ರಾಯಚೂರು: ಸಿಂಧನೂರಲ್ಲಿ ತಾಯಿ,ಮಗನ ಮೇಲೆ ಬೀದಿ ನಾಯಿ ದಾಳಿ, ಬೆಚ್ಚಿಬೀಳಿಸುತ್ತೆ ಸಿಸಿಟಿವಿ ದೃಶ್ಯ!
ಆಸ್ಪತ್ರೆಗೆ ತೆರಳಿದ್ದ ತಾಯಿ ಮಗನ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಬೀದಿನಾಯಿ ದಾಳಿಗೊಳಗಾದ ಪ್ರೀತಂ ಹಾಗೂ ಗಂಗಮ್ಮ.
ರಾಯಚೂರು (ಜ.7): ಆಸ್ಪತ್ರೆಗೆ ತೆರಳಿದ್ದ ತಾಯಿ ಮಗನ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ.
ಬೀದಿನಾಯಿ ದಾಳಿಗೊಳಗಾದ ಪ್ರೀತಂ ಹಾಗೂ ಗಂಗಮ್ಮ. ಇದೇ ಜನೆವರಿ 4ರಂದು ಸಂಜೆ ಆದರ್ಶ ಕಾಲೋನಿಯಲ್ಲಿರುವ ಆಸ್ಪತ್ರೆಗೆ ಮಗನೊಂದಿಗೆ ತೆರಳಿದ್ದ ಗಂಗಮ್ಮ. ವೇಳೆ ಹೊರ ಬರುತ್ತಿದ್ದ ತಾಯಿ ಮಗ. ತಾಯಿ ಸ್ಕೂಟಿ ಬಳಿ ತೆರಳಿದ್ದಳು. ಹಿಂದೆ ಬರುತ್ತಿದ್ದ ಮಗ ಪ್ರೀತಂ ಮೇಲೆ ಏಕಾಏಕಿ ದಾಳಿ ನಡೆಸಿದೆ. ಕೆಳಗೆ ಬಿದ್ದು ಒದ್ದಾಡಿದರೂ ಕಾಲು ತೊಡೆ ಭಾಗಕ್ಕೆ ಬಲವಾಗಿ ಕಚ್ಚಿರುವ ಬೀದಿನಾಯಿ. ನಾಯಿ ದಾಳಿಯಿಂದ ಮಗನ ರಕ್ಷಿಸಲು ಬಂದ ತಾಯಿಗೂ ಕಚ್ಚಿದೆ. ಕೊನೆಗೆ ಹರಸಾಹಸ ಪಟ್ಟು ನಾಯಿ ಓಡಿಸಿದ ಸ್ಥಳೀಯರು.
ಬೆಂಗಳೂರಿನಲ್ಲಿ 2.79 ಲಕ್ಷಕ್ಕೆ ಕುಸಿತಗೊಂಡ ಬೀದಿ ನಾಯಿಗಳ ಸಂಖ್ಯೆ: ಸಮೀಕ್ಷಾ ವರದಿ ಬಿಡುಗಡೆ ಮಾಡಿದ ಬಿಬಿಎಂಪಿ
ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಗಾಯಾಳುಗಳು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೀದಿನಾಯಿ ಕಂಡರೇನೆ ಭಯಪಡುವಂತಾಗಿದೆ.
ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು, ಹಿರಿಯನಾಗರಿಕರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಈ ಹಿಂದೆಯೂ ಹಲವು ಬಾರಿ ಬೀದಿನಾಯಿಗಳು ದಾರಿಹೋಕರಿಗೆ ಕಚ್ಚಿದ ಘಟನೆಗಳುವ ನಡೆದಿವೆ. ಆದರೂ ನಗರಸಭೆ ಅಧಿಕಾರಿಗಳು ಬೀದಿನಾಯಿಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಗಳ ಬೇಜಾವಬ್ದಾರಿತನಕ್ಕೆ ಇನ್ನೆಷ್ಟು ಜನ ಬೀದಿನಾಯಿಗಳ ದಾಳಿ ನರಳಬೇಕು. ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಣಂತಿ ಆರೋಗ್ಯ ತಪಾಸಣೆಗೆ ತೆರಳಿದ್ದ ಆರೋಗ್ಯಾಧಿಕಾರಿ ಮೇಲೆ ನಾಯಿ ದಾಳಿ: ಮಾಲೀಕ ವಿರುದ್ಧ ಪ್ರಕರಣ