ಮಂಡ್ಯ (ಮಾ.17): ಸೊಸೆಯೊಂದಿಗಿನ ಅನೈತಿಕ ಸಂಬಂಧ ಪ್ರಶ್ನಿಸಿದ ಮಹಿಳೆಯನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಹುಣಸನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. 

 ಹುಣಸನಹಳ್ಳಿ ಗ್ರಾಮದ ದೊಡ್ಡತಾಯಮ್ಮ (55) ಎಂಬ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. 

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿ ಕೊಲೆ : ಲವರ್ ಜೊತೆ ಸೇರಿ ಕೊಂದಳು

ಅದೇ ಗ್ರಾಮದ ವಾಸು(30) ಎಂಬ ವ್ಯಕ್ತಿಯಿಂದ ದೊಡ್ಡ ತಾಯಮ್ಮ ಕೊಲೆಯಾಗಿದೆ.  ಮೃತ ಮಹಿಳೆ ದೊಡ್ಡತಾಯಮ್ಮರ ಸೊಸೆಯೊಂದಿಗೆ ವಾಸು ಎಂಬಾತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ಬಗ್ಗೆ ಸೊಸೆ ಹಾಗೂ ಈ ವ್ಯಕ್ತಿಗೆ ದೊಡ್ಡತಾಯಮ್ಮ ಹಲವು ಬಾರಿ ಬುದ್ದಿ ಮಾತು ಹೇಳಿದ್ದರು. 

ಆದರೂ ಕೇಳದೇ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ಕೆ.ಆರ್.ಪೇಟೆ ಟೌನ್ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.