Asianet Suvarna News Asianet Suvarna News

ಬೆಂಗಳೂರು: ಬೈದಳೆಂದು ತಾಯಿಯನ್ನ ಕೊಂದು ಠಾಣೆಗೆ ಬಂದು ಶರಣಾದ ಮಗ!

ಊಟ ಬಡಿಸಲು ಹೇಳಿದ್ದಕ್ಕೆ ಬೈದಳೆಂದು ಮಗನೊಬ್ಬ ಹೆತ್ತ ತಾಯಿಯನ್ನೇ ರಾಡ್‌ನಿಂದ ಹೊಡೆದುಕೊಂದು ಠಾಣೆಗೆ ಬಂದು ಶರಣಾದ ಘಟನೆ ಬೆಂಗಳೂರಿನ ಕೆಆರ್‌ ಪುರಂನಲ್ಲಿ ನಡೆದಿದೆ.

Son who killed his mother and surrendered to the police station in KR Puram at Bengaluru rav
Author
First Published Feb 2, 2024, 11:08 AM IST

ಬೆಂಗಳೂರು (ಫೆ.2): ಊಟ ಬಡಿಸಲು ಹೇಳಿದ್ದಕ್ಕೆ ಬೈದಳೆಂದು ಮಗನೊಬ್ಬ ಹೆತ್ತ ತಾಯಿಯನ್ನೇ ರಾಡ್‌ನಿಂದ ಹೊಡೆದುಕೊಂದು ಠಾಣೆಗೆ ಬಂದು ಶರಣಾದ ಘಟನೆ ಬೆಂಗಳೂರಿನ ಕೆಆರ್‌ ಪುರಂನಲ್ಲಿ ನಡೆದಿದೆ.

ನೇತ್ರಾ ಮೃತ ದುರ್ದೈವಿ, ಮಗ ಪವನ್ ಕೊಲೆ ಮಾಡಿರೋ ಆರೋಪಿ. ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿರುವ ಮಗ ಪವನ್. ಇಂದು ಬೆಳಗ್ಗೆ 7.15ರ ಸುಮಾರಿಗೆ ನಡೆದಿರೋ ಘಟನೆ.

ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ; ಬಗೆದಷ್ಟು ಬಯಲಾಗ್ತಿದೆ ಕಾಂಗ್ರೆಸ್ ನಾಯಕಿ ಕರ್ಮಕಾಂಡ!

ನನ್ನ ಮಗನೇ ಅಲ್ಲ ಎಂದಿದ್ದ ತಾಯಿ:

ಬೆಳಗ್ಗೆ ಕಾಲೇಜಿಗೆ ಹೋಗಲು ರೆಡಿಯಾಗಿದ್ದ ಪವನ್. ತಾಯಿಗೆ ಊಟ ಬಡಿಸುವಂತೆ ಹೇಳಿದ್ದಾನೆ. ಆದರೆ ತಾಯಿ ಆಗ ಬೇರೆ ಕೆಲಸದಲ್ಲಿ ನಿರತಳಾಗಿದ್ದು ಕೋಪದಲ್ಲಿ ಬೈದಿದ್ದ ತಾಯಿ ನೇತ್ರಾ. ನೀನು ನನ್ನ ಮಗನೇ ಅಲ್ಲ, ನಿನಗೆ ಊಟ ಹಾಕಲ್ಲ ಎಂದು ಬೈದಿದ್ದಳಂತೆ ತಾಯಿ. ಅಷ್ಟಕ್ಕೇ ಕೋಪಗೊಂಡ ಮಗ. ರಾಡ್‌ನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ದಾಳಿ ನಿರೀಕ್ಷಸದ ತಾಯಿ ನೇತ್ರಾ. ರಾಡ್‌ನಿಂದ ಬಲವಾಗಿ ಹೊಡೆದಿದ್ದಕ್ಕೆ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾಳೆ.

ಪೂಜೆ ಮಾಡುವ ನೆಪದಲ್ಲಿ ಮಹಿಳೆಯ ಚಿನ್ನ ಎಗರಿಸಿಕೊಂಡು ಹೋದ ಬುಡುಬುಡಿಕೆಯವರು!

ನಿನ್ನೆ ರಾತ್ರಿಯೂ ತಾಯಿಯೊಂದಿಗೆ ಜಗಳ ಮಾಡಿದ್ದ ಮಗ:

ಕಳೆದ 30 ವರ್ಷದಿಂದ ಭೀಮಯ್ಯ ಲೇಔಟ್ ನಲ್ಲಿ ವಾಸವಿದ್ದ ಮೃತಳ ಕುಟುಂಬ ನಿನ್ನೆ ಸಂಜೆ ಮುಳಬಾಗಿಲಿನಿಂದ ಕೆಆರ್ ಪುರಂ ಗೆ ಬಂದಿದ್ದ ಮಗ. ರಾತ್ರಿ ತಾಯಿಯೊಡನೆ ಜಗಳ ಮಾಡಿ ಊಟ ಮಾಡದೇ ಮಲಗಿದ್ದ ಮಗ. ಇಂದು ಬೆಳಗ್ಗೆ ಮತ್ತೆ ಮುಳಬಾಗಿಲಿನ ಕಾಲೇಜಿಗೆ ತೆರಳಲು ರೆಡಿ ಆಗಿದ್ದ. ಬೆಳಗ್ಗೆ 7.30 ಸುಮಾರಿಗೆ ತಿಂಡಿ ಮಾಡದೇ ಮಲಗಿದ್ದ ತಾಯಿ. ಈ ವೇಳೆ ಮೊದಲೇ ಹೇಳಿದ್ರೂ ಯಾಕೆ ತಿಂಡಿ ಮಾಡಿಲ್ಲ ಎಂದು ಮಗ ಜಗಳ ಮಾಡಿದ್ದಾನೆ. ಈ ವೇಳೆ ಕೋಪಿಸಿಕೊಂಡಿರೋ ತಾಯಿ ಅಡುಗೆ ಮಾಡಲ್ಲ, ನೀನು ನನ್ನ ಮಗನೇ ಅಲ್ಲ ಎಂದು ಬೈದಿದ್ದಾಳೆ. ಹೀಗೆ ಮಾತಿಗೆ ಮಾತು ಬೆಳೆದು ಮನೆಯಲ್ಲಿದ್ದ ಕಬ್ಬಿಣದ ರಾಡಿನಿಂದ ತಾಯಿಯ ತಲೆಗೆ ಹೊಡೆದಿದ್ದಾನೆ. ತಲೆಗೆ ಗಂಭೀರ ಗಾಯದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರೋ ತಾಯಿ ನೇತ್ರಾವತಿ.

ಕೊಲೆ ಮಾಡಿದ ಬಳಿಕ ಠಾಣೆಗೆ ಕರೆ ಮಾಡಿದ್ದ ಮಗ. ಕೂಡಲೇ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿರೋ ಪೊಲೀಸರು.

Follow Us:
Download App:
  • android
  • ios