Shivamogga :ಪೊಲೀಸರು ಹಲ್ಲೆ ಮಾಡಿದ್ದಕ್ಕಾಗಿ ವಿಷ ಸೇವಿಸಿದ ಯುವಕ
ಪೊಲೀಸರಿಂದ ಹಲ್ಲೆಯಾಗಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಶಿವಮೊಗ್ಗದ ಶಿಕಾರಿಪುರದ ಅರಶಿಣಗೆರೆ ಗ್ರಾಮದಲ್ಲಿ ನಡೆದಿದೆ. ಇನ್ನು ಆತ್ಮಹತ್ಯೆಗೆ ಯತ್ನಿಸಿದ ಯುವಕನ್ನು ಸಚಿನ್ (24) ಎಂದು ಗುರುತಿಸಲಾಗಿದೆ.
ಶಿವಮೊಗ್ಗ (ಜ.28): ಕಳ್ಳಕಾಕರು, ಅಪರಾಧಿಗಳು, ತಪ್ಪಿತಸ್ಥರು, ಪುಂಡ, ಪೋಕರಿಗಳು ಹಾಗೂ ರೌಡಿ ಶೀಟರ್‌ಗಳು ಸೇರಿ ಹಲವರ ಮೇಲೆ ಪೊಲೀಸರು ಹಲ್ಲೆ ಮಾಡಿದರೆ ಅದನ್ನು ಮರುಕ್ಷಣವೇ ಮರೆತುಬಿಡುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಪೊಲೀಸರು ತನಗೆ ಹಲ್ಲೆ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹೌದು, ಪೊಲೀಸರಿಂದ ಹಲ್ಲೆಯಾಗಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಶಿವಮೊಗ್ಗದ ಶಿಕಾರಿಪುರದ ಅರಶಿಣಗೆರೆ ಗ್ರಾಮದಲ್ಲಿ ನಡೆದಿದೆ. ಇನ್ನು ಆತ್ಮಹತ್ಯೆಗೆ ಯತ್ನಿಸಿದ ಯುವಕನ್ನು ಸಚಿನ್ (24) ಎಂದು ಗುರುತಿಸಲಾಗಿದೆ. ಮನೆಯಲ್ಲಿ ವಿಷ ಸೇವನೆ ಮಾಡಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯುವಕನೂ ಭಾಗಿಯಾಗಿದ್ದನು. ಈ ವೇಳೆ ಪೊಲೀಸರು ಯುವಕನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
Haunted Place: ಅಬ್ಬಾ..ಆ ಕಟ್ಟಡದೊಳಗೆ ಹೋದವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ತಾರಂತೆ!
ಊರಿನವರ ಮುಂದೆ ಅವಮಾನ: ಅರಶಿಣಗೆರೆ ಗ್ರಾಮದ ಜನರ ಮುಂದೆ ಪೊಲೀಸರು ಯುವಕನಿಗೆ ಹಲ್ಲೆ ಮಾಡಿ ಅವಮಾನ ಮಾಡಿದ್ದಾರೆ. ಇದನ್ನು ಸಹಿಸದೆ ಯುವಕ ಸಚಿನ್ ವಿಷ ಸೇವನೆ ಮಾಡಿದ ಎನ್ನಲಾಗಿದೆ. ತಕ್ಷಣ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಪೋಷಕರು ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಸಚಿನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಕೋಲಾರ (ಜ.28) : ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ಸಾಲ ಕೊಡಿಸಲು ಮಧ್ಯೆಸ್ತಿಕೆ ವಹಿಸಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅತ್ತಿಗಿರಿಕೊಪ್ಪ(attigirikoppa) ಗ್ರಾಮದ 36 ವರ್ಷದ ಮೃತ ಮಹಿಳೆ ಪದ್ಮ(Padma) ಎಂಬುವವರು ತನ್ನ ಸ್ನೇಹಿತೆ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ನಿವಾಸಿ ವರಲಕ್ಷ್ಮಿ ಎಂಬುವವರಿಂದ ಅತ್ತಿಗಿರಿಕೊಪ್ಪ ಗ್ರಾಮದ ಭಾಗ್ಯ, ಹಾಗೂ ಸಮ್ರತಿ ಹಾಗೂ ಕಮ್ಮಸಂದ್ರ ಗ್ರಾಮದ ಪ್ರೇಮ ಎಂಬುವವರಿಗೆ ತಲಾ 1 ಲಕ್ಷ ರೂ. ಸಾಲವನ್ನು ಕೊಡಿಸಲು ಮಧ್ಯಸ್ತಿಕೆ ವಹಿಸಿದ್ದರು.
ಸಾಲದ ಬಡ್ಡಿಯನ್ನೂ ಕಟ್ಟದೆ ಪರದಾಟ: ಮೃತ ಪದ್ಮರವರು ಸಾಲ ಪಡೆದವರನ್ನು ಸಾಕಸ್ಟು ಬಾರಿ ಸಾಲವನ್ನು ಹಿಂತಿರುಗಿಸುವಂತೆ ಮನವಿ ಮಾಡಿದರು ಸಹ ಪ್ರಯೋಜನವಾಗಿಲ್ಲ. ಇದರ ನಡುವೆ ಸಾಲದ ಬಡ್ಡಿ ಸಹ ಕಟ್ಟದೆ ಆಟವಾಡಿಸುತ್ತಿದಕ್ಕೆ ಕೋಪಗೊಂಡ ವರಲಕ್ಷ್ಮೀ ಅವರು ಮೃತ ಪದ್ಮಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ವರಲಕ್ಷ್ಮಿಯನ್ನು ಅತ್ತಿಗಿರಿಕೊಪ್ಪ ಗ್ರಾಮದ ಭಾಗ್ಯ ಹಾಗೂ ಚಂಬರಸಿ ರವರ ಮನೆ ಬಳಿ ಕರೆದುಕೊಂಡು ಹೋಗಿ ಕೊಟ್ಟಿರುವ ಸಾಲವನ್ನು ಹಿಂದುರಿಗಿಸುವಂತೆ ಕೇಳಿದ್ದಾರೆ.
ಉಡುಪಿ: ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೋರ್ವ ಕಾರಿನೊಳಗೆ ಆತ್ಮಹತ್ಯೆ
ಅದೇನ್ ಮಾಡ್ತೀಯೋ ಮಾಡ್ಕೋ: ಆದರೆ ಸಾಲ ಪಡೆದ ಭಾಗ್ಯ ಹಾಗೂ ಸಮ್ರತಿ ಹಾಗೂ ಪ್ರೇಮ ಅವರು ಬೇಜವಾಬ್ದಾರಿಯುತ ನಡವಳಿಕೆ ತೋರಿ ಸಾಲದ ಹಣ ಹಿಂತಿರುಗಿಸುವುದಿಲ್ಲ "ಅದೇನ್ ಮಾಡ್ತೀಯೋ ಮಾಡ್ಕೋ" ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಮತ್ತಷ್ಟು ತೀವ್ರವಾಗಿ ಮನನೊಂದ ಪದ್ಮರವರು ಮನೆಗೆ ಬಂದು ನನ್ನ ಸಾವಿಗೆ ಅತ್ತಿಗಿರಿಕೊಪ್ಪದ ಗ್ರಾಮದ ಭಾಗ್ಯ, ಸಮ್ರತಿ ಹಾಗೂ ಪ್ರೇಮ ಕಾರಣವೆಂದು ಮೂವರು ಹೆಸರನ್ನು ಸೆಲ್ಫಿ ವಿಡಿಯೋ ಚಿತ್ರಿಕರಿಸಿ ಹೇಳುವ ಮೂಲಕ,ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವಿಷಯ ಮನೆ ಮಕ್ಕಳಿಗೆ ತಿಳಿದು ಅಕ್ಕಪಕ್ಕದವರ ಸಹಾಯದೊಂದಿಗೆ ಜಾಲಪ್ಪ ಆಸ್ಪತ್ರೆ (Jalappa hospital)ಗೆ ದಾಖಲಿಸಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಪದ್ಮರವರು ಮೃತಪಟ್ಟಿದ್ದಾರೆ.