Sonali Phogat ನಿಗೂಢ ಸಾವು ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್, ದೇಹದಲ್ಲಿ 46 ಗಾಯದ ಗುರುತು ಪತ್ತೆ!
ಬಿಗ್‌ಬಾಸ್ ಸ್ಪರ್ಧಿ, ಬಿಜೆಪಿ ನಾಯಕಿ ಸೋನಾಲಿ ಪೋಗಟ್ ನಿಗೂಢ ಸಾವು ಪ್ರಕರಣದ ತನಿಖೆ ಚುರುಕುಗೊಂಡಂತೆ ಹೊಸ ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಿದೆ. ಇದೀಗ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಗಾಯದ ಗುರುತಿನ ಸಂಖ್ಯೆ ಬೆಳಕಿಗೆ ಬಂದಿದೆ.
ಗೋವಾ(ಆ.31): ಬಿಗ್‌ಬಾಸ್ ಸ್ಪರ್ಧಿ ಸೋನಾಲಿ ಪೋಗಟ್ ಸಾವು ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸೋನಾಲಿ ಕುಟುಂಬಸ್ಥರು, ಆಪ್ತರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಹಲವು ದಾಖಲೆಗಳು ಲಭ್ಯವಾಗಿದೆ. ಇದೀಗ ಸೋನಾಲಿ ಪೋಗಟ್ ಮರಣೋತ್ತರ ಪರೀಕ್ಷೆ ವರಿದಿಯಲ್ಲಿ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಸೋನಾಲಿ ಪೋಗಟ್ ದೇಹದಲ್ಲಿ 46 ಗಾಯದ ಗುರುತುಗಳು ಪತ್ತೆಯಾಗಿದೆ. ಇದು ಕೊಲೆಯ ಅನುಮಾನ ಹೆಚ್ಚಿಸಿದೆ. ಇತ್ತೀಚೆಗೆ ಮರಣೋತ್ತರ ಪರೀಕ್ಷೆಯಲ್ಲಿ ಹಲವು ಗಾಯದ ಗುರುತುಗಳಿವೆ ಅನ್ನೋದು ಬೆಳಕಿಗೆ ಬಂದಿತ್ತು. ಇದೀಗ 46 ಗಾಯದ ಗುರುತನ್ನು ಪತ್ತೆ ಹಚ್ಚಲಾಗಿದೆ. ಇವೆಲ್ಲವೂ ಸಹಜವಾಗಿ ಆಗಿರುವ ಗಾಯದ ಗುರುತಲ್ಲ ಅನ್ನೋದನ್ನು ಮರಣೋತ್ತರ ಪರೀಕ್ಷೆ ಖಚಿತಪಡಿಸಿದೆ. ಈ ಮೂಲಕ ಸೋನಾಲಿ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆದರೆ ಈ ಪ್ರಕರಣದಲ್ಲಿ ದುರಂತ ವಿಚಾರ ಅಂದರೆ ಗೋವಾ ಮೆಡಿಕಲ್ ತಂಡ ಸೋನಾಲಿ ಪೋಗಟ್ ಮರಣೋತ್ತರ ಪರೀಕ್ಷೆ ಜೊತೆಗೆ ಮೆಟಾಬೊಲಿಟೀಸ್ ಪರೀಕ್ಷೆ ನಡೆಸುುವಂತೆ ಸೂಚಿಸಿದ್ದರು. ಈ ಪರೀಕ್ಷೆಯಲ್ಲಿ ಸಾವಿಗೆ ನಿಖರ ಕಾರಣಗಳನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಆದರೆ ಈ ಪರೀಕ್ಷೆಗೆ ಸೂಕ್ತ ವೈದ್ಯಕೀಯ ಸಲಕರಣೆಗಳು ಇಲ್ಲದ ಕಾರಣ ಪರೀಕ್ಷೆ ನಡೆಸಿಲ್ಲ.
ಸೋನಾಲಿ ಪೋಗಟ್ ಸಾವು(Sonali phogat death case) ಕುರಿತು ಈಗಾಗಲೇ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ವಿಚಾರಣೆ ತೀವ್ರಗೊಂಡಿದೆ. ಬಂಧಿತರಿಂದ ಲ್ಯಾಪ್‌ಟ್ಯಾಪ್, ಮೊಬೈಲ್ ಸೇರಿದಂತೆ ಇತರ ಕೆಲ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಲಾಗಿದೆ. ಪಾಸ್‌ಪೋರ್ಟ್ ಮಾಹಿತಿಗಳನ್ನು ಕಲೆ ಹಾಕಿ ತನಿಖೆ ಮುಂದುವರಿದಿದೆ.
ಸೋನಾಲಿ ಫೋಗಟ್ to ಸಿದ್ಧಾರ್ಥ್ ಶುಕ್ಲಾ: ಚಿಕ್ಕ ವಯಸ್ಸಿನಲ್ಲೇ ಜಗತ್ತಿಗೆ ವಿದಾಯ ಹೇಳಿದ ಬಿಗ್‌ಬಾಸ್ ಸ್ಪರ್ಧಿಗಳು
ಸೋನಾಲಿ ಫೋಗಟ್ ಅವರನ್ನು ಅವರ ಸಹಾಯಕರೇ ಪಾರ್ಟಿಯಲ್ಲಿ ಡ್ರಗ್ಸ್(Drugs) ನೀಡಿರುವ ವಿಷಯ ಸಿಸಿಟೀವಿಯ(CCTV Footage) ದೃಶ್ಯಾವಳಿಗಳಲ್ಲಿ ಕಂಡುಬಂದಿದ್ದು, ಅವರೇ ಹತ್ಯೆಗೈದಿರುವ ಸಾಧ್ಯತೆ ಮತ್ತಷ್ಟುದಟ್ಟವಾಗಿದೆ. ಮೇಲ್ನೋಟಕ್ಕೆ ಹಣಕಾಸಿನ ಕಾರಣಕ್ಕಾಗಿ ಈ ಹತ್ಯೆ ನಡೆಸಿರುವ ಸಾಧ್ಯತೆ ಕಂಡುಬರುತ್ತಿದೆ ಎಂದು ಪೊಲೀಸರು(Goa Police) ತಿಳಿಸಿದ್ದಾರೆ.
ಹರಾರಯಣದ ಬಿಜೆಪಿ ನಾಯಕಿ(BJP Leader) ಸೋನಾಲಿ ಫೋಗಟ್ ಅವರಿಗೆ ಮಾದಕ ದ್ರವ್ಯ ನೀಡಿ ಹತ್ಯೆಗೈದಿರುವ ಶಂಕೆಯ ಬೆನ್ನಲ್ಲೇ ಆರೋಪಿಗಳಿಗೆ ಡ್ರಗ್‌್ಸ ಪೂರೈಕೆ ಮಾಡಿದ ಪೆಡ್ಲರ್(drug peddler) ಹಾಗೂ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಹಿಂದೆ ಬಂಧನಕ್ಕೊಳಗಾಗಿದ್ದ ಸೋನಾಲಿ ಸಹಾಯಕ ಸುಧೀರ್ ಸಂಗ್ವಾನ್(Sudhir Sangwan) ಹಾಗೂ ಸುಖ್‌ವಿಂದರ್ ಸಿಂಗ್, ಗಾಂವಕರ್ ಎಂಬ ವ್ಯಕ್ತಿ ತಮಗೆ ಡ್ರಗ್‌್ಸ ಪೂರೈಸಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡ್ರಗ್ ಪೆಡ್ಲರ್ ದತ್ತಪ್ರಸಾದ್ ಗಾಂವಕರ್‌ನನ್ನು ಹಾಗೂ ಸೋನಾಲಿ ಸಾವಿಗೂ ಮೊದಲು ಪಾರ್ಟಿ ಮಾಡಿದ್ದ ಕುರ್ಲೀಸ್ ರೆಸ್ಟೋರೆಂಟ್ ಮಾಲಿಕ ಎಡ್ವಿನ್ ನ್ಯೂನೆಸ್‌ನನ್ನು ಬಂಧಿಸಲಾಗಿದೆ.
ಸೋನಾಲಿ ಪೋಗಟ್ ನಿಗೂಢ ಸಾವು: ಕೊನೆಕ್ಷಣದ ವಿಡಿಯೋ ವೈರಲ್
ಹರಾರಯಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಹರಾರಯಣ ಸರ್ಕಾರದ ಆಗ್ರಹಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದು, ಸಿಬಿಐಗೆ ತನಿಖೆ ಒಪ್ಪಿಸಲು ಸಿದ್ಧ ಎಂದು ಹೇಳಿದ್ದಾರೆ. ಸೋನಾಲಿ ಅವರ ಪಾನೀಯದಲ್ಲಿ ಡ್ರಗ್‌್ಸ ಬೆರೆಸಿ ಅವರ ಸಹಾಯಕರೆ ಅವರನ್ನು ಕೊಲೆ ಮಾಡಿದ್ದರು. ಸೋನಾಲಿ ಅವರ ಸಾವಿಗೂ ಮುನ್ನ ‘ಮೆಂಥಾಫೆಟಮಿನ್’ ಎಂಬ ಮಾದಕ ವಸ್ತು ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.