ಶಿವಾಜಿನಗರ ಕೊಲೆ ಕೇಸ್‌ಗೆ ಕಾರಣ ಸಿಕ್ತು, ತನಿಖೆ ವೇಳೆ ಮಹಿಳೆ ಜತೆಗಿನ ಲವ್ವಿ-ಡವ್ವಿ ಬಯಲು
ಇತ್ತೀಚೆಗೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಸಂತ್ಯಾಂಶ ಗೊತ್ತಾಗಿದೆ. ಈ ಕೊಲೆಗೆ ಕಾರಣ ಮಹಿಳೆ ಜೊತೆಗಿನ ಲವ್ವಿ-ಡವ್ವಿ ಎಂಬುವುದು ಬಯಲಾಗಿದೆ.
ಬೆಂಗಳೂರು, (ಜುಲೈ.19): ಮೊನ್ನೇ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಜವಾದ್ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಕೊಲೆಗೆ ಮಹಿಳೆ ಜೊತೆಗಿನ ಅಕ್ರಮ ಸಂಬಂಧವೇ ಕಾರಣ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಹೌದು..ಶಿವಾಜಿನಗರದಲ್ಲಿ ಜುಲೈ 17ರಂದು ನಡೆದ ಜವಾದ್ ಕೊಲೆ ಪ್ರಕರಣದ ತನಿಖೆ ವೇಳೆ ಮಹಿಳೆ ಜೊತೆಗಿನ ಅನೈತಿಕ ಸಂಬಂಧ ಬಟಾಬಯಲಾಗಿದೆ. ಜವಾದ್‌ನನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ . ಸಿಮ್ರಾನ್ ಎನ್ನುವ ಪತಿ ಜೀಷಾನ್ ಎಂಬ ಸತ್ಯ ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.
Crime News ; ಮಾಜಿ ಪ್ರೇಯಸಿ ಮನೆ ಬಳಿ ಗಲಾಟೆ ಮಾಡಿದ್ದವನ ಕೊಲೆ!
ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಕೊಲೆಯಾದ ಜವಾದ್, ಜೀಷಾನ್ ಪತ್ನಿ ಸಿಮ್ರಾನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಈ ಹಿಂದೆ ಇದೇ ವಿಚಾರಕ್ಕೆ ಗಲಾಟೆ ಸಹ ಆಗಿತ್ತು. ಈ ಬಗ್ಗೆ ಶಿವಾಜಿನಗರ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿತ್ತು.ಮಹಿಳೆಯ ಪತಿ ಜೀಷಾನ್ ಕೂಡ ಹಲವು ಬಾರಿ ಜವಾದ್ ಗೆ ವಾರ್ನಿಂಗ್ ಕೊಟ್ಟಿದ್ದ. ತನ್ನ ಹೆಂಡತಿಯ ತಂಟೆಗೆ ಬರಬೇಡ ಅಂತ ವಾರ್ನಿಂಗ್ ಕೊಟ್ಟಿದ್ದ. ಹೀಗಿದ್ದರೂ ಜವಾದ್ ಜೀಷಾನ್ ಮನೆಗೆ ಎಂಟ್ರಿ ಕೊಟ್ಟಿದ್ದ.
ಆದ್ರೆ, ಜುಲೈ 17ರ ಬೆಳಿಗ್ಗೆ 9:30 ರ ಸುಮಾರಿಗೆ ಶಾರ್ಪ್ ಆದ ಕತ್ತರಿ ಹಿಡಿದು ಹೋಗಿದ್ದ ಜವಾದ್, ಜೀಷಾನ್ ನನ್ನ ಕೊಲೆ ಮಾಡೋದಾಗಿ ಬೆದರಿಸಿದ್ದ. ಈ ವೇಳೆ ಜವಾದ್ ನ ಕೈಯಲ್ಲಿದ್ದ ಕತ್ತರಿಯನ್ನ ತೆಗೆದುಕೊಂಡು ಜೀಷಾನ್, ಜವಾದ್ ನ ಕತ್ತಿನ ಭಾಗಕ್ಕೆ ಇರಿದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಜವಾದ್ ತಾನೇ ಸ್ವತಃ ಎಚ್ ಬಿ ಎಸ್ ಆಸ್ಪತ್ರೆಗೆ ಓಡಿದ್ದ.
ಆದ್ರೆ, ಆಸ್ಪತ್ರೆ ಆವರಣದಲ್ಲೇ ತೀವ್ರ ರಕ್ತಸ್ರಾವದಿಂದ ಜವಾದ್ ಸಾವನ್ನಪ್ಪಿದ್ದ. ಇದೀಗ ಜೀಷಾನ್ ನನ್ನ ಬಂಧಿಸಿರುವ ಶಿವಾಜಿನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..