ಗೀತಾ ಎಂಬುವರೇ ಅಳಿಯನಿಂದಲೇ ಚಾಕು ಇರಿತಕ್ಕೊಳಾಗದವರಾಗಿದ್ದಾರೆ. ಮನೋಜ್ ಎಂಬಾತನೇ ಗೀತಾ ಅವರಿಗೆ ಚಾಕುವಿನಿಂದ ಆರೋಪಿಯಾಗಿದ್ದಾನೆ.
ಬೆಂಗಳೂರು(ಜೂ.14): ಹೆಂಡತಿಯನ್ನ ಮನೆಗೆ ಕಳಿಸದ ಹಿನ್ನೆಲೆಯಲ್ಲಿ ಅಳಿಯನೊಬ್ಬ ಅತ್ತೆಗೆ ಚಾಕು ಇರಿದ ಘಟನೆ ಬೆಂಗಳೂರಿನ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ಇಂದು(ಬುಧವಾರ) ನಡೆದಿದೆ.
ಗೀತಾ ಎಂಬುವರೇ ಅಳಿಯನಿಂದಲೇ ಚಾಕು ಇರಿತಕ್ಕೊಳಾಗದವರಾಗಿದ್ದಾರೆ. ಮನೋಜ್ ಎಂಬಾತನೇ ಗೀತಾ ಅವರಿಗೆ ಚಾಕುವಿನಿಂದ ಆರೋಪಿಯಾಗಿದ್ದಾನೆ.
Karnataka crime : ದೇವರಮನೆಗುಡ್ಡದಲ್ಲಿ ಬಂಟ್ವಾಳ ಮೂಲದ ಯುವಕನ ಶವ ಪತ್ತೆ
ಆರೋಪಿ ಮನೋಜ್ ಮೂರು ವರ್ಷಗಳ ಹಿಂದೆ ವರ್ಷಿತಾ ಎಂಬಾಕೆಯನ್ನ ಪ್ರೀತಿಸಿ ಮದ್ವೆಯಾಗಿದ್ದನು. ಬಳಿಕ ಗಂಡ ಕೆಲಸ ಮಾಡ್ತಿಲ್ಲ ಅಂತ ವರ್ಷಿತಾ ತವರು ಮನೆ ಸೇರಿದ್ದಳಂತೆ.
ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಮನೋಜ್ ಕರೆತರಲು ಹೋಗಿದ್ದ. ಈ ವೇಳೆ ಅತ್ತೆ ಮತ್ತು ಅಳಿಯನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಅತ್ತೆ ಗೀತಾಗೆ ಅಳಿಯ ಮನೋಜ್ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
