ಬೆಂಗಳೂರು, (ಡಿ.18): ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಸಿಕ್ಕ-ಸಿಕ್ಕ ಕಡೆಗಳಲ್ಲಿ ಹಣ ಕೀಳುತ್ತಿದ್ದವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ತ್ಯಾಗರಾಜನಗರದ ಭರತ್ ಬಂಧಿತ ನಕಲಿ ಐಪಿಎಸ್ ಅಧಿಕಾರಿ.  ಭೀಮ್ ಚಂದ್ ಎಂಬುವವರಿಗೆ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟು ಈಗ ಬೆಂಗಳೂರಿನ ಸಿದ್ದಾಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 

PSI ಹುದ್ದೆ ಕೊಡಿಸ್ತೀನಿ ಎಂದು 31 ಲಕ್ಷ ರೂಪಾಯಿಗೂ ಹೆಚ್ಚು ವಂಚನೆ

ಚಿಕ್ಕಪೇಟೆ, ಎಸ್.ಪಿ ರೋಡ್ ಮಾರ್ವಾಡಿಗಳೆ ಇವನ ಟಾರ್ಗೆಟ್ ಆಗಿದ್ದರು. ಹಣ ಕೊಡಬೇಕು ಇಲ್ಲ ಬೆಟ್ಟಿಂಗ್ ಕೇಸ್ ನಲ್ಲಿ ಅರೆಸ್ಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ.

ಸಿದ್ದಾಪುರ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ನಕಲಿ ಐಪಿಎಸ್ ಅಧಿಕಾರಿ ಭರತ್ ಸಿಕ್ಕಿಬಿದ್ದಿದ್ದಾನೆ. ಅಧಿಕಾರಿಗಳ ಹೆಸರು ಹೇಳಿಕೊಂಡು ನಿಮ್ಮನ್ನೂ ಕಾಡಬಹುದು. ಯಾವುದಕ್ಕೂ ಹುಷಾರ್ ಆಗಿರುವುದು ಒಳ್ಳೆಯದು.