6 ಲಕ್ಷ ರೂಪಾಯಿ ಮೌಲ್ಯದ ಸೋಲಾರ್ ಪ್ಯಾನಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಇಬ್ಬರನ್ನು ಬಂದಿಸಲಾಗಿದೆ.

ಶಿವಮೊಗ್ಗ (ಫೆ.4) : 6 ಲಕ್ಷ ರೂಪಾಯಿ ಮೌಲ್ಯದ ಸೋಲಾರ್ ಪ್ಯಾನಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಇಬ್ಬರನ್ನು ಬಂದಿಸಲಾಗಿದೆ. ತೀರ್ಥಹಳ್ಳಿಯ ಗೃಹಸಚಿವ ಆರಗ ಜ್ಞಾನೇಂದ್ರ ಅವರ ವಿಧಾನಸಭಾ ಕ್ಷೇತ್ರವಾದ ಉಂಬೈಬೈಲ್ ಗ್ರಾಪಂ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಸುಮಾರು 6 ಲಕ್ಷ ರೂ. ಮೌಲ್ಯದ ಸೋಲಾರ್ ಪ್ಯಾನೆಲ್ ಪ್ಲೇಟ್‌ಗಳ ಕಳವು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಗ್ರಾಪಂ ಕಂಪ್ಯೂಟರ್ ಆಪರೇಟರ್ ಗಳೇ ಕಳುವು ಮಾಡಿರುವ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆ ತುಂಗಾನಗರ ಠಾಣೆ ಪೊಲೀಸರು ಗ್ರಾಪಂ ಸಿಬ್ಬಂದಿಯನ್ನು ಬಂಧಿಸಿದ್ದಾರೆ. 

Add Asianetnews Kannada as a Preferred SourcegooglePreferred

ಉಂಬೈಬೈಲ್‌ನ ಮಧು ಮತ್ತು ಧನು ಬಂಧಿತ ಆರೋಪಿಗಳು. ಮಧು ಅದೇ ಗ್ರಾಪಂ ಪಿಡಿಒ ಕಚೇರಿಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿದ್ದ. 2018-19ನೇ ಸಾಲಿನಲ್ಲಿ ಉಂಬ್ಳೆಬೈಲು ಗ್ರಾಪಂನ ಕಣಗಲಸರ ಗ್ರಾಮದ ಚಿಕ್ಕೆರೆ ಕೆರೆ ಹತ್ತಿರ 6 ಲಕ್ಷ ರೂ. ಮೌಲ್ಯದ ಸೋಲಾರ‌ ಪ್ಯಾನೆಲ್ ಪ್ಲೇಟ್‌ಗಳನ್ನು ಅಳವಡಿಸಿದ್ದು 2022 ಸೆಪ್ಟೆಂಬರ್‌ನಲ್ಲಿ ಕಳವು ಮಾಡಲಾಗಿತ್ತು. 

ಪಿಡಿಒ ಎಂ.ಅಮಿತ್‌ರಾಜ್ 2022ರ ಸೆ.13ರಂದು ತುಂಗಾನಗರ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿದ್ದು, ತುಂಗಾನಗರ ಪೊಲೀಸರು ಉಂಬೈಬೈಲ್‌ನ ಧನು ಎಂಬಾತನನ್ನು ಬಂಧಿಸಿದ್ದರು. ಆ ಬಳಿಕ ಮಧು ನಾಪತ್ತೆಯಾಗಿದ್ದು ನಂತರ ತಾನಾಗಿಯೇ ಠಾಣೆಗೆ ಬಂದು ಶರಣಾಗಿದ್ದಾನೆ. 

ಕಾರು ಕಳವು ಪ್ರಕರಣ: ಮತ್ತಿಬ್ಬರ ಬಂಧನ, 3 ಲಕ್ಷ ಮೌಲ್ಯದ ಸ್ವತ್ತು ವಶ

ಇದೀಗ ತುಂಗಾನಗರ ಠಾಣೆಯ ಪೊಲೀಸರು ಕಳುವು ಪ್ರಕರಣದ ಹಿಂದಿರುವ ಸತ್ಯಾಂಶವನ್ನು ತನಿಖೆಯ ಮೂಲಕ ಬಯಲು ಮಾಡಬೇಕಾಗಿದೆ