ದೇವೇಂದ್ರಪ್ಪ ಗಾಣಿಗೇರ ಅವರು ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ತಮ್ಮ ಅಳಿಯ ಬಸವರಾಜ ತನ್ನ ಹೊಲದಲ್ಲಿನ 2 ವರ್ಷದ ಅಡಕೆ ಗಿಡಗಳನ್ನು ಕಡಿದು ಹಾಕಿರುವುದಾಗಿ ಆರೋಪಿಸಿದ್ದಾರೆ. 

ಹಾನಗಲ್ಲ(ಹಾವೇರಿ)(ಸೆ.27): ಪತ್ನಿಯನ್ನು ತನ್ನ ಮನೆಗೆ ಕಳುಹಿಸದ್ದಕ್ಕೆ ಕುಪಿತಗೊಂಡ ಅಳಿಯನೋರ್ವ ಮಾವನ ಅಡಕೆ ತೋಟವನ್ನೇ ನಾಶಪಡಿಸಿದ ಘಟನೆ ಹಾನಗಲ್ಲ ತಾಲೂಕಿನ ಬಸಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇವೇಂದ್ರಪ್ಪ ಗಾಣಿಗೇರ ಅವರು ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ತಮ್ಮ ಅಳಿಯ ಬಸವರಾಜ ತನ್ನ ಹೊಲದಲ್ಲಿನ 2 ವರ್ಷದ ಅಡಕೆ ಗಿಡಗಳನ್ನು ಕಡಿದು ಹಾಕಿರುವುದಾಗಿ ಆರೋಪಿಸಿದ್ದಾರೆ. 

ರಾಣೆಬೆನ್ನೂರು: ಅಂಗನವಾಡಿಯಲ್ಲಿ ಮಕ್ಕಳನ್ನು ಸೊಳ್ಳೆಪರದೆಯಲ್ಲಿ ಕೂರಿಸಿ ಪಾಠ..!

ಬಸವರಾಜ ಸೊರಬದ ಬೈದವಟ್ಟಿ ಗ್ರಾಮದವ. 10 ವರ್ಷ ಹಿಂದೆ ದೇವೇಂದ್ರಪ್ಪರ ಮಗಳ ಜತೆ ವಿವಾಹವಾಗಿದ್ದರು. ಆದರೆ ಗಂಡನ ಕಿರುಕುಳ ತಾಳಲಾರದೇ ಆತನ ಪತ್ನಿ 3 ತಿಂಗಳ ಹಿಂದೆ ತವರಿಗೆ ತೆರಳಿದ್ದರು. ಪತ್ನಿಯನ್ನು ತನ್ನ ಜೊತೆಗೆ ಕಳುಹಿಸುವಂತೆ ಬಸವರಾಜ ಪರಿಪರಿಯಾಗಿ ಕೇಳಿಕೊಂಡರೂ ಮಾವ ಕಳುಹಿಸಿಲ್ಲ ಎನ್ನಲಾಗಿದೆ. ಇದರಿಂದ ಕುಪಿತಗೊಂದ ಬಸವರಾಜ ಸೆ.23ರಂದು ಅಡಕೆ ಮರಗಳನ್ನು ಕಡಿದು ಹಾಕಿದ್ದಾನೆ ಎಂದು ದೂರಲಾಗಿದೆ.