ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರೆ. ಆದ್ರೆ‌ ಚಿತ್ರದುರ್ಗದಲ್ಲೊಬ್ಬ ಪಾಪಿ ಪುತ್ರ‌ ಜನ್ಮ‌ಕೊಟ್ಟ ತಂದೆಯನ್ನೇ‌ ಬರ್ಬರವಾಗಿ ಕೊಲೆಗೈದಿದ್ದಾನೆ. 

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ನ.6): ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರೆ. ಆದ್ರೆ‌ ಚಿತ್ರದುರ್ಗದಲ್ಲೊಬ್ಬ ಪಾಪಿ ಪುತ್ರ‌ ಜನ್ಮ‌ಕೊಟ್ಟ ತಂದೆಯನ್ನೇ‌ ಬರ್ಬರವಾಗಿ ಕೊಲೆಗೈದಿದ್ದಾನೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ವರವು ಕಾವಲಿನಲ್ಲಿನ ಬತ್ತಯ್ಯನಹಟ್ಟಿ ಗ್ರಾಮದ ಸೂರಯ್ಯನವರು, ತುಂಬಾ ಕಷ್ಟಪಟ್ಟು ಈರುಳ್ಳಿ ಬೆಳೆದಿದ್ದರು. ಆದ್ರೆ ನಿನ್ನೆ ರಾತ್ರಿ ಜಿಟಿಜಿಟಿ ಮಳೆಯಾಗ್ತಿದ್ದ ಹಿನ್ನೆಲೆಯಲ್ಲಿ ಮನೆ ಮುಂಭಾಗದಲ್ಲೇ ಇಡಲಾಗಿದ್ದ ಈರುಳ್ಳಿ ನೆನೆಯದಂತೆ ರಕ್ಷಿಸುವಲ್ಲಿ ಪುತ್ರ ಮೋಹನ್ ನಿರ್ಲಕ್ಷ್ಯ ತೋರಿದ್ದನು. ಹೀಗಾಗಿ ಅಸಮಧಾನಗೊಂಡ ಸೂರಯ್ಯ ತಡರಾತ್ರಿಯೇ ಮಗನಿಗೆ ಬುದ್ದಿವಾದ ಹೇಳಿದ್ದು, ಕಷ್ಟಪಟ್ಟು ಬೆಳೆದ ಈರುಳ್ಳಿ ಅನ್ಯಾಯವಾಗಿ ಹಾಳಾಯ್ತಲ್ಲ ಅಂತ ಮಗನ ವಿರುದ್ಧ ಕಿಡಿಕಾರಿದ್ದರು.

ಬೆಂಗಳೂರು : ಸರ್ಕಾರಿ ಅಧಿಕಾರಿ ಪ್ರತಿಮಾ ಕಗ್ಗೊಲೆ ಪ್ರಕರಣ, ಆರೋಪಿ ಬಂಧನ, ದ್ವೇಷದಿಂದಲೇ ಆಯ್ತು ಕೊಲೆ

ಈ ವೇಳೆ ತಂದೆ ಮಗನ ಮಧ್ಯೆ ಮಾತಿನ ಚಕಮಕಿ ನಡೆದಿದ್ದು,ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಸೂರಯ್ಯನ ಪತ್ನಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ರು. ಇದರಿಂದಾಗಿ ಕೋಪಗೊಂಡಿದ್ದ ಮೋಹನ್( 35) ಕೋಪದ‌ ಕೈಗೆ ಬುದ್ದಿಕೊಟ್ಟಿದ್ದು,ಕುಡಿದ‌ ಅಮಲಿನಲ್ಲಿ ಮನೆಯ ಹೊರಗೆ ಮಲಗಿದ್ದ, ತಂದೆ ಸೂರಯ್ಯ(55)ನ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆಗೈದಿದ್ದಾನೆ‌. ಬಳಿಕ ಆರೋಪಿ ಮೋಹನ್ ನೇರವಾಗಿ ಚಳ್ಳಕೆರೆ ಪೊಲೀಸ್ ಠಾಣೆಗೆ ಧಾವಿಸಿ ಶರಣಾಗಿದ್ದಾನೆ. 

ತನ್ನ ತಾಯಿಯ ಮೇಲಿನ ಪ್ರೀತಿ ಹಾಗು ತಂದೆ ಮೇಲಿನ ಕೋಪವು ಜನ್ಮ ಕೊಟ್ಟ ತಂದೆಯನ್ನು ಕೊಲ್ಲುವಂತೆ ಪ್ರೇರೇಪಿಸಿದೆ. ಹೀಗಾಗಿ ಕ್ಷುಲ್ಲಕ‌ ಕಾರಣಕ್ಕ ತಂದೆಯನ್ನೇ ಬರ್ಬರವಾಗಿ ಕೊಂದ ಮೋಹನ್, ಮದ್ಯದ ನಶೆ ಇಳಿದ ಬಳಿಕ ಗಾಬರಿಯಿಂದ ದಾರಿ ಕಾಣದೇ ಚಳ್ಳಕೆರೆ ಪೊಲೀಸ್ ಠಾಣೆಗೆ ಧಾವಿಸಿದ್ದಾನೆ‌. ಆದ್ರೆ ಈ ಘಟನರ ನಾಯಕನಟ್ಟಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹಿನ್ನಲೆಯಲ್ಲಿ ಎಚ್ಚೆತ್ತ ಪೊಲೀಸರು ನಾಯಕನಹಟ್ಟಿ ಠಾಣೆಗೆ ಆರೋಪಿಯನ್ನು ಒಪ್ಪಿಸಿದ್ದಾರೆ.

ಕೆಇಎ ಪರೀಕ್ಷೆ ಬ್ಲೂಟೂತ್ ಅಕ್ರಮ ಪೊಲೀಸರಿಗೆ ಮಹತ್ವದ ಸುಳಿವು, ಯಾರು ಈ ಸರ್ಕಾರ್‌

ಒಟ್ಟಾರೆ ಜವಬ್ದಾರಿಯಿಂದ ಬದುಕು ಅಂತ‌ ಬೈದು ಬುದ್ದಿ ಹೇಳಿದ ಜನ್ಮಧಾತ, ಮಗನಿಂದಲೇ ಕೊಲೆಯಾಗಿದ್ದಾನೆ.ಈ ವೇಳೆ ಗಂಡ ಹಾಗು ಮಗನಿಗೆ ಸಮಾಧಾನ ಹೇಳಲು ಮಧ್ಯ ಪ್ರವೇಶಿಸಿದ ಆರೋಪಿಯ ತಾಯಿ ಅಸ್ವಸ್ಥಳಾಗಿ ಆಸ್ಪತ್ರೆ ಸೇರಿದ್ದಾರೆ. ಆದ್ರೆ ಕುಡಿತದ ದಾಸನಾಗಿದ್ದ ಮೋಹನ್ ಗೆ ಜೈಲೂಟ ಗ್ಯಾರಂಟಿಯಾಗಿದೆ.