*  ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಪಟ್ಟಣದಲ್ಲಿ ನಡೆದ ಘಟನೆ*  ಡೆತ್‌ನೋಟ್‌ ಬರೆದಿಟ್ಟು ಸಾವಿಗೆ ಶರಣಾದ ರೈತ*  ಹೆಚ್ಚಾಗಿದ್ದ ಸಾಲಗಾರರ ಕಾಟ 

ಯಾದಗಿರಿ/ಶಹಾಪುರ(ಆ.25): ಶಹಾಪುರದಲ್ಲಿ ಯುವ ರೈತ ನಿಂಗಪ್ಪ(30) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆತ್ಮಹತ್ಯೆಗೂ ಮುನ್ನ ಸಾಲಕೊಟ್ಟ ಫೈನಾನ್ಸ್‌ ಕಂಪನಿಗಳ ಕಿರುಕುಳ ಕುರಿತು ರೈತ ಮಾಡಿದ್ದ ವಿಡಿಯೋ ವೈರಲ್‌ ಆಗಿದೆ. ಅಲ್ಲದೇ ಖಾಸಗಿ ಫೈನಾನ್ಸ್‌ಗಳು ಬಡ್ಡಿ-ಚಕ್ರಬಡ್ಡಿ ನೆಪದಲ್ಲಿ ಸುಲಿಗೆ, ರೈತರಿಗೆ ಸರ್ಕಾರ ಸೌಲಭ್ಯಗಳ ನೀಡುತ್ತಿಲ್ಲವೆಂಬ ಮುಂತಾದ ಕಾರಣಗಳ ಡೆತ್‌ನೋಟ್‌ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. 

ವರದಕ್ಷಿಣೆಯಲ್ಲ, ವಧು ದಕ್ಷಿಣೆ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

ಎಂ.ಎ. ಬಿಎಡ್‌ ವ್ಯಾಸಾಂಗ ಮಾಡಿದ್ದ ನಿಂಗಪ್ಪ ನೌಕರಿ ಸಿಗದೆ ಇದ್ದಾಗ, ಕೃಷಿಯಲ್ಲೇ ಖುಷಿ ಪಡಬಹುದು ಎಂಬ ನಂಬಿಕೆಯ ಮೇಲೆ ಒಕ್ಕಲುತನ ಆಶ್ರಯಿಸಿದ್ದರು. ಆದರೆ ಸತತ 4 ವರ್ಷದಿಂದ ಸೂಕ್ತವಾದ ಬೆಳೆ, ಬೆಲೆ ಸಿಗದ ಕಾರಣ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಆದರೆ, ಸಾಲಗಾರರ ಕಾಟಕ್ಕೆ ಹೆದರಿ ಸೋಮವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.