Asianet Suvarna News Asianet Suvarna News

ಪೂಜೆ ಮಾಡುವ ನೆಪದಲ್ಲಿ ಮಹಿಳೆಯ ಚಿನ್ನ ಎಗರಿಸಿಕೊಂಡು ಹೋದ ಬುಡುಬುಡಿಕೆಯವರು!

ಮೋಸಹೋಗುವವರು ಇರೋತನಕ ವಂಚಿಸುವವರು ಇರ್ತಾರೆ ಎಂಬ ಮಾತು ಸುಳ್ಳಲ್ಲ ಅನ್ನೋದಕ್ಕೆ ಈ ಘಟನೆಗೆ ತಾಜಾ ಉದಾಹರಣೆಯಾಗಿದೆ. ಪೂಜೆ ಮಾಡುವ ನೆಪದಲ್ಲಿ ಬುಡುಬುಡಿಕೆಯವರು ಮಹಿಳೆಯೋರ್ವಳ ಚಿನ್ನ ಎಗರಿಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೊತ್ತನೂರು ಬಳಿಯ ದೊಡ್ಡ ಗುಬ್ಬಿಯಲ್ಲಿ ನಡೆದಿದೆ.

Miscreants fled after stealing the woman's gold jewellery in bengaluru rav
Author
First Published Jan 29, 2024, 2:09 PM IST

ಬೆಂಗಳೂರು (ಜ.29): ಮೋಸಹೋಗುವವರು ಇರೋತನಕ ವಂಚಿಸುವವರು ಇರ್ತಾರೆ ಎಂಬ ಮಾತು ಸುಳ್ಳಲ್ಲ ಅನ್ನೋದಕ್ಕೆ ಈ ಘಟನೆಗೆ ತಾಜಾ ಉದಾಹರಣೆಯಾಗಿದೆ. ಪೂಜೆ ಮಾಡುವ ನೆಪದಲ್ಲಿ ಬುಡುಬುಡಿಕೆಯವರು ಮಹಿಳೆಯೋರ್ವಳ ಚಿನ್ನ ಎಗರಿಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೊತ್ತನೂರು ಬಳಿಯ ದೊಡ್ಡ ಗುಬ್ಬಿಯಲ್ಲಿ ನಡೆದಿದೆ.

ಶಕುಂತಲಾ ಎಂಬ ಮಹಿಳೆ ಮೋಸಕ್ಕೊಳಗಾದ ಮಹಿಳೆ. ಗಂಡನಿಗೆ ಗಂಡಾಂತರ ಕಾದಿದೆ. 9 ದಿನಗಳಲ್ಲೇ ನಿನ್ನ ಗಂಡ ಮರಣ ಹೊಂದುತ್ತಾರೆ. ಬದುಕಬೇಕೆಂದರೆ ಪೂಜೆ ಮಾಡಿಸಬೇಕು ಎಂದು ಮಹಿಳೆಗೆ ನಂಬಿಸಿದ್ದ ಬುಡುಬುಡಿಕೆಯವರು.

ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ; ಬಗೆದಷ್ಟು ಬಯಲಾಗ್ತಿದೆ ಕಾಂಗ್ರೆಸ್ ನಾಯಕಿ ಕರ್ಮಕಾಂಡ!

ಒಂಭತ್ತು ದಿನದಲ್ಲಿ ಗಂಡ ಸಾಯುತ್ತನೆಂದಾಗ ಆತಂಕಗೊಂಡು ಬುಡುಬುಡಿಕೆಯವರ ಮಾತಿನಂತೆ ಪೂಜೆಗೆ ಮುಂದಾಗಿದ್ದ ಮಹಿಳೆ. ಪೂಜೆ ಮಾಡಬೇಕು ಮೈ ಮೇಲಿರೋ ಚಿನ್ನ ಮಡಿಕೆಯಲ್ಲಿ ಹಾಕುವಂತೆ ಮಹಿಳೆಗೆ ಸೂಚಿಸಿರುವ ವ್ಯಕ್ತಿ. ಅದರಂತೆ ಮಡಿಕೆಯಲ್ಲಿ ಚಿನ್ನ ಹಾಕಿದ ಬಳಿಕ ಕಣ್ಣುಮುಚ್ಚಿ ಕುಳಿತುಕೊಳ್ಳುವಂತೆ ಸಲಹೆ ನೀಡಿರುವ ಖದೀಮ. ಬುಡುಬುಡಿಕೆಯವನು ತಿಳಿಸಿದಂತೆ ಮಡಿಕೆಯಲ್ಲಿ ಚಿನ್ನ ಹಾಕಿ ಕಣ್ಣುಮುಚ್ಚಿಕುಳಿತಿರುವ ಮಹಿಳೆ. ಗಂಡ ಮನೆಗೆ ಬಂದ ಬಳಿಕವೇ ಮಡಿಕೆಯಲ್ಲಿರೋ ಚಿನ್ನ ತೆಗೆಯುವಂತೆ ಸಲಹೆ ನೀಡಿರುವ ವಂಚಕ. ಮಹಿಳೆ ಕಣ್ಣುಮುಚ್ಚಿ ಕುಳಿತಾಗಲೇ ಮಹಿಳೆಯ ಚಿನ್ನ ಎಗರಿಸಿರೋ ವಂಚಕ ಚಿನ್ನದೊಂದಿಗೆ ಪರಾರಿಯಾಗಿದ್ದಾನೆ. ಇತ್ತ ಗಂಡ ಬರೋತನಕ ಕಣ್ಣುಮುಚ್ಚಿ ಕಾದಿದ್ದ ಮಹಿಳೆ. ಬಳಿಕ ಮಡಿಕೆ ತೆರೆದು ನೋಡಿದಾಗ ಖಾಲಿ ಮಡಿಕೆ. ವಂಚನೆ ಮಾಡಿರುವುದು ಕಂಡು ಶಾಕ್‌ಗೆ ಒಳಗಾದ ಮಹಿಳೆ. 

ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬ ನಾಪತ್ತೆ; ವಾರ ಕಳೆದರೂ ಪತ್ತೆಯಾಗಿಲ್ಲ!

ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣ ಸಂಬಂಧ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ಮಹಿಳೆ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಬುಡುಬುಡಿಕೆ ಹೇಳೋಕೆ ಬಂದಿದ್ದಾನೆ. ಈ ವೇಳೆ ಗಂಡನಿಗೆ ಗಂಡಾಂತರ ಇದೆಯೆಂದು ನಂಬಿಸಿ ಅದರ ಪರಿಹಾರಕ್ಕೆ ವಿಶೇಷ ಪೂಜೆ ಮಾಡಬೇಕೆಂದು ಹೇಳಿ ವಂಚಿಸಿದ್ದಾನೆ. ಮಡಿಕೆಯಲ್ಲಿ ಹರಿಶಿಣ ಕುಂಕುಮ ಹಾಕಿ ತಮ್ಮ ಓಲೆಗಳನ್ನ ಬಿಚ್ಚಿ ಹಾಕೋಕೆ ಹೇಳಿದ್ದಾನೆ. ನಂತರ ಮಹಿಳೆಗೆ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಳ್ಳೋಕೆ ಹೇಳ್ತಾನೆ. ಈ ವೇಳೆ ಮಡಿಕೆಯಲ್ಲಿದ್ದ ಓಲೆಯನ್ನ ತೆಗೆದುಕೊಂಡಿದ್ದಾನೆ. ನಂತರ ಮಹಿಳೆ ಕಣ್ಣು ತೆರೆದ ಮೇಲೆ ಸಂಜೆ ಗಂಡ ಬಂದ್ಮೇಲೆ ಮಡಿಕೆ ತೆಗೆದು ಪೂಜೆ ಮಾಡಿ ಎಂದಿದ್ದಾನೆ. ಆದ್ರೆ ಸಂಜೆ ಮಡಿಕೆ ತೆಗೆದು ನೋಡಿದಾಗ ಓಲೆಗಳು ಇರೋದಿಲ್ಲ. ಈ ಬಗ್ಗೆ ಕೇಸ್ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಲಾಗ್ತಿದೆ ಎಂದಿದ್ದಾರೆ.

Follow Us:
Download App:
  • android
  • ios