* ಸಿಕ್ಸ್ ಪ್ಯಾಕ್ ಮಾಡಿಸ್ತೀನಿ ಅಂತ ಯುವಕನಿಗೆ ದೋಖಾ*  ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೆರೆಹಳ್ಳಿಯಲ್ಲಿ ಘಟನೆ*  ಹೊಸಕೆರೆಹಳ್ಳಿಯ ಕೌಶಿಕ್ ಎಂಬ  ಯುವಕ ಸಿಕ್ಸ್ ಪ್ಯಾಕ್ ಮಾಡಲು ಇಚ್ಛಿಸಿದ್ದ* ಅದಕ್ಕಾಗಿ ಬನಶಂಕರಿ ಮೂರನೇ ಹಂತದ ಮೋಹನ್ ಎಂಬ ಜಿಮ್ ಟ್ರೈನರ್ ಸಂಪರ್ಕಿಸಿದ್ದ

ಬೆಂಗಳೂರು( ಜೂ. 29) ಸಿಕ್ಸ್ ಪ್ಯಾಕ್ ಮಾಡಿಸ್ತೀನಿ ಅಂತ ಯುವಕನಿಗೆ ದೋಖಾ ಮಾಡಿಎರುವ ಪ್ರಕರಣ ಬೆಳಕಿಗೆ ಬಂದಿದೆ. ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೆರೆಹಳ್ಳಿಯಿಂದ ಪ್ರಕರಣ ವರದಿಯಾಗಿದೆ.

ಹೊಸಕೆರೆಹಳ್ಳಿಯ ಕೌಶಿಕ್ ಎಂಬ ಯುವಕ ಸಿಕ್ಸ್ ಪ್ಯಾಕ್ ಮಾಡಲು ಇಚ್ಛಿಸಿದ್ದ. ಅದಕ್ಕಾಗಿ ಬನಶಂಕರಿ ಮೂರನೇ ಹಂತದ ಮೋಹನ್ ಎಂಬ ಜಿಮ್ ಟ್ರೈನರ್ ಸಂಪರ್ಕಿಸಿದ್ದ. ಬನಶಂಕರಿಯಲ್ಲಿ ಎಂಪವರ್ ಹೆಸರಿನಲ್ಲಿ ಜಿಮ್ ನಡೆಸ್ತಿರೋ ಮೋಹನ್ ಸಿಕ್ಸ್ ಪ್ಯಾಕ್ ಮಾಡಿರೋ ಪೊಟೋಗಳನ್ನ ಕೌಶಿಕ್ ಗೆ ತೋರಿಸಿ ಮೂರೇ ತಿಂಗಳಲ್ಲಿ ನಿನಗೂ ಸಿಕ್ಸ್ ಪ್ಯಾಕ್ ಮಾಡಿಸ್ತೀನಿ ಎಂದು ನಂಬಿಸಿದ್ದಾನೆ.

ಸಿಕ್ಸ್ ಪ್ಯಾಕ್ ಮತ್ತು ಡಯಟ್ ಮರ್ಮ

ಮೊದಲೆರಡು ಹಂತಗಳಲ್ಲಿ ಕೌಶಿಕ್ ನಿಂದ ಎರಡು ಲಕ್ಷ ಹಣ ಪಡೆದ ಜಿಮ್ ಟ್ರೈನರ್ ಮೋಹನ್ ನಂತರ ಬ್ಯಾಂಕ್ ನಿಂದ ಐದು ಲಕ್ಷ ಹಣ ಕೊಡಿಸು ಇಎಂಐ ನಾನೇ ಕಟ್ಟುತ್ತೇನೆ ಎಂದು ನಂಬಿಸಿದ್ದಾನೆ. ಜಿಮ್ ಟ್ರೈನರ್ ಗೆ ತನ್ನ ಅಕೌಂಟ್ ನಿಂದ ಐದು ಲಕ್ಷ ಸಾಲವನ್ನು ಕೌಶಿಕ್ ಕೊಡಿಸಿದ್ದಾರೆ.

ನಂತರ ಸಿಕ್ಸ್ ಪ್ಯಾಕ್ ಮಾಡಿಸದೇ ಲೋನ್ ನ ಇಎಂಐ ಕಟ್ಟದೇ ಕೌಶಿಕ್ ಗೆ ಜಿಮ್ ಟ್ರೈನರ್ ಅವಾಜ್ ಹಾಕಲು ಆರಂಭಿಸಿದ್ದಾನೆ ಮೋಸಹೋದ ಯುವಕ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಫ್ಐಆರ್ ದಾಖಲಾಗ್ತಾ ಇದ್ದಂತೆ ಜಿಮ್ ಟ್ರೈನರ್ ಮೋಹನ್ ಎಸ್ಕೇಪ್ ಆಗಿದ್ದಾನೆ.