Bengaluru: ಮಹಿಳಾ ಅಥ್ಲೀಟ್‌ನ ಬಾತ್‌ರೂಮ್ ವಿಡಿಯೋ ಸೆರೆಹಿಡಿದ ವಾಲಿಬಾಲ್ ಆಟಗಾರ್ತಿ!
ಬೆಂಗಳೂರು ಸಾಯ್ ಕೇಂದ್ರದಲ್ಲಿ ಮಹಿಳಾ ಅಥ್ಲೀಟ್ ಒಬ್ಬಳ ಬಾತ್‌ರೂಮ್ ಖಾಸಗಿ ವಿಡಿಯೋವನ್ನು ಮತ್ತೊಬ್ಬ ಮಹಿಳಾ ಆಟಗಾರ್ತಿಯೇ ಸೆರೆಹಿಡಿದ ಕಾರಣಕ್ಕೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ವಾಲಿಬಾಲ್ ಆಟಗಾರ್ತಿಯಾಗಿರುವ ಅಥ್ಲೀಟ್‌ಅನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರು (ಮಾ.30): ಮಲ್ಲತಹಳ್ಳಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ವಾಲಿಬಾಲ್ ಆಟಗಾರ್ತಿಯೊಬ್ಬಳು ತನ್ನ ಸಹ ಅಥ್ಲೀಟ್ ಒಬ್ಬಳ ಖಾಸಗಿ ವಿಡಿಯೋವನ್ನು ಸೆರೆಹಿಡಿದಿದ್ದಾಳೆ. ಈ ಕುರಿತಾಗಿ ಟೇಕ್ವಾಂಡೋ ಪ್ಲೇಯರ್ ಆಗಿರುವ ಇನ್ನೊಬ್ಬ ಮಹಿಳಾ ಅಥ್ಲೀಟ್ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಇಬ್ಬರೂ ಆಟಗಾರ್ತಿಯರು ಸಾಯ್‌ನಲ್ಲಿ ತರಬೇತಿಯಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಟೇಕ್ವಾಂಡೋ ಪ್ಲೇಯರ್ ಸ್ನಾನಕ್ಕೆ ಹೋಗಿದ್ದಾಗಸ ಆಕೆಯ ಖಾಸಗಿ ವಿಡಿಯೋವನ್ನು ವಾಲಿಬಾಲ್ ಆಟಗಾರ್ತಿಯೊಬ್ಬಳು ಕದ್ದು ಸೆರೆಹಿಡಿದಿದ್ದಳು. 'ಮಹಿಳೆ ಸಂತ್ರಸ್ತೆಯ ಆಕ್ಷೇಪಾರ್ಹ ವೀಡಿಯೊವನ್ನು ತೆಗೆದಿದ್ದಾಳೆ ಮತ್ತು ಆಕೆಗೆ ತಿಳಿದಾಗ, ಸಂತ್ರಸ್ತೆ ಆರೋಪಿಯ ಮೊಬೈಲ್ ಫೋನ್ ಅನ್ನು ಒಡೆದುಹಾಕಿದ್ದಾಳೆ. ನಂತರ ಸಂತ್ರಸ್ತೆಯಿಂದಲೂ ದೂರು ನೀಡಲಾಗಿದೆ' ಎಂದು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಬಿ.ನಿಂಬರಗಿ ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 354 ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. "ನಾವು ಆರೋಪಿಯ ಮೊಬೈಲ್ ಫೋನ್ ಅನ್ನು ಪರಿಶೀಲಿಸಬೇಕಿದೆ. ವೀಡಿಯೊವನ್ನು ಪರಿಶೀಲಿಸಿದ ಬಳಿಕವೇ ಹೆಚ್ಚಿನ ತನಿಖೆ ಮಾಡಲಿದ್ದೇವೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾಯ್ ಮೂಲಗಳ ಪ್ರಕಾರ, ಘಟನೆಯ ನಂತರ, ಸಂಸ್ಥೆಯಲ್ಲಿ ಪುರುಷ ವಾರ್ಡನ್‌ಗಳ ಬಗ್ಗೆ ನೈತಿಕತೆ ಮೇಲೆ ಕೆಲವು ಅನುಮಾನ ವ್ಯಕ್ತವಾಗಿದೆ. ಕ್ಯಾಂಪಸ್‌ನಲ್ಲಿ 50 ಕ್ಕೂ ಹೆಚ್ಚು ಬಾಲಕಿಯರ ಡಿಪ್ಲೊಮಾ ವಿದ್ಯಾರ್ಥಿಗಳಿದ್ದರೆ, ಎಲ್ಲಾ ನಾಲ್ವರು ವಾರ್ಡನ್‌ಗಳು ಪುರುಷರಾಗಿದ್ದಾರೆ. ಈ ಬಗ್ಗೆಯೂ ಅನುಮಾನಗಳಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಪ್ರಕರಣ, ಶಿಮ್ಲಾ ಬಾಯ್‌ಫ್ರೆಂಡ್ ಅರೆಸ್ಟ್!
ವಿಡಿಯೋ ರೆಕಾರ್ಡ್ ಆಗುತ್ತಿದ್ದ ಸಮಯದಲ್ಲಿ ಮೊಬೈಲ್ ನೋಡಿ ಗಾಬರಿಗೊಂಡು ಟೇಕ್ವಾಂಡೋ ಆಟಗಾರ್ತಿ ಪ್ರಶ್ನೆ ಮಾಡಿದ್ದಾಳೆ. ಬಳಿಕ ರೆಕಾರ್ಡ್ ಮಾಡಿದ್ದ ಮೊಬೈಲ್ ಅನ್ನು ಆಕೆ ಒಡೆದು ಹಾಕಿದ್ದಾಳೆ. ವಿಡಿಯೋ ಮಾಡಿ ಬೇರೆಯವರಿಗೆ ಕಳುಹಿಸಿರುವ ಅನುಮಾನ ಇದೆ ಎಂದು ಟೇಕ್ವಾಂಡೋ ಪ್ಲೇಯರ್ ತಿಳಿಸಿದ್ದಾರೆ. ದೂರಿನ ಅನ್ವಯ ಜ್ಞಾನಭಾರತಿ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ. ರೆಕಾರ್ಡ್ ಮಾಡಿದ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಖಾಸಗಿ ವಿಡಿಯೋ ವೈರಲ್, ದೂರು ಕೊಟ್ಟವನೇ ನನ್ನ ಗಂಡ ಎಂದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ
ಕಳೆದ ವರ್ಷ ಪಂಜಾಬ್‌ನ ಚಂಡೀಗಢದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ವಿವಿಯ ಕ್ಯಾಂಪಸ್‌ನಲ್ಲಿ ಮಹಿಳೆಯರ ಖಾಸಗಿ ವಿಡಿಯೋಗಳನ್ನು ಅವರ ಮಹಿಳಾ ಸಹಪಾಠಿಗಳೇ ತೆಗೆದು ತಮ್ಮ ಬಾಯ್‌ಫ್ರೆಂಡ್‌ಗೆ ಕಳಿಸುತ್ತಿದ್ದರು ಎಂದು ವರದಿಯಾಗಿತ್ತು. ವಿವಿಯ ಹಾಸ್ಟೆಲ್‌ಗಳಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ ವಿಡಿಯೋಗಳನ್ನು ಅವರ ಸಹಪಾಠಿಯೊಬ್ಬರೇ ರೆಕಾರ್ಡ್ ಮಾಡಿ, ಬಾಯ್‌ಫ್ರೆಂಡ್ ಆಗಿದ್ದ ವ್ಯಕ್ತಿಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ.