ಮನೆಯಲ್ಲಿ ಒಬ್ಬಳೇ ಇದ್ದಾಗ ಅವರ ಮನೆಗೆ ಹೋಗಿ ಗಲಾಟೆ ಮಾಡಿದ್ದ.

ಬೆದರಿಕೆ ಹಾಕಿದ್ದ ಸಂಪತ್‌ ಕುಮಾರ್‌: ಈ ನಡುವೆ ಸಂಪತ್‌ ಕುಮಾರ್‌, ಇಬ್ಬರು ಜತೆಯಲ್ಲಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ನವ್ಯಾಗೆ ಬೆದರಿಕೆ ಹಾಕಿದ್ದ. ಆಗಲೂ ನವ್ಯಾ ಅವರ ತಂದೆ ಪರಮೇಶ್‌ ಬೈದು ಬುದ್ಧಿ ಮಾತು ಹೇಳಿ ಕಳುಹಿಸಿದ್ದರು. ಗುರುವಾರ ಬೆಳಗ್ಗೆಯಿಂದಲೂ ಕಾಲೇಜು ಬಳಿಯೇ ಆಕೆಯ ಮೇಲೆ ಹಲ್ಲೆ ಮಾಡಲು ಹೊಂಚು ಹಾಕಿ ಸಂಪತ್‌ ಕುಳಿತಿದ್ದ, ಅದಕ್ಕಾಗಿ ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್ ನಲ್ಲಿ ರಿಪೀಸ್ ಬಟ್ಟಿ ತಂದಿದ್ದ.ಸಂಜೆ ಕಾಲೇಜಿನಿಂದ ನವ್ಯಾ ಹೊರಗೆ ಬರುತ್ತಿದ್ದಂತೆ ಏಕಾಏಕಿ ಹಲ್ಲೆ.

ಗಂಭೀರವಾಗಿ ಗಾಯಗೊಂಡಿದ್ದ ನವ್ಯಾಳನ್ನ ಆಕೆಯ ಸ್ನೇಹಿತೆಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇತ್ತ ಹಲ್ಲೆ ನಡೆಸಿದ ಸಂಪತ್ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ್ದಲ್ಲದೆ,  ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Latest Videos
Follow Us:
Download App:
  • android
  • ios