Bengaluru: 10ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು: ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ?
12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಖಾಸಗಿ ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಫೆ.27): 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಖಾಸಗಿ ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಂಜಯನಗರದ ಸಾಫ್ಟ್‌ವೇರ್ ಎಂಜಿನಿಯರ್ ಅರವಿಂದ್ ಹಾಗೂ ತೇಜು ಕೌಶಿಕ್ ದಂಪತಿಯ ಪುತ್ರಿ ಪ್ರಕೃತಿ (18) ಮೃತ ವಿದ್ಯಾರ್ಥಿನಿ. ನಗರದ ಕೇಂದ್ರ ಭಾಗದ ಚಾಲುಕ್ಯ ವೃತ್ತದ ಹೈ ಪಾಯಿಂಟ್-3 ಖಾಸಗಿ ಅಪಾರ್ಟ್‌ಮೆಂಟ್ ಬಳಿ ಭಾನುವಾರ ಸಂಜೆ 6.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಪ್ರಕೃತಿ ಚಾಲುಕ್ಯ ಸರ್ಕಲ್ ಸಮೀಪದ ಸೋಫಿಯಾ ಕಾಲೇಜಿನಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಭಾನುವಾರ ಮಧ್ಯಾಹ್ನ ಮನೆಯಲ್ಲಿ ಯಾರಿಗೂ ಹೇಳದೆ ಹೊರಗೆ ಬಂದಿದ್ದಳು. ಈ ನಡುವೆ ಮೊಬೈಲ್‌ಗೆ ಕರೆ ಮಾಡಿದ್ದ ತಾಯಿಗೆ ಸ್ವಲ್ಪ ಸಮಯ ಹೊರಗೆ ಸುತ್ತಾಡಿಕೊಂಡು ಬರುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿದ್ದಳು. ಸಂಜೆ ಸುಮಾರು 6.30ಕ್ಕೆ ಚಾಲುಕ್ಯ ವೃತ್ತದ ಹೈ ಪಾಯಿಂಟ್-3 ಅಪಾರ್ಟ್‌ಮೆಂಟ್ ಬಳಿ ಬಂದಿದ್ದಾಳೆ. ಈ ವೇಳೆ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಅಪಾರ್ಟ್‌ಮೆಂಟ್ ಗೇಟ್ ಬಳಿ ಬಂದಾಗ ಸೆಕ್ಯೂರಿಟಿ ಗಾರ್ಡ್ ಆಕೆಯನ್ನು ಪ್ರಶ್ನೆ ಮಾಡಿದ್ದಾನೆ.
ಕಾರಿನಲ್ಲಿ ಸಿಗರೆಟ್ ಸೇವನೆ ಅಪರಾಧ ಎಂದು 95000 ಸುಲಿದ ನಕಲಿ ಪೊಲೀಸ್
ಸ್ನೇಹಿತೆ ನೆಪದಲ್ಲಿ ಪ್ರವೇಶ: ನಾಲ್ಕನೇ ಮಹಡಿಯಲ್ಲಿ ಇರುವ ಸ್ನೇಹಿತೆಯನ್ನು ನೋಡಬೇಕು ಎಂದು ಹೇಳಿದ ಪ್ರಕೃತಿ ಅಪಾರ್ಟ್‌ಮೆಂಟ್ ಪ್ರವೇಶಿಸಿದ್ದಾಳೆ. ಬಳಿಕ ಲಿಫ್‌್ಟಮುಖಾಂತರ 10ನೇ ಮಹಡಿಗೆ ಹೋಗಿ ಏಕಾಏಕಿ ಜಿಗಿದಿದ್ದಾಳೆ. ಕಾರಿನ ಮೇಲೆ ಬಿದ್ದು ಕೈ-ಕಾಲು ಮುರಿದು, ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಘಟನೆಯಿಂದ ಬೆಚ್ಚಿದ ಅಪಾರ್ಟ್‌ಮೆಂಟ್ ನಿವಾಸಿಗಳು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Bengaluru: ನಿರ್ಮಾಣ ಹಂತ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವು
ಮೊಬೈಲ್, 300 ಪತ್ತೆ: ಘಟನಾ ಸ್ಥಳಕ್ಕೆ ಬಂದ ಹೈಗ್ರೌಂಡ್‌್ಸ ಠಾಣೆ ಪೊಲೀಸರು, ಪರಿಶೀಲನೆ ಮಾಡಿದಾಗ ಮೃತಳ ಬಳಿ ಮೊಬೈಲ್ ಫೋನ್ ಹಾಗೂ 300 ನಗದು ಪತ್ತೆಯಾಗಿದೆ. ಮೊಬೈಲ್‌ನಲ್ಲಿ ದೊರೆತ ನಂಬರ್ ಆಧರಿಸಿ ಪೋಷಕರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕೃತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಮರಣಪತ್ರವೂ ಸಿಕ್ಕಿಲ್ಲ. ಓದಿನ ವಿಚಾರವಾಗಿ ಕೊಂಚ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.