*  ಸಿಐಡಿ ಆರೋಪಪಟ್ಟಿಯಲ್ಲಿ ಉಲ್ಲೇಖ*  500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ*  18 ಮಂದಿ ವಿರುದ್ಧ ಚಾರ್ಜ್‌ಶೀಟ್‌ 

ಬೆಂಗಳೂರು(ಡಿ.17): ಇತ್ತೀಚಿಗೆ ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬಿಟ್‌ಕಾಯಿನ್‌(Bitcoin) ವಿವಾದದ ಕೇಂದ್ರ ಬಿಂದು ಎನ್ನಲಾದ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್‌ ಶ್ರೀಕಷ್ಣ ಅಲಿಯಾಸ್‌ ಶ್ರೀಕಿ(Shreeki) ವಿರುದ್ಧ ರಾಜ್ಯ ಸರ್ಕಾರದ(Government of Karnataka) ಇ ಪ್ರಕ್ಯೂರ್‌ಮೆಂಟ್‌ ವೆಬ್‌ಸೈಟ್‌ ಹ್ಯಾಕ್‌ ಮಾಡಿ 11 ಕೋಟಿ ದೋಚಿರುವುದು ಸಿಐಡಿ(CID) ತನಿಖೆಯಲ್ಲಿ ರುಜುವಾತಾಗಿದೆ. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ), ನಗರದ ಸಿಐಡಿ ವಿಶೇಷ ನ್ಯಾಯಾಲಯಕ್ಕೆ(Court) ಶ್ರೀಕಿ ಸೇರಿದಂತೆ 18 ಮಂದಿ ಆರೋಪಿಗಳ(Accused) ವಿರುದ್ಧ ಸೋಮವಾರ 500 ಪುಟಗಳ ದೋಷಾರೋಪ ಪಟ್ಟಿಸಲ್ಲಿಸಿದೆ. ಇದರಲ್ಲಿ ವರ್ಗಾವಣೆ ಸಂಬಂಧಪಟ್ಟಂತೆ ಬ್ಯಾಂಕ್‌ದಾಖಲೆ ಹಾಗೂ ತಾಂತ್ರಿಕ ಪುರಾವೆ ಲಗತ್ತಿಸಲಾಗಿದೆ.

2019ರಲ್ಲಿ ರಾಜ್ಯ ಸರ್ಕಾರದ ಇ ಪ್ರಕ್ಯೂರ್‌ಮೆಂಟ್‌ವೆಬ್‌ಸೈಟ್‌ನ್ನು(Website) ಹ್ಯಾಕ್‌(Hack) ಆಗಿ 11 ಕೋಟಿ ಕಳ್ಳತನವಾಗಿತ್ತು. ಈ ಬಗ್ಗೆ ಸಿಐಡಿ ಸೈಬರ್‌ಕ್ರೈಂ ಪೊಲೀಸ್‌ಠಾಣೆಯಲ್ಲಿ ಇ ಪ್ರಕ್ಯೂರ್‌ಮೆಂಟ್‌(E Procurement) ಅಧಿಕಾರಿಗಳು ದೂರು(Complaint) ದಾಖಲಿಸಿದ್ದರು. ಅದರಂತೆ ತನಿಖೆ ನಡೆಸುತ್ತಿದ್ದ ಸಿಐಡಿ ಪೊಲೀಸರು, ಕೃತ್ಯದಲ್ಲಿ ಶ್ರೀಕಿ ಕೈವಾಡ ಬಗ್ಗೆ ಶಂಕೆ ವ್ಯಕ್ತಡಿಸಿದ್ದರು. ಆದರೆ ಅಷ್ಟರಲ್ಲಿ ಡ್ರಗ್ಸ್‌ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಆತ ಸಿಕ್ಕಿಬಿದ್ದಿದ್ದ. ಬಳಿಕ ವಿಚಾರಣೆ ವೇಳೆ ಇ ಪ್ರಕ್ಯೂರ್‌ಮೆಂಟ್‌ ವೆಬ್‌ಸೈಟ್‌ ಮಾತ್ರವಲ್ಲದೆ 3 ಬಿಟ್‌ಕಾಯಿನ್‌ ಎಕ್ಸ್‌ಚೆಂಜ್‌ ಏಜೆನ್ಸಿಗಳು, 10 ಪೋಕರ್‌ ವೆಬ್‌ಸೈಟ್‌ಗಳು ಮತ್ತು 3 ಮಾಲ್‌ವೇರ್‌ ಎಕ್ಸ್‌ಪ್ಲೋಟೆಡ್‌ ಅನ್ನು ಶ್ರೀಕಿ ಹ್ಯಾಕ್‌ ಮಾಡಿದ್ದು ಬೆಳಕಿಗೆ ಬಂದಿತ್ತು. ಸಿಸಿಬಿ ತನಿಖೆ ಬಳಿಕ ಶ್ರೀಕಿಯನ್ನು ವಶಕ್ಕೆ ಪಡೆದ ಸಿಐಡಿ, ಇ ಪ್ರಕ್ಯೂರ್‌ಮೆಂಟ್‌ ವೆಬ್‌ಸೈಟ್‌ಹ್ಯಾಕ್‌ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Bitcoin Scam| ಶ್ರೀಕಿಯನ್ನ ಅರೆಸ್ಟ್‌ ಮಾಡಿದ್ದು ಬಿಜೆಪಿ ಸರ್ಕಾರ: ಆರಗ ಜ್ಞಾನೇಂದ್ರ

ಆಸ್ತಿ ಜಪ್ತಿ ಮಾಡಿಸಿದ್ದ ಸಿಐಡಿ:

ರಾಜ್ಯ ಸರ್ಕಾರದ ಇ ಪ್ರಕ್ಯೂರ್‌ಮೆಂಟ್‌ ವೆಬ್‌ಸೈಟ್‌ ಹ್ಯಾಕ್‌ ಮಾಡಿದ್ದ ದೋಚಿದ್ದ ಹಣವನ್ನು ಶ್ರೀಕಿ, ಮಹಾರಾಷ್ಟ್ರದ ನಾಗ್ಪುರ ಮೂಲದ ಸ್ವಯಂ ಸೇವಾ ಸಂಸ್ಥೆಗಳಾದ ಉದಯ್‌ ಗ್ರಾಮ ವಿಕಾಶ್‌ಸಂಸ್ಥೆ ಹಾಗೂ ಉತ್ತರ ಪ್ರದೇಶದ ನಿಮ್ಮಿ ಎಂಟರ್‌ಪ್ರೆಸಸ್‌ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿದ್ದ. ಆನಂತರ ಆ ಎರಡು ಸಂಸ್ಥೆಗಳಿಂದ ತನ್ನ ಪರಿಚಿತರ ಬ್ಯಾಂಕ್‌ ಖಾತೆಗಳಿಗೆ ಶ್ರೀಕಿ ಹಣ ವರ್ಗಾಯಿಸಿಕೊಂಡು ಮೋಜು ಮಸ್ತಿ ಮಾಡಿದ್ದ. ತರುವಾಯ ಸಿಐಡಿ ವರದಿ ಆಧರಿಸಿ ಶ್ರೀಕಿಗೆ ನೆರವು ನೀಡಿದ್ದ ಆ ಎರಡು ಎನ್‌ಜಿಓಗಳಿಗೆ ಸೇರಿದ 1.44 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

18 ಮಂದಿ ವಿರುದ್ಧ ಚಾರ್ಜ್‌ಶೀಟ್‌

ಇ ಪ್ರಕ್ಯೂರ್‌ಮೆಂಟ್‌ ಪ್ರಕರಣದಲ್ಲಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಮೊದಲನೇ ಆರೋಪಿ ಆಗಿದ್ದು, ಆತನ ಸ್ನೇಹಿತರಾದ ಸುನೀಶ್‌ಹೆಗ್ಡೆ, ಹೇಮಂತ್‌ ಮುದ್ದಪ್ಪ, ಪ್ರಸಿದ್ಧ ಶೆಟ್ಟಿಸೇರಿದಂತೆ 18 ಮಂದಿ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ(Chargesheet) ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾಗಿದ್ದ ಹ್ಯಾಕರ್‌ ಶ್ರೀಕಿ ಪೊಲೀಸರ ಮುಂದೆ ಪ್ರತ್ಯಕ್ಷ

ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ(International Hacker Shreeki) ಭಾನುವಾರ ದಿಢೀರನೇ ಜೀವನ್‌ಭೀಮಾ ನಗರ ಪೊಲೀಸರ(Police) ಮುಂದೆ ಪ್ರತ್ಯಕ್ಷನಾಗಿದ್ದಾನೆ. ಆ ವೇಳೆ, ನಾನು ಎಲ್ಲಿಯೂ ಓಡಿ ಹೋಗಿಲ್ಲ. ಬೆಂಗಳೂರಿನಲ್ಲೇ(Bengaluru) ನನ್ನ ಮನೆಯಲ್ಲೇ ಇದ್ದೇನೆ. ನನಗೆ ಪ್ರಚಾರದ ಅವಶ್ಯಕತೆ ಇಲ್ಲ. ನ್ಯಾಯಾಲಯದ(Court) ಸೂಚನೆಯಂತೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ಠಾಣೆಗೆ ಬಂದು ಸಹಿ ಮಾಡುತ್ತೇನೆ ಎಂದು ಪೊಲೀಸರಿಗೆ ಶ್ರೀಕಿ ಸ್ಪಷ್ಟನೆ ಕೊಟ್ಟಿದ್ದಾನೆ ಎನ್ನಲಾಗಿದೆ.