ಖಾಸಗಿ ವಿಡಿಯೋ ವೈರಲ್, ದೂರು ಕೊಟ್ಟವನೇ ನನ್ನ ಗಂಡ ಎಂದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ

ತನ್ನ ವಿರುದ್ಧ ಜೀವ ಬೆದರಿಕೆ ಆರೋಪ ಕೇಳಿಬಂದಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ  ರಾವ್  ದೂರು ನೀಡಿರುವ ರಾಜಕುಮಾರ ಟಾಕಳೆ ನನ್ನ ಗಂಡ ಎಂದಿದ್ದಾರೆ. ಕೆಲ ದಿನಗಳ ಹಿಂದೆ ಖಾಸಗಿ ವಿಡಿಯೋ ವೈರಲ್ ಆದ ಬಳಿಕ ಈ ವಿಚಾರ ಬೆಳಕಿಗೆ .

Rajkumar takale my husband says Congress  leader Navyashree Rao  gow

ಬೆಂಗಳೂರು (ಜು.19): ಕಾಂಗ್ರೆಸ್ ಯುವ ನಾಯಕಿ ಚನ್ನಪಟ್ಟಣ ಮೂಲದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾಮಚಂದ್ರ ರಾವ್  ವಿರುದ್ಧ ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ನವ್ಯಶ್ರೀ ಮತ್ತು ಅವರ  ತಿಲಕ್  ಅವರಿಂದ ಜೀವಬೆದರಿಕೆ ಇದೆ ಎಂದು ಬೆಳಗಾವಿ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಎನ್ನುವವರು  ದೂರು ನೀಡಿದ್ದು, ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಈ ವಿಚಾರ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದೆ.  ನವ್ಯಶ್ರೀ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ, ಸುಳ್ಳು ಕೇಸ್ ನೀಡಿ ಮಾನಹಾನಿ ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದಾರೆ ಜೊತೆಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ. ನವ್ಯಶ್ರೀ ಯಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಬೆಳಗಾವಿ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರಿನ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ನವ್ಯಶ್ರೀ ನಾನು 15 ದಿನ ಇಂಡಿಯಾದಲ್ಲಿ ಇರಲಿಲ್ಲ. ನಾನು ಬಂದಿದ್ದೇ ಇವತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಟೋ, ವಿಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ಈ ಸಬಂಧ ನಾನು ಬೆಳಗಾವಿ ಪೊಲೀಸ್ ಕಮೀಷನರ್ ಭೇಟಿಯಾಗಿ ದೂರು ಕೊಡುತ್ತೇನೆ. ನನ್ನ ಮೇಲೆ ಎಫ.ಐ.ಆರ್ ಆಗಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಇಲ್ಲಿಯವರೆಗೂ ಯಾವುದೇ ಪೊಲೀಸರು ನನಗೆ ಪೋನ್ ಮಾಡಿಲ್ಲ. ಕಂಪ್ಲೇಂಟ್ ಕಾಪಿ‌ ಪಡೆದು ಮಾತಾಡುವೆ. ಎಲ್ಲರ ಪ್ರಶ್ನೆ ರಾಜಕುಮಾರ ಟಾಕಳೆ ಯಾರು ಅಂತಾ. ರಾಜಕುಮಾರ ಟಾಕಳೆ ನನ್ನ ಗಂಡ. ಅವನಿಂದ ನನಗೆ ಏನು ಮೋಸ ಆಗಿದೆ. ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳುವೆ. ನಾನು ಯಾವ ರೀತಿ ಮದುವೆ ಆಗಿರುವೆ ಎಲ್ಲವನ್ನ ಹೇಳ್ತಿನಿ.  ನಾಳೆ ಈ ಬಗ್ಗೆ ಸುದ್ದಿಗೋಷ್ಠಿ‌ ನಡೆಸಿ ಎಲ್ಲವನ್ನ ನಾನು ತಿಳಿಸುವೆ ಎಂದು ಹೇಳಿ  ಕಮೀಷನರ್ ಕಚೇರಿಗೆ ತೆರಳದೇ ಅಜ್ಞಾತ ಸ್ಥಳಕ್ಕೆ  ನವ್ಯಶ್ರೀ ತೆರಳಿದ್ದಾರೆ

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನವ್ಯಶ್ರೀ ಅವರದ್ದು ಎಂದು ಹೇಳಲಾಗುತ್ತಿರುವ ಖಾಸಗಿ ವಿಡಿಯೋ ಒಂದು ವೈರಲ್ ಆಗಿತ್ತು. ಇದರ ಜೊತೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಸೇರಿ ಹಲವು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಜೊತೆಗೆ ನವ್ಯಶ್ರಿ ಇರುವ ಫೋಟೋ ಕೂಡ ವೈರಲ್ ಆಗಿತ್ತು. ವಿಡಿಯೋ ಮತ್ತು ಫೋಟೋ ಗಮನಿಸಿರುವೆ ಎಂದು ಕೂಡ ನವ್ಯ ಹೇಳಿದ್ದಾರೆ.

 

Latest Videos
Follow Us:
Download App:
  • android
  • ios